ಕೇವಲ ಎರಡು ದಿನಗಳಲ್ಲಿ ರೂ. 1,100 ಕೋಟಿಗಳ ವ್ಯವಹಾರ ನಡೆಸಿದ ಓಲಾ ಇಲೆಕ್ಟ್ರಿಕ್ ಸ್ಕೂಟರ್​​ಗಳು!

ಭಾವಿಶ್ ಹೇಳುವಂತೆ ಎರಡು ದಿನಗಳಲ್ಲಿ ರೂ. 1,100 ಕೋಟಿ ಮೌಲ್ಯದ ಸ್ಕೂಟರ್​ಗಳು ಮಾರಾಟವಾಗಿವೆ. ಇದು ನಿಜಕ್ಕೂ ಸೋಜಿಗ ಹುಟ್ಟಿಸುವ ಸಂಗತಿಯೇ. ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಈ ಪಾಟಿ ಬೇಡಿಕೆಯಿದೆ ಅಂತ ಯಾರೂ ಅಂದುಕೊಂಡಿರಲಿಲ್ಲ

ಇಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಇಲೆಕ್ಟ್ರಿಕ್ ಸ್ಕೂಟರ್ಗಳ ಉತ್ಪಾದನೆ ಆರಂಭಸಿರುವ ಭಾವಿಶ್ ಅಗರ್ವಾಲ್ ದಾಖಲೆ ಸೃಷ್ಟಿಸಿದ್ದಾರೆ. ಅವರ ಓಲಾ ಎಸ್ 1 ಮತ್ತು ಓಲಾ ಎಸ್ 1 ಪ್ರೋ ಇಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಕ್ರಾಂತಿ ಹುಟ್ಟು ಹಾಕಿವೆ. ಸ್ಕೂಟರ್ ಗಳು ಮಾರಾಟವಾಗುತ್ತಿರುವ ವೇಗ ಕಂಡು ಭಾವಿಶ್ ಪ್ರತಿಸ್ಪರ್ಧಿಗಳ ಮಾತು ಹಾಗಿರಲಿ, ಖುದ್ದು ಅವರೇ ದಿಗ್ಭ್ರಮೆಗೊಳಗಾಗಿದ್ದಾರೆ. ವಾಹನಗಳ ಆನ್ಲೈನ್ ಮಾರಾಟ ಶುರುವಾದ ಮೊದಲ ದಿನಕ್ಕಿಂತ ಎರಡನೇ ದಿನದ ವಹಿವಾಟು ಭರ್ಜರಿಯಾಗಿತ್ತು ಎಂದು ಭಾವಿಶ್ ಟ್ವೀಟ್ ಮಾಡಿದ್ದಾರೆ. ವಿಷಾದದ ಸಂಗತಿಯೆಂದರೆ, ಓಲಾ ಇವಿಗಳ ಆನ್ ಲೈನ್ ಸೇಲ್ ಕೇವಲ ಎರಡು ದಿನಗಳ ಮಟ್ಟಿಗೆ ಮಾತ್ರ ಜಾರಿಯಿತ್ತು, ಸೆಪ್ಟೆಂಬರ್ 15 ಮತ್ತು 16. ಆದರೆ, ನೀವು ನಿರಾಶರಾಗಬೇಕಿಲ್ಲ. ನವೆಂಬರ್ ಒಂದರಂದು ಆನ್ಲೈನ್ ಬುಕಿಂಗ್ ಮತ್ತೊಮ್ಮೆ ಶುರುವಾಗಲಿದೆ.

ಭಾವಿಶ್ ಹೇಳುವಂತೆ ಎರಡು ದಿನಗಳಲ್ಲಿ ರೂ. 1,100 ಕೋಟಿ ಮೌಲ್ಯದ ಸ್ಕೂಟರ್​ಗಳು ಮಾರಾಟವಾಗಿವೆ. ಇದು ನಿಜಕ್ಕೂ ಸೋಜಿಗ ಹುಟ್ಟಿಸುವ ಸಂಗತಿಯೇ. ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಈ ಪಾಟಿ ಬೇಡಿಕೆಯಿದೆ ಅಂತ ಯಾರೂ ಅಂದುಕೊಂಡಿರಲಿಲ್ಲ ಮಾರಾಯ್ರೇ. ಪೆಟ್ರೋಲ್ ಗೆ ಹಣ ಸುರಿದು ಜನ ನಿಜಕ್ಕೂ ಬೇಸತ್ತಿದ್ದಾರೆ.

ಅವರಿಗೆ ಇವಿಗಳು ಅತ್ಯಂತ ಜರೂರಾಗಿ ಬೇಕಾಗಿತ್ತು. ಓಲಾ ಜೊತೆ ಬೇರೆ ಕಂಪನಿಗಳು ಸಹ ಇವಿಗಳನ್ನು ಮಾರ್ಕೆಟ್ ಗೆ ಬಿಟ್ಟಿವೆ. ಆದರೆ ಭಾವಿಶ್ ಅವರ ವಾಹನಗಳು ಸೃಷ್ಟಿಸಿರುವ ಕ್ರೇಜ್ ಬೇರೆ ಯಾವುದೇ ಕಂಪನಿ ವಾಹನಗಳು ಸೃಷ್ಟಿಸಿಲ್ಲ.

ಭಾರತದ 1,000 ನಗರಗಳಲ್ಲಿ ಓಲಾ ಇವಿಗಳ ಹೋಮ್ ಡೆಲಿವರಿ ಆಗಲಿದೆ ಎಂದು ಭಾವಿಶ್ ಹೇಳಿದ್ದಾರೆ. ಅಂದಹಾಗೆ, ಓಲಾ ಎಸ್ 1 ಸ್ಕೂಟರ್ನ ಎಕ್ಸ್ ಶೋರೂಮ್ ಬೆಲೆ ರೂ, 99,000 ಮತ್ತು ಎಸ್1 ಪ್ರೋ ಬೆಲೆ ರೂ. 1,29,000.

ಇದನ್ನೂ ಓದಿ:  ಅಂಪೈರ್ ವೈಡ್ ನೀಡದೇ ಇರುವುದಕ್ಕೆ ಕೋಪಗೊಂಡು ಪಿಚ್​ನಿಂದ ದೂರ ಹೋಗಿ ನಿಂತ ಪೊಲಾರ್ಡ್; ವಿಡಿಯೊ ನೋಡಿ

 

Click on your DTH Provider to Add TV9 Kannada