ಧಾರ್ಮಿಕ ಕೇಂದ್ರಗಳ ತೆರವಿಗೆ ಹೊಸ ನಿಯಮಾವಳಿ ರೂಪಿಸಲು ಸರ್ಕಾರ ನಿರ್ಧಾರ; ವಿಧೇಯಕ ಮಂಡನೆ

TV9 Digital Desk

| Edited By: ganapathi bhat

Updated on:Sep 20, 2021 | 7:19 PM

ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಧಾರ್ಮಿಕ ಕಟ್ಟಡಗಳನ್ನ ಹೊಸದಾಗಿಯೂ ನಿರ್ಮಿಸಲು ಅವಕಾಶ ಇರುವುದಿಲ್ಲ. ಸರ್ಕಾರಕ್ಕೆ ಸೇರಿದ ಜಾಗದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮುಂದೆ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗಿದೆ.

ಧಾರ್ಮಿಕ ಕೇಂದ್ರಗಳ ತೆರವಿಗೆ ಹೊಸ ನಿಯಮಾವಳಿ ರೂಪಿಸಲು ಸರ್ಕಾರ ನಿರ್ಧಾರ; ವಿಧೇಯಕ ಮಂಡನೆ
(ಪ್ರಾತಿನಿಧಿಕ ಚಿತ್ರ)


ಬೆಂಗಳೂರು: ದೇಗುಲಗಳ ತೆರವು ವಿಚಾರವಾಗಿ ಇತ್ತೀಚೆಗೆ ಬಹಳಷ್ಟು ವಾದ- ವಿವಾದ ಸೃಷ್ಟಿಯಾಗಿದ್ದವು. ಈ ಬಗ್ಗೆ ವಿಧೇಯಕದ ಮೂಲಕ ಹೊಸ ನಿಯಮಾವಳಿ ರೂಪಿಸಲು ಇದೀಗ ಸರ್ಕಾರ ನಿರ್ಧಾರ ಕೈಗೊಂಡಿದೆ. ಅದರಂತೆ ಕೋರ್ಟ್​​ ತೀರ್ಪು ಇದ್ದರೂ ಸರ್ಕಾರದ ನಿಯಮಗಳಿಗೆ ಒಳಪಟ್ಟಂತೆ ಆಯಾ ಧಾರ್ಮಿಕ ಸ್ಥಳ ಇದ್ದರೆ ಅಂತಹ ಧಾರ್ಮಿಕ ಸಂಸ್ಥೆಗಳನ್ನ ತೆರವು ಮಾಡುವಂತಿಲ್ಲ ಎಂದು ಹೊಸ ನಿಯಮಾವಳಿ ರೂಪಿಸಲು ಸರ್ಕಾರ ತೀರ್ಮಾನಿಸಿದೆ.

ಸರ್ಕಾರದ ನಿಯಮಗಳಿಂದ ಹೊರಗಿದ್ದರೆ ಮಾತ್ರ ಅಂತಹ ಧಾರ್ಮಿಕ ಸ್ಥಳ ತೆರವು ಮಾಡಬಹುದು. ಅಂತಹ ಧಾರ್ಮಿಕ‌ ಸಂಸ್ಥೆಗಳ ಕಟ್ಟಡಗಳು ಮಾತ್ರ ತೆರವು ಮಾಡಬಹುದು. ವಿಧೇಯಕ ಅಂಗೀಕಾರಗೊಂಡ ಬಳಿಕ ಈ ನಿಯಮಾವಳಿ ಜಾರಿ ಆಗಲಿದೆ. ಶೀಘ್ರದಲ್ಲೇ ಸರ್ಕಾರ ನಿಯಮಾವಳಿ ರೂಪಿಸುವ ಸಾಧ್ಯತೆ ಇದೆ.

ವಿಧೇಯಕದ ಮೂಲಕ ಹೊಸ ನಿಯಾಮವಳಿ ರೂಪಿಸಲು ಸರ್ಕಾರ ನಿರ್ಧಾರ ಮಾಡಿದೆ. ನ್ಯಾಯಾಲಯದ ತೀರ್ಪು ಇದ್ದರೂ ಸರ್ಕಾರದ ನಿಯಮಗಳಿಗೆ ಒಳಪಟ್ಟಂತೆ ಇದ್ದರೆ ಆ ಧಾರ್ಮಿಕ ಸಂಸ್ಥೆಗಳನ್ನ ತೆರವು ಮಾಡುವಂತಿಲ್ಲ. ಸರ್ಕಾರದ ನಿಯಮಾವಳಿಯಿಂದ ಹೊರಗೆ ಇದ್ದರೆ ಆ ಧಾರ್ಮಿಕ‌ ಸಂಸ್ಥೆಗಳ ಕಟ್ಟಡಗಳು ಮಾತ್ರ ತೆರವು ಮಾಡಬಹುದು. ಈ ವಿಧೇಯಕ ಅಂಗೀಕಾರಗೊಂಡ ಬಳಿಕ ಶೀಘ್ರದಲ್ಲೇ ನಿಯಮಾವಳಿ ರೂಪಿಸುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಧಾರ್ಮಿಕ ಕಟ್ಟಡಗಳನ್ನ ಹೊಸದಾಗಿಯೂ ನಿರ್ಮಿಸಲು ಅವಕಾಶ ಇರುವುದಿಲ್ಲ. ಸರ್ಕಾರಕ್ಕೆ ಸೇರಿದ ಜಾಗದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮುಂದೆ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗಿದೆ.

