ಲಸಿಕಾ ಅಭಿಯಾನ: ಅಕ್ಟೋಬರ್​ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ತವಕದಲ್ಲಿ ದೇಶದ ಆರೋಗ್ಯ ಕಾರ್ಯಕರ್ತರು!

ಅಕ್ಟೋಬರ್ ಅಂದರೆ ಬರುವ ತಿಂಗಳು 7ನೇ ತಾರೀಖು ಪ್ರಧಾನಿ ಮೋದಿಯವರು ಪ್ರಜಾತಾಂತ್ರಿಕ ವ್ಯವಸ್ಥೆ ಅಡಿಯಲ್ಲಿ ಎರಡು ಚುನಾಯಿತ ಸರ್ಕಾರಗಳ ಮುಖ್ಯಸ್ಥನಾಗಿ (ಗುಜರಾತಿನ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿ) 20 ವರ್ಷಗಳನ್ನು ಪೂರ್ತಿಗೊಳಿಸಲಿದ್ದಾರೆ.

130 ಕೋಟಿಗೂ ಹೆಚ್ಚಿನ ಜನಸಂಖ್ಯೆಯ ಭಾರತದಲ್ಲಿ ಎಲ್ಲರಿಗೂ ಕೊವಿಡ್-19 ಲಸಿಕೆ ಹಾಕಿಸುವುದು ಒಂದು ಅಗಾಧವಾದ ಯೋಜನೆ ಮತ್ತು ಕೆಲಸ. ಯಾವ ಕೋನದಿಂದ ಯೋಚಿಸಿದರೂ ಸುಲಭವೆನಿಸದ ಕಾರ್ಯಕ್ರಮವಿದು. ಆದರೆ, ದೇಶದ ಎಲ್ಲ ರಾಜ್ಯಗಳು ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ತಮ್ಮ ತಮ್ಮ ರಾಜ್ಯಗಳ ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆ ಹಾಕಿಸುವ ಗುರಿಯಲ್ಲಿ ತಲ್ಲೀನವಾಗಿವೆ. ಸೆಪ್ಟೆಂಬರ್ 17 ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 71ನೇ ಜನ್ಮ ದಿನ ಆಚರಿಸಿಕೊಂಡರು. ಅವರಿಗೆ, ಹುಟ್ಟುಹಬ್ಬದಂದು ಲಸಿಕಾ ಅಭಿಯಾನದಷ್ಟೇ ಅಗಾಧವಾದ ಉಡುಗೊರೆಯನ್ನು ನೀಡಲು ನಿಶ್ಚಯಿಸಿಕೊಂಡ ಎಲ್ಲ ರಾಜ್ಯಗಳ ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳು ಅಂದು ಎರಡೂವರೆ ಕೋಟಿ ಭಾರತೀಯರಿಗೆ ಲಸಿಕೆ ನೀಡುವ ಮೂಲಕ ಪ್ರಧಾನಿಗಳು ಅತೀವ ಸಂತೋಷಪಡುವಷ್ಟು ದೊಡ್ಡದಾದ ಗಿಫ್ಟ್ ನೀಡಿದ್ದೂ ಅಲ್ಲದೆ ಹೊಸ ದಾಖಲೆಯನ್ನೂ ನಿರ್ಮಿಸಿದರು.

ಓಕೆ, ಕೊವಿಡ್-19 ಲಸಿಕಾ ಅಭಿಯಾನದಲ್ಲಿ ಇದೊಂದು ಮೈಲಿಗಲ್ಲಾದರೆ ಇದಕ್ಕೂ ದೊಡ್ಡದಾದ ಮೈಲಿಗಲ್ಲನ್ನು ಸ್ಥಾಪಿಸಲು ಭಾರತದ ಆರೋಗ್ಯ ವ್ಯವಸ್ಥೆ ಅಣಿಯಾಗುತ್ತಿದೆ. ಅಕ್ಟೋಬರ್ ಅಂದರೆ ಬರುವ ತಿಂಗಳು 7ನೇ ತಾರೀಖು ಪ್ರಧಾನಿ ಮೋದಿಯವರು ಪ್ರಜಾತಾಂತ್ರಿಕ ವ್ಯವಸ್ಥೆ ಅಡಿಯಲ್ಲಿ ಎರಡು ಚುನಾಯಿತ ಸರ್ಕಾರಗಳ ಮುಖ್ಯಸ್ಥನಾಗಿ (ಗುಜರಾತಿನ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿ) 20 ವರ್ಷಗಳನ್ನು ಪೂರ್ತಿಗೊಳಿಸಲಿದ್ದಾರೆ.

ಈ ಸಂದರ್ಭದಲ್ಲಿ 100 ಕೋಟಿ ಜನರಿಗೆ ಲಸಿಕೆ ನೀಡಿದ ದಾಖಲೆ ನಿರ್ಮಿಸಲು ಕಾರ್ಯಕರ್ತರು ಅಣಿಯಾಗುತ್ತಿದ್ದಾರೆ! ನಿಸ್ಸಂದೇಹವಾಗಿ ಇದು ಪ್ರಧಾನಿ ಮೋದಿಯವರಿಗೆ ಮೊದನೆಯದಕ್ಕಿಂತಲೂ ದೊಡ್ಡ ಉಡುಗೊರೆಯಾಗಲಿದೆ.

ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಸೋಮವಾರ ಸಾಯಂಕಾಲದವರೆಗೆ 80 ಕೋಟಿಗಿಂತಲೂ ಹೆಚ್ಚು ಭಾರತೀಯರಿಗೆ ಲಸಿಕೆ ನೀಡಲಾಗಿದೆ. 100-ಕೋಟಿ ಮಾರ್ಕ್ ದಾಟಬೇಕಾದರೆ ಇನ್ನೂ 20-ಕೋಟಿ ಜನರಿಗೆ ಲಸಿಕೆ ಹಾಕಬೇಕು. ಈಗ ಸಮಸ್ಯೆ ಏನಾಗುತ್ತಿದೆ ಅಂದರೆ, ಇನ್ನೂ ಲಸಿಕೆ ಹಾಕಿಸಿಕೊಳ್ಳದವರನ್ನು ಹುಡುಕಿಕೊಡು ಹೋಗಬೇಕಿದೆ. ತಮಗೆ ಲಸಿಕೆ ಬೇಕಿಲ್ಲ ಅಂತ ಹಟ ಹಿಡಿದಿರುವವರ ಸಂಖ್ಯೆಯೇನೂ ಕಮ್ಮಿಯಿಲ್ಲ.

ಇಲ್ಲಿಯವರೆಗೆ ಜನ ಸ್ವ-ಇಚ್ಛೆಯಿಂದ ತಮಗೆ ಹತ್ತಿರದ ಲಸಿಕಾ ಕೇಂದ್ರಕ್ಕೆ ಹೋಗಿ ಅದನ್ನು ಹಾಕಿಸಿಕೊಳ್ಳುತ್ತಿದ್ದರು. ಹಾಗಾಗಿ ಅಭಿಯಾನದ ವೇಗ ಕೊಂಚ ಕುಂಠಿತಗೊಳ್ಳಬಹುದು.

ಇದನ್ನೂ ಓದಿ:  ವೃದ್ಧಾಪ್ಯ ವೇತನ ಬಂದಿಲ್ಲವೆಂದು ಅಜ್ಜಿಯ ಅಳಲು, ತಹಶೀಲ್ದಾರ್​ಗೆ ವಿಡಿಯೋ ಕಾಲ್ ಮಾಡಿ ನೆರವಿಗೆ ಬಂದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ

Click on your DTH Provider to Add TV9 Kannada