ಹಾವೇರಿಯ ಹಾನಗಲ್​ನಲ್ಲಿ ರಂಗೇರಿದ ಬೈ ಎಲೆಕ್ಷನ್ ಅಖಾಡ, ಶಿವರಾಜ್ ಸಜ್ಜನರ ಪರ ಸಿಎಂ ಬೊಮ್ಮಾಯಿ ಮತ ಬೇಟೆ

ಹಾನಗಲ್ ಕ್ಷೇತ್ರದ ಬೈ ಎಲೆಕ್ಷನ್ ದಂಗಲ್ ದಿನೆ ದಿನೇ ರಂಗೇರ್ತಿದೆ. ಶತಾಯ ಗತಾಯ ಕ್ಷೇತ್ರ ಉಳಿಸಿಕೊಳ್ಳೋಕೆ ಬಿಜೆಪಿ ಸರ್ಕಸ್ ನಡೆಸ್ತಿದೆ. ಈ ನಡುವೆ ಇಂದು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಉಪಚುನಾವಣಾ ಅಖಾಡಕ್ಕೆ ಧುಮಿಕಿ ಮತಬೇಟೆ ನಡೆಸಲಿದ್ದಾರೆ.

ಹಾವೇರಿಯ ಹಾನಗಲ್​ನಲ್ಲಿ ರಂಗೇರಿದ ಬೈ ಎಲೆಕ್ಷನ್ ಅಖಾಡ, ಶಿವರಾಜ್ ಸಜ್ಜನರ ಪರ ಸಿಎಂ ಬೊಮ್ಮಾಯಿ ಮತ ಬೇಟೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಹಾವೇರಿ: ಅಕ್ಟೋಬರ್ 30ರಂದು ನಡೆಯಲಿರೋ ಹಾವೇರಿಯ ಹಾನಗಲ್ ಕ್ಷೇತ್ರದ ಬೈ ಎಲೆಕ್ಷನ್ನಲ್ಲಿ ವಿಪಕ್ಷಗಳಿಗೆ ಟಕ್ಕರ್ ಕೊಡೋಕೆ ಆಡಳಿತಾರೂಢ ಬಿಜೆಪಿ ಮುಂದಾಗಿದೆ. ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರೋ ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯೋ ರಣತಂತ್ರ ಹೆಣೀತಿದೆ.

ಸಿಎಂ ಬೊಮ್ಮಾಯಿ ಸೇರಿ ಕೇಸರಿ ಕಲಿಗಳಿಂದ ಇಂದು ಮತ ಬೇಟೆ
ಬೈಎಲೆಕ್ಷನ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರೋ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಪರ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಇವತ್ತು ಅಖಾಡಕ್ಕೆ ಧುಮಕಲಿದ್ದಾರೆ. ಸಮಾವೇಶ ನಡೆಸಿ, ಕ್ಷೇತ್ರದ ಹಲವೆಡೆ ಸಂಚರಿಸಿ ಪಕ್ಷದ ಶಿವರಾಜ್ ಸಜ್ಜನರ ಪರ ಮತಯಾಚನೆ ನಡೆಸಲಿದ್ದಾರೆ.

ಹುಬ್ಬಳ್ಳಿಯಿಂದ ಬೆಳಗ್ಗೆ 10.45ಕ್ಕೆ ಹಾವೇರಿ ನಗರಕ್ಕೆ ಸಿಎಂ ಆಗಮಿಸಲಿದ್ದು, ಶಿವಶಕ್ತಿ ಪ್ಯಾಲೇಸ್ನಲ್ಲಿ ಇತ್ತೀಚೆಗೆ ಮೃತರಾದ ವೀರಶೈವ ಸಮಾಜದ ಗಣ್ಯರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಹಾವೇರಿ ನಗರದಿಂದ ರಸ್ತೆ ಮಾರ್ಗವಾಗಿ ಬೆಳಗ್ಗೆ 11.45ಕ್ಕೆ ಹಾನಗಲ್ ತಲುಪಲಿದ್ದು, ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರೋ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ ಮಾಡಲಿದ್ದಾರೆ. ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರೋ ಸಿಎಂ, ಸಜ್ಜನರ ಗೆಲುವಿಗೆ ರಣತಂತ್ರ ಹೆಣೀತಿದ್ದು, ಸಮಾವೇಶದ ನಂತರ ಸಂಜೆ ಆರು ಗಂಟೆಯವರೆಗೆ ಕ್ಷೇತ್ರದಲ್ಲೇ ಇರಲಿದ್ದಾರೆ. ವಿಶೇಷವಾಗಿ ಕ್ಷೇತ್ರದಲ್ಲಿನ ಲಿಂಗಾಯತ ಮತದಾರರನ್ನೇ ಸೆಳೆಯೋಕೆ ಬೊಮ್ಮಾಯಿ ಪ್ಲ್ಯಾನ್ ಮಾಡಿದ್ದು, ಗಂಗಾಮತಸ್ಥ ಸಮುದಾಯ, ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಮತಗಳ ಮೇಲೂ ಕಣ್ಣಿಟ್ಟಿದ್ದಾರೆ.

ಇನ್ನು ಈಗಾಗಲೇ ಹಾನಗಲ್ನಲ್ಲಿ ಸಚಿವ ಬಿ .ಶ್ರೀರಾಮುಲು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಬಿಜೆಪಿ ಅಭ್ಯರ್ಥಿಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ನಡುವೆ ಇಂದು ಸಿಎಂ ಭಾಗಿಯಾಗಲಿರೋ ಸಮಾವೇಶಕ್ಕೆ ಕೇಸರಿ ಕಲಿಗಳ ದಂಡೇ ಹರಿದು ಬರ್ತಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವರಾದ ಮುನಿರತ್ನ, ಬಿ.ಸಿ. ಪಾಟೀಲ, ಶಿವರಾಮ ಹೆಬ್ಬಾರ, ಸುನಿಲ್ ಕುಮಾರ್ ಸೇರಿ ಹಲವರು ಸಿಎಂ ಬೊಮ್ಮಾಯಿಗೆ ಸಾಥ್ ನೀಡಲಿದ್ದಾರೆ.

ಜಿಲ್ಲೆಯಲ್ಲಿನ‌ ಶಿಗ್ಗಾಂವಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರಿಂದ ಮತ್ತಷ್ಟು ಉಪಚುನಾವಣೆ ಅಖಾಡ ರಂಗೇರಲಿದೆ. ಹಾನಗಲ್ ಕ್ಷೇತ್ರದ‌ ಅಳಿಯನಾಗಿರೋ ಸಿಎಂ ಬೊಮ್ಮಾಯಿ ಹಾನಗಲ್ ಕ್ಷೇತ್ರದಲ್ಲಿ ತಮ್ಮದೇಯಾದ ಹಿಡಿತ ಹೊಂದಿದ್ದಾರೆ. ಎಪ್ಪತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರೋ ಲಿಂಗಾಯತ ಮತಗಳ‌ ಜೊತೆಗೆ ಹಿಂದುಳಿದವರು ಮತ್ತು ದಲಿತರ ಮತಗಳಬ್ನ ಸೆಳೆಯಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಬಿಜೆಪಿಗೆ ಟಾಂಗ್ ಕೊಡಲು ಕಾಂಗ್ರೆಸ್ ಪ್ಲಾನ್
ಬಿಜೆಪಿಗೆ ಟಾಂಗ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲ್ಲಿಸಲು ಭರ್ಜರಿ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಮತಗಳ‌ ಮೇಲೆ ಹೆಚ್ಚಾಗಿ ಕಣ್ಣಿಟ್ಟು ಈಗಾಗಲೆ ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ. ಲಿಂಗಾಯತ ಮತಗಳನ್ನ ಸೆಳೆಯಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರರನ್ನ ಪ್ರಚಾರದ ಅಖಾಡಕ್ಕೆ ಇಳಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಎರಡು ದಿನಗಳ‌ ಕಾಲ ಪ್ರಚಾರ ಸಭೆಗಳನ್ನ ನಡೆಸಿದ್ದಾರೆ. ಆರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಒಬ್ಬರಂತೆ ಮಾಜಿ ಸಚಿವರನ್ನ ನೇಮಕ ಮಾಡಲಾಗುತ್ತಿದೆ. ಮಾಜಿ ಸಚಿವರ ಜೊತೆಗೆ ಯುವ ಕಾಂಗ್ರೆಸ್ ಮುಖಂಡರಿಂದಲೂ ಮತ ಸೆಳೆಯಲು ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ.

ಇವತ್ತು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಸಭೆಗಳನ್ನ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಲಿದ್ದಾರೆ. ಬೆಳಿಗ್ಗೆ 10.30ರಿಂದ ಕ್ಷೇತ್ರ ವ್ಯಾಪ್ತಿಯ ಮಾಸನಕಟ್ಟಿ, ಕಂಚಿನೆಗಳೂರು, ಬೊಮ್ಮನಹಳ್ಳಿ ಮತ್ತು ಮಂತಗಿ ಗ್ರಾಮಗಳಲ್ಲಿ ಸಿದ್ದರಾಮಯ್ಯ ಪ್ರಚಾರ ಸಭೆಗಳನ್ನ ನಡೆಸಲಿದ್ದಾರೆ. ಸಿದ್ದರಾಮಯ್ಯ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವರಾದ ಯು.ಟಿ.ಖಾದರ್, ಸಂತೋಷ ಲಾಡ್, ಮನೋಹರ ತಹಶೀಲ್ದಾರ ಸೇರಿದಂತೆ ಕಾಂಗ್ರೆಸ್ ನ ಹಲವು ಮುಖಂಡರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Karnataka Byelections: ಹಾನಗಲ್ ಬಿಜೆಪಿಯ ಬಂಡಾಯ ಅಭ್ಯರ್ಥಿ ಸಿಆರ್ ಬಳ್ಳಾರಿ ನಾಮಪತ್ರ ವಾಪಸ್

Click on your DTH Provider to Add TV9 Kannada