ಮೋದಿ ವಿರುದ್ಧ ಮಾತಾಡಿದ್ರೆ ದೇಶದ್ರೋಹಿಯಂತೆ, ಯಾವನ್ರಿ ಇವನು ಪ್ರಧಾನ ಮಂತ್ರಿ? -ಸಿದ್ದರಾಮಯ್ಯ ಗುಡುಗು

ಮೋದಿ ವಿರುದ್ಧ ಮಾತಾಡಿದ್ರೆ ದೇಶದ್ರೋಹಿಯಂತೆ, ಯಾವನ್ರಿ ಇವನು ಪ್ರಧಾನ ಮಂತ್ರಿ? -ಸಿದ್ದರಾಮಯ್ಯ ಗುಡುಗು
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

ಹಾನಗಲ್​ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮಾನೆಯವರನ್ನ ಗೆಲ್ಲಿಸಿ ವಿಧಾನಸಭೆಗೆ ಕಳಿಸಿ. ದೀಪಾವಳಿಗೆ ಮುಂಚೆಯೇ ಮಾನೆಯವರನ್ನ ಗೆಲ್ಲಿಸಿ, ಪಟಾಕಿ ಹೊಡಿರಿ. ಯಾವನ್ರಿ ಇವನು ಪ್ರಧಾನ ಮಂತ್ರಿ? ಇಂಥವರೆಲ್ಲ ಪ್ರಧಾನಿ ಆಗೋಕೆ ಲಾಯಕ್ಕೇನ್ರಿ? ನನಗೆ ವೈಯಕ್ತಿಕವಾಗಿ ಯಾರ ಮೇಲೂ ಕೋಪ ಇಲ್ಲ. ಅವರು ಮಾಡ್ತಿರೋದನ್ನ ನೋಡಿ ಕೋಪ ಬರ್ತಿದೆ- ಸಿದ್ದರಾಮಯ್ಯ ಗುಡುಗು

TV9kannada Web Team

| Edited By: sadhu srinath

Oct 16, 2021 | 3:45 PM

ಹಾವೇರಿ: ಮೋದಿ ವಿರುದ್ಧ ಮಾತಾಡಿದರೆ ದೇಶದ್ರೋಹಿ. ಸರ್ಕಾರದ ವಿರುದ್ಧ ಮಾತಾಡಿದರೆ ದೇಶದ್ರೋಹಿ ಅಂತಾರೆ ಎಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜರಿದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆ ಹಾನಗಲ್​ ತಾಲೂಕಿನ ಹೇರೂರು ಗ್ರಾಮದಲ್ಲಿ ಮಾತನಾಡುತ್ತಾ ರಾಜ್ಯ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರು ಚಳವಳಿ ಮಾಡಿದ್ರೆ ಕಾರು ಹರಿಸಿ ಸಾಯಿಸುತ್ತಾರೆ. ಕೇಂದ್ರದ ಮಂತ್ರಿ ಮಗ ಕಾರು ಹರಿಸಿ ರೈತರನ್ನ ಸಾಯಿಸಿದ. ಇವರನ್ನ ಲಜ್ಜೆಗೆಟ್ಟವರು, ಕೊಲೆಗಡುಕರು ಅನ್ನಬೇಕಲ್ವಾ? ಎಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

ನಮ್ಮ ಸರ್ಕಾರ ನೀಡಿದ್ದ ಎಲ್ಲ ಭರವಸೆಗಳನ್ನ ಈಡೇರಿಸಿದಿವಿ. ಆದರೆ ಮಿಸ್ಟರ್ ಯಡಿಯೂರಪ್ಪ, ಮಿಸ್ಟರ್ ಬೊಮ್ಮಾಯಿ ನೀವೇನ್ ಮಾಡಿದ್ರಿ? ನಮ್ಮ ಬಳಿಯೇನೂ ನೋಟ್ ಪ್ರಿಂಟ್ ಹಾಕುವ ಮಷಿನ್ ಇಲ್ಲ. ಆದರೂ ನಾವು ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ಹೇರೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಐವತ್ತಾರು ಇಂಚಿನ ಎದೆಯಿದೆ ಅಂತಾರೆ‌. ಎದೆ ಇರೋದು ಮುಖ್ಯವಲ್ಲ. ಎದೆಯಲ್ಲಿ ಮಾತೃ ಹೃದಯ ಇರಬೇಕು. ಅದಿಲ್ಲದಿದ್ದರೆ ಎಷ್ಟು ಇಂಚಿನ ಎದೆ ಇದ್ದರೇನು ಉಪಯೋಗ? ಎಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ವೋಟಿನ ಮೂಲಕ ಬಿಜೆಪಿ ಅಭ್ಯರ್ಥಿ ಸಜ್ಜನರನ್ನ ಸೋಲಿಸಿ, ಕಾಂಗ್ರೆಸ್​ ಅಭ್ಯರ್ಥಿ ಮಾನೆಯವರನ್ನ ಗೆಲ್ಲಿಸಿ ವಿಧಾನಸಭೆಗೆ ಕಳಿಸಿ. ದೀಪಾವಳಿಗೆ ಮುಂಚೆಯೇ ಮಾನೆಯವರನ್ನ ಗೆಲ್ಲಿಸಿ, ಪಟಾಕಿ ಹೊಡಿರಿ. ಈ ಚುನಾವಣೆಯನ್ನ ದೇಶದ ಜನರು ನೋಡ್ತಿದ್ದಾರೆ‌. ಕೊರೊನಾ‌ ಓಡಿಸಿ ಅಂದ್ರೆ ಜಾಗಟೆ ಬಾರಿಸಿ, ಚಪ್ಪಾಳೆ ತಟ್ಟಿ ಅಂದರು ಪ್ರಧಾನಿ ಮೋದಿ. ಯಾವನ್ರಿ ಇವನು ಪ್ರಧಾನ ಮಂತ್ರಿ? ಇಂಥವರೆಲ್ಲ ಪ್ರಧಾನಿ ಆಗೋಕೆ ಲಾಯಕ್ಕೇನ್ರಿ? ನನಗೆ ವೈಯಕ್ತಿಕವಾಗಿ ಯಾರ ಮೇಲೂ ಕೋಪ ಇಲ್ಲ. ಅವರು ಮಾಡ್ತಿರೋದನ್ನ ನೋಡಿ ಕೋಪ ಬರ್ತಿದೆ ಎಂದು ಸಿದ್ದರಾಮಯ್ಯ ಗುಡುಗಿದರು.

ಇದನ್ನೂ ಓದಿ:
ಮುಸ್ಲಿಮರನ್ನಾದ್ರು ಮಾಡ್ಲಿ, ದಲಿತರನ್ನಾದರೂ ಸಿಎಂ ಮಾಡಲಿ; ಅದು ಹೈಕಮಾಂಡ್, ಶಾಸಕರಿಗೆ ಬಿಟ್ಟ ವಿಚಾರ: ಸಿದ್ದರಾಮಯ್ಯ

Hanagal ByElection Congress Rally | ಹಾನಗಲ್ ಬೈಎಲೆಕ್ಷನ್​ನಲ್ಲಿ ಸಿದ್ದರಾಮಯ್ಯ ಪ್ರಚಾರ | TV9 Kannada

(hanagal by election congress leader siddaramaiah criticises pm narendra modi)

Follow us on

Related Stories

Most Read Stories

Click on your DTH Provider to Add TV9 Kannada