AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕನ ಜೊತೆಗೆ ಪ್ರೀತಿಯಲ್ಲಿ ಬಿದ್ದ ಸಮಂತಾ, ಆಡಿಯೋ ಸಂದೇಶದಿಂದ ಗುಟ್ಟು ರಟ್ಟು

Samantha Ruth Prabhu: ನಟಿ ಸಮಂತಾ ಋತ್ ಪ್ರಭು, ನಾಗ ಚೈತನ್ಯ ಇಂದ ವಿಚ್ಛೇದನ ಪಡೆದು ಮೂರು ವರ್ಷವಾಯ್ತು. ನಾಗ ಚೈತನ್ಯ ಈಗಾಗಲೇ ಮದುವೆ ಸಹ ಆಗಿಬಿಟ್ಟರು. ಆದರೆ ಸಮಂತಾ ಒಂಟಿಯಾಗಿದ್ದಾರೆ. ಆದರೆ ಇದೀಗ ಸಮಂತಾ, ನಿರ್ದೇಶಕನೊಬ್ಬನ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕನ ಜೊತೆಗೆ ಪ್ರೀತಿಯಲ್ಲಿ ಬಿದ್ದ ಸಮಂತಾ, ಆಡಿಯೋ ಸಂದೇಶದಿಂದ ಗುಟ್ಟು ರಟ್ಟು
Samantha
Follow us
ಮಂಜುನಾಥ ಸಿ.
|

Updated on: Jan 19, 2025 | 7:35 AM

ನಟಿ ಸಮಂತಾ, ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದು ಮೂರು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ನಾಗ ಚೈತನ್ಯ ಈಗಾಗಲೇ ಎರಡನೇ ಮದುವೆಯನ್ನೂ ಆಗಿದ್ದಾರೆ. ಆದರೆ ನಟಿ ಸಮಂತಾ ಮಾತ್ರ ಸಿಂಗಲ್ ಆಗಿಯೇ ಉಳಿದಿದ್ದಾರೆ. ಆದರೆ ಸಮಂತಾ, ಖ್ಯಾತ ನಿರ್ದೇಶಕನೊಬ್ಬನೊಟ್ಟಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರಕತೆ, ವೆಬ್ ಸರಣಿಗಳನ್ನು ನಿರ್ದೇಶನ ಮಾಡುತ್ತಿರುವ ನಿರ್ದೇಶಕನೊಟ್ಟಿಗೆ ಸಮಂತಾ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೂ ಹರಿದಾಡಿತ್ತು. ಆದರೆ ಇದೀಗ ಆಡಿಯೋ ಸಂದೇಶವೊಂದರಿಂದ ಈ ಸುದ್ದಿ ಖಾತ್ರಿಯಾಗಿದೆ ಎನ್ನಲಾಗುತ್ತಿದೆ.

ಸಮಂತಾ, ಇತ್ತೀಚೆಗೆ ಗಲಾಟಾ ಇಂಡಿಯಾ ಹೆಸರಿನ ತಮಿಳು ಯೂಟ್ಯೂಬ್ ಚಾನೆಲ್​ಗೆ ಸಂದೇಶ ನೀಡುತ್ತಿದ್ದರಂತೆ. ಸಂದರ್ಶನದ ಮಧ್ಯೆ ಸಮಂತಾ ವಾಟ್ಸ್​ಆಪ್​ಗೆ ಸಂದೇಶವೊಂದು ಬಂತಂತೆ. ಅದೂ ಆಡಿಯೋ ಸಂದೇಶ. ಆ ಆಡಿಯೋ ಸಂದೇಶವನ್ನು, ಸಂದರ್ಶನದ ನಡುವೆಯೇ ಸಮಂತಾ ತೆರೆದು ಕೇಳಿಸಿಕೊಂಡಿದ್ದಾರೆ. ಆ ಬಳಿಕ ಅವರ ಮುಖ ಚಹರೆಯೇ ಬದಲಾಯ್ತಂತೆ. ಸಂದೇಶ ಕೇಳಿಸಿಕೊಂಡ ಬಳಿಕ ನಟಿ ನಾಚಿ ನೀರಾದರಂತೆ. ಆ ಬಳಿಕ ಇನ್ನಷ್ಟು ಉತ್ಸಾಹದಿಂದ ಸಂದರ್ಶನ ಮುಂದುವರೆಸಿದರಂತೆ. ಅಲ್ಲೇ ಇದ್ದವರ ಪ್ರಕಾರ ಆ ಸಂದೇಶ ಒಬ್ಬ ಯುವ ನಿರ್ದೇಶಕನದ್ದು.

ಇದನ್ನೂ ಓದಿ:ರೆಡ್​ಲೈಟ್ ಥೆರಪಿ ಮಾಡಿಸಿದ ಸಮಂತಾ, ಅಂಥಹದ್ದೆನಾಗಿತ್ತು?

ಖ್ಯಾತ ವೆಬ್ ಸರಣಿ ನಿರ್ದೇಶಕ ಜೋಡಿಯಾದ ರಾಜ್ ಆಂಡ್ ಡಿಕೆ ಅವರಲ್ಲಿ ರಾಜ್ ಜೊತೆಗೆ ಸಮಂತಾ ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇದೆ. ಇದೀಗ ಸಮಂತಾ, ಗಲಾಟಾ ಇಂಡಿಯಾ ಸಂದರ್ಶನದ ಸಮಯದಲ್ಲಿ ರಾಜ್ ಅವರಿಂದಲೇ ಸಂದೇಶ ಸ್ವೀಕರಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ರಾಜ್ ಕಳಿಸಿದ್ದಾರೆ ಎನ್ನಲಾಗುತ್ತಿರುವ ಆ ಆಡಿಯೋ ಸಂದೇಶದಲ್ಲಿ ನಿಖರವಾಗಿ ಏನಿತ್ತು ಎಂಬುದು ತಿಳಿದು ಬಂದಿಲ್ಲ.

ರಾಜ್ ನಿಧಿಮೋರು ಖ್ಯಾತ ನಿರ್ದೇಶಕ. ಈ ಮುಂಚೆ ಟಿವಿ ಎಪಿಸೋಡ್​ಗಳಿಗೆ ಚಿತ್ರಕತೆ ಬರೆಯುತ್ತಿದ್ದರು. ಸಮಂತಾ ನಟಿಸಿದ ಮೊದಲ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್’ ಇವರೇ ನಿರ್ದೇಶನ ಮಾಡಿದ್ದರು. ಅದರ ಹೊರತಾಗಿ ‘ಗನ್ಸ್ ಆಂಡ್ ಗುಲಾಬ್ಸ್’, ‘ಫರ್ಜಿ’ ಇನ್ನೂ ಕೆಲವು ವೆಬ್ ಸರಣಿಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಸಮಂತಾ ನಟಿಸುತ್ತಿರುವ ‘ರಕ್ತ ಬ್ರಹ್ಮಾಂಡ್’ ವೆಬ್ ಸರಣಿಗೆ ಇವರೇ ನಿರ್ಮಾಪಕರು. ಅಂದಹಾಗೆ ಸಮಂತಾ ಜೊತೆಗೆ ಹೆಸರು ಕೇಳಿ ಬರುತ್ತಿರುವ ರಾಜ್​ಗೆ ಈಗಾಗಲೇ ಮದುವೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