ವಿಧಾನಸಭೆಯಲ್ಲಿ ಇನ್ನೂ ಕೆಲವು ತಿದ್ದುಪಡಿ ವಿಧೇಯಕಗಳ ಮಂಡನೆ ಆಗಿದೆ. ಪಟ್ಟಣ ಮತ್ತು ಗ್ರಾಮಾಂತರ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ. ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ ಮಂಡನೆ ಆಗಿದೆ. ಚಾಣಕ್ಯ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ‌ ಮಂಡನೆ ಆಗಿದೆ. ವಿಧಾನಸಭೆಯಲ್ಲಿ ಈ ತಿದ್ದುಪಡಿ ವಿಧೇಯಕ‌ಗಳು ಮಂಡನೆಯಾಗಿವೆ.

ಹುಚ್ಚಗಣಿ ಮಹದೇವಮ್ಮ ದೇಗುಲ ಮರುನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಮನವಿ
ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರವಾಗಿ ದೇಗುಲ ಮರುನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ ನಂಜನಗೂಡು ಶಾಸಕ ಹರ್ಷವರ್ಧನ್ ಮನವಿ ಮಾಡಿದ್ದಾರೆ. 20 ಲಕ್ಷ ಅನುದಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಕಡತ ಮಂಡಿಸಿ ಮುಂದಿನ ಕ್ರಮಕೈಗೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗ್ರಾಮದ ಹುಲ್ಲಹಳ್ಳಿಯ ಹುಚ್ಚಗಣಿ ಮಹದೇವಮ್ಮ ದೇಗುಲ ಇತ್ತೀಚೆಗಷ್ಟೇ ತೆರವಾಗಿತ್ತು. ಆ ಬಗ್ಗೆ ವಾದ- ವಿವಾದವೂ ಏರ್ಪಟ್ಟಿತ್ತು.

ವಿಧಾನ ಪರಿಷತ್​​ನಲ್ಲಿ ಕೆಲವು ತಿದ್ದುಪಡಿ ವಿಧೇಯಕ ಮಂಡನೆ
ಬಂಧಿಗಳ ಗುರುತಿಸುವಿಕೆ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​​ನಲ್ಲಿ ಮಂಡನೆ ಆಗಿದೆ. ಪರಿಷತ್​​ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕವನ್ನು ವಿವರಿಸಿದ್ದಾರೆ. ಆರೋಪಿಯ ರಕ್ತದ ಮಾದರಿ, ಧ್ವನಿ ಮಾದರಿ, ಡಿಎನ್​ಎ ಮಾದರಿ, ಕಣ್ಣಿನ ಪಾಪೆ ಮಾದರಿ ಸಂಗ್ರಹ ವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಬಂಧಿಗಳ ಗುರುತಿಸುವಿಕೆ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ವಿಧಾನ ಪರಿಷತ್​ನಲ್ಲಿ ಬೆಂಗಳೂರು ನೀರು ಸರಬರಾಜು, ಗ್ರಾಮಸಾರ ಒಳಚರಂಡಿ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ.

ಇದನ್ನೂ ಓದಿ: ಕುಮಾರವ್ಯಾಸನ ಪದ್ಯ ಓದಿ ಸಿದ್ದರಾಮಯ್ಯಗೆ ಟಾಂಗ್; ಮೋದಿ ಪ್ರಧಾನಿ ಆದ್ಮೇಲೆ ದೇಶದ ಬೆಲೆ ಹೆಚ್ಚಾಗಿದೆ: ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಮುಜರಾಯಿ ದೇಗುಲ ಅರ್ಚಕರಿಗೆ ಬಿಡುಗಡೆಯಾಗದ ತಸ್ತೀಕ್: ಕಾಂಗ್ರೆಸ್ ಆಕ್ರೋಶ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada