ಲಾಭ ಇಲ್ಲದೇ ಹೆಚ್​ಡಿ ಕುಮಾರಸ್ವಾಮಿ ಯಾವುದೇ ಕೆಲಸ ಮಾಡಲ್ಲ: ಹೆಚ್​ಡಿಕೆ ವಿರುದ್ಧ ಜಮೀರ್ ಅಹ್ಮದ್ ವಾಗ್ದಾಳಿ

ಲಾಭ ಇಲ್ಲದೇ ಹೆಚ್​ಡಿ ಕುಮಾರಸ್ವಾಮಿ ಯಾವುದೇ ಕೆಲಸ ಮಾಡಲ್ಲ: ಹೆಚ್​ಡಿಕೆ ವಿರುದ್ಧ ಜಮೀರ್ ಅಹ್ಮದ್ ವಾಗ್ದಾಳಿ
ಜಮೀರ್ ಅಹ್ಮದ್

Zameer Ahmed: ಜಾಫರ್ ಶರೀಫ್​​ ಮೊಮ್ಮಗನ ಮೇಲೆ ಅಷ್ಟು ಪ್ರೀತಿ ಇದ್ರೆ, ಮಂಡ್ಯದಲ್ಲಿ ಶರೀಫ್​​ ಮಗನಿಗೆ ಟಿಕೆಟ್ ಕೊಡಬೆಕಿತ್ತು. ಹಾಸನ, ರಾಮನಗರದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶವಿತ್ತು. ಗೆಲ್ಲುವ ಅವಕಾಶವಿದ್ದರೂ ಯಾಕೆ ಕುಮಾರಸ್ವಾಮಿ ಟಿಕೆಟ್​ ಕೊಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

TV9kannada Web Team

| Edited By: ganapathi bhat

Oct 16, 2021 | 9:58 PM


ಬೆಂಗಳೂರು: ಬಿಜೆಪಿಗೆ ಸಹಾಯ ಮಾಡಲು ಜೆಡಿಎಸ್ ಅಭ್ಯರ್ಥಿ ಹಾಕಿದ್ದಾರೆ. ಕುಮಾರಸ್ವಾಮಿ ಡೀಲ್​ ಮಾಡಲು ಅಭ್ಯರ್ಥಿ ಹಾಕಿದ್ದಾರೆ. ಕುಮಾರಸ್ವಾಮಿ ಒಬ್ಬ ಡೀಲರ್​ ಎಂದು ಕೆಂಪೇಗೌಡ ಏರ್​​ಪೋರ್ಟ್​​ನಲ್ಲಿ ಕಾಂಗ್ರೆಸ್ ಶಾಸಕ ಜಮೀರ್​ ಅಹ್ಮದ್ ಹೇಳಿದ್ದಾರೆ. ಅ.30ರಂದು ಸಿಂದಗಿ, ಹಾನಗಲ್​ ಉಪಚುನಾವಣೆ ವಿಚಾರವಾಗಿ ಅವರು ಮಾತನಾಡಿದ್ದಾರೆ. ದೆಹಲಿಯಿಂದ ಬರ್ತಿದ್ದಂತೆ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಜಮೀರ್ ಕೆಂಡಕಾರಿದ್ದಾರೆ.

ಅಲ್ಪ ಸಂಖ್ಯಾತರಿಗೆ ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಮಾಡಿದಷ್ಟು ಒಳ್ಳೇ ಕೆಲಸ ಯಾರು ಮಾಡಲಿಲ್ಲ. ದೇವೇಗೌಡರಿಗೆ ಈಗಲೂ ಅಲ್ಪ ಅಸಂಖ್ಯಾತರ ಬಗ್ಗೆ ಕಾಳಜಿ ಇದೆ. ಅದರಲ್ಲಿ 1 ಪರ್ಸೆಂಟ್ ಸಹ ಕುಮಾರಸ್ವಾಮಿಗೆ ಕಾಳಜಿ ಇಲ್ಲ ಎಂದು ಶಾಸಕ ಜಮೀರ್​ ಹೇಳಿಕೆ ನೀಡಿದ್ದಾರೆ. 2004ರಿಂದ ಹೆಚ್​ಡಿಕೆ ಮುಸ್ಲಿಮರಿಗೆ ಏನು ಮಾಡಿದ್ದಾರೆ? ಜಾಫರ್ ಶರೀಫ್​​ ಮೊಮ್ಮಗನ ಮೇಲೆ ಅಷ್ಟು ಪ್ರೀತಿ ಇದ್ರೆ, ಮಂಡ್ಯದಲ್ಲಿ ಶರೀಫ್​​ ಮಗನಿಗೆ ಟಿಕೆಟ್ ಕೊಡಬೆಕಿತ್ತು. ಹಾಸನ, ರಾಮನಗರದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶವಿತ್ತು. ಗೆಲ್ಲುವ ಅವಕಾಶವಿದ್ದರೂ ಯಾಕೆ ಕುಮಾರಸ್ವಾಮಿ ಟಿಕೆಟ್​ ಕೊಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಈಗಲೂ ಅಲ್ಪಸಂಖ್ಯಾತರಿಗೆ ಏಕೆ ಕೊಡ್ತಿಲ್ಲ ಕುಮಾರಸ್ವಾಮಿ? ಅಲ್ಪ ಸಂಖ್ಯಾತರಿಗೆ ಸಿದ್ದರಾಮಯ್ಯರು ಏನು ಮಾಡಿದ್ದಾರೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಚರ್ಚೆಗೆ ಬರಲಿ. ಓಪನ್ ಆಗಿ ಬಂದು ಚರ್ಚೆ ಮಾಡಲಿ ಆಗ ಗೊತ್ತಾಗುತ್ತದೆ. ಅಲ್ಪಸಂಖ್ಯಾತರನ್ನ ಸಿಎಂ ಮಾಡುತ್ತೇವೆ ಎಂದು ಘೋಷಿಸಲಿ. ಜೆಡಿಎಸ್​ನಲ್ಲಿ ಘೋಷಣೆ ಮಾಡಲಿ ಆಗ ಯೋಚಿಸುತ್ತೇವೆ. ಆಗ ನಮ್ಮ ಸಮಾಜದವರು ಜೆಡಿಎಸ್ ಬಗ್ಗೆ ಯೋಚಿಸುತ್ತೇವೆ. ದೇವೆಗೌಡರು, ಸಿದ್ದರಾಮಯ್ಯ ನನ್ನ ರಾಜಕೀಯ ಗುರು ಎಂದು ಜಮೀರ್ ಹೇಳಿದ್ದಾರೆ.

ಲಾಭ ಇಲ್ಲದೇ ಕುಮಾರಸ್ವಾಮಿ ಯಾವುದೇ ಕೆಲಸ ಮಾಡಲ್ಲ
ರಾಜ್ಯಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ವ್ಯವಹಾರ ಮಾಡಿದ್ದಾರೆ. ಈ ಕುರಿತು ಮಾತನಾಡಲು ಹೆಚ್​ಡಿಕೆ ಚರ್ಚೆಗೆ ಕರೆಯಿರಿ. ಹಜ್ ಯಾತ್ರೆ ಉದ್ಘಾಟನೆಗೆ ಮುಖ್ಯಮಂತ್ರಿಗಳು ಬಂದಿದ್ದಾರೆ. ಆದರೆ ಕುಮಾರಸ್ವಾಮಿ ಉದ್ಘಾಟನೆಗೆ ಬನ್ನಿ ಅಂದ್ರೂ ಬರಲಿಲ್ಲ. ಸಿದ್ದರಾಮಯ್ಯನವರು 5 ವರ್ಷವೂ ಬಂದು ಉದ್ಘಾಟಿಸಿದ್ದಾರೆ. ಇವತ್ತು ಅಲ್ಪಸಂಖ್ಯಾತರ ಬಗ್ಗೆ ಕುಮಾರಸ್ವಾಮಿ ಮಾತಾಡ್ತಾರೆ. 2 ಕ್ಷೇತ್ರದಲ್ಲಿ ಹೆಚ್​ಡಿಕೆ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಲಾಭ ಇಲ್ಲದೇ ಕುಮಾರಸ್ವಾಮಿ ಯಾವುದೇ ಕೆಲಸ ಮಾಡಲ್ಲ. 2 ಕ್ಷೇತ್ರಗಳಲ್ಲಿ ಜೆಡಿಎಸ್​ನವರು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಬಿಜೆಪಿಗೆ ಲಾಭ ಮಾಡಿಕೊಡಲು ಜೆಡಿಎಸ್ ಅಭ್ಯರ್ಥಿ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಬ್ರಾಹಿಂಗೆ ಜ್ಞಾನ ಇಲ್ಲದೇ ಏನೇನೋ ಮಾತನಾಡುತ್ತಿದ್ದಾರೆ
ಸಿ.ಎಂ.ಇಬ್ರಾಹಿಂಗೆ ಕಾಂಗ್ರೆಸ್​ ಪಕ್ಷ ಎಲ್ಲವನ್ನೂ ಮಾಡಿದೆ. ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಬೇಡ ಅಂದರೂ ಕೇಳಲಿಲ್ಲ. ನಿಲ್ಲಬೇಡ ಅಂದರೂ ಸ್ಪರ್ಧೆ ಮಾಡಿ ಇಬ್ರಾಹಿಂ ಸೋತರು. ಆದರೂ ಇಬ್ರಾಹಿಂರನ್ನ ಪರಿಷತ್​ ಸದಸ್ಯರನ್ನ ಮಾಡಿದರು. ಇಬ್ರಾಹಿಂಗೆ ಪಕ್ಷ ಇಷ್ಟೆಲ್ಲಾ ಮಾಡಿದೆ, ಇನ್ನೇನ