ಬೆಂಗಳೂರಿನಲ್ಲಿ ಓದಿ ಬೆಳೆದ ನಿತ್ಯಾ ಮೆನನ್ ಕನ್ನಡಕ್ಕಿಂತ ದಕ್ಷಿಣದ ಬೇರೆ ಭಾಷೆ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ!
8 ನೇ ವಯಸ್ಸಿನಲ್ಲೇ ಬೆಳ್ಳಿತೆರೆ (ಹಿಂದಿ ಚಿತ್ರ) ಮೇಲೆ ಕಾಣಿಸಿಕೊಂಡ ಖ್ಯಾತಿ ನಿತ್ಯಾ ಅವರದ್ದು. ಪೂರ್ಣ ಪ್ರಮಾಣದ ನಾಯಕಿಯಾಗಿ ಸಿನಿಮಾಗೆ ಎಂಟ್ರಿಯಾಗಿದ್ದು 17 ನೇ ವಯಸ್ಸಿನಲ್ಲಿ, ಅಲ್ಲಿಂದ ಈಚೆಗೆ ಆಕೆ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಅದೆಷ್ಟು ಸಿನಿಮಾ ತಾರೆಯರನ್ನು, ಮಾಡಲ್ಗಳನ್ನು ಕೊಟ್ಟಿದೆ ಅನ್ನೋದು ಲೆಕ್ಕವಿಲ್ಲ ಕಣ್ರೀ. ಒಬ್ಬಿಬ್ಬರಾದರೆ ಹೆಸರು ಉಲ್ಲೇಖಿಸಬಹುದು. ಆದರೆ ಕಾಲೇಜಿನಿಂದ ಹೊರಬಿದ್ದು ಸೆಲೆಬ್ರಿಟಿಗಳಾದವರು ರಾಶಿ ರಾಶಿ ಸುಂದರಿಯರು. ಅವರೆಲ್ಲ ಚೆಲುವಿನ ಒಡತಿಯರು, ಆಕರ್ಷಕ ಮೈಕಟ್ಟಿನವರು ಮತ್ತು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಮಾಡಿದ ವ್ಯಾಸಂಗದ ಮೂಲಕ ಅಪಾರ ಬುದ್ಧಿವಂತಿಕೆಯನ್ನು ಸಂಪಾದಿಸಿಕೊಂಡವರು. ಈ ವಿಡಿಯೋನಲ್ಲಿ ಕಾಣಿಸ್ತಾ ಇದ್ದಾರಲ್ಲ ನಿತ್ಯಾ ಮೆನನ್-ಅವರು ಸಹ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಡಕ್ಟ್. ಗುಂಡು ಗುಂಡಗೆ, ಹೆಚ್ಚಿನಿಸುವಷ್ಟು ತೂಕದ ನಿತ್ಯಾ ಅವರ ರೂಪದ ಪ್ರಮುಖ ಆಕರ್ಷಣೆ ಎಂದರೆ ನಗು ಮತ್ತು ಮುಗುಳು ನಗು. ಅವರ ನಗೆಗೆ ಸೂಜಿಗಲ್ಲಿನಂಥ ಸೆಳೆಯುವ ಶಕ್ತಿಯಿದೆ. ನಿತ್ಯಾ, ಹಾಗೆಯೇ ಸುಮ್ಮನೆ ನೋಡುತ್ತಾ ಆಸ್ವಾದಿಸುವ ಮತ್ತು ಆರಾಧಿಸುವಂಥ ಲಾವಣ್ಯವತಿ.
ನಿಮಗೆ ಆಶ್ಚರ್ಯವಾಗಬಹುದು. 8 ನೇ ವಯಸ್ಸಿನಲ್ಲೇ ಬೆಳ್ಳಿತೆರೆ (ಹಿಂದಿ ಚಿತ್ರ) ಮೇಲೆ ಕಾಣಿಸಿಕೊಂಡ ಖ್ಯಾತಿ ನಿತ್ಯಾ ಅವರದ್ದು. ಪೂರ್ಣ ಪ್ರಮಾಣದ ನಾಯಕಿಯಾಗಿ ಸಿನಿಮಾಗೆ ಎಂಟ್ರಿಯಾಗಿದ್ದು 17 ನೇ ವಯಸ್ಸಿನಲ್ಲಿ, ಅಲ್ಲಿಂದ ಈಚೆಗೆ ಆಕೆ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಭಾರಿ ಪ್ರತಿಭಾವಂತೆ ಆಗಿರುವ ನಿತ್ಯಾಗೆ ಅವಾರ್ಡ್ಗಳು ಹುಡುಕಿಕೊಂಡು ಬರುತ್ತವೆ!
32 ವರ್ಷ ವಯಸ್ಸಿನ ನಿತ್ಯಾ ನಟಿಸಿರುವ ಕನ್ನಡ ಚಿತ್ರಗಳೆಂದರೆ, ಸೆವೆನ್ ಓ ಕ್ಲಾಕ್, ಜೋಷ್, ಐದೊಂದ್ಲ ಐದು, ಮೈನಾ ಮತ್ತು ಕೋಟಿಗೊಬ್ಬ 2. ಬಾಲನಟಿಯಾಗಿ ನಟಿಸಿದ್ದು ಬಿಟ್ಟರೆ ಆಕೆ ಮಿಷನ್ ಮಂಗಲ್ ಶೀರ್ಷಿಕೆಯ ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ.
ನಿತ್ಯಾ ಮಾಡ್ ಡ್ರೆಸ್ಗಳಲ್ಲಿ ಅಂದವಾಗಿ ಕಾಣೋದು ನಿಜವೇ ಆದರೆ ಸಾಂಪ್ರದಾಯಿಕ ಉಡುಗೆಯಲ್ಲಿ ಮತ್ತೂ ಮುದ್ದಾಗಿ ಕಾಣಿತ್ತಾರೆ. ನೀವೇ ಗಮನಿಸಿ.
ಇದನ್ನೂ ಓದಿ: ರಸ್ತೆ ಮಧ್ಯೆ ಕುಣಿದು ವಿಡಿಯೋ ಹರಿಬಿಟ್ಟ ಯುವತಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ನೋಟೀಸು ನೀಡಿದ ಪೊಲೀಸರು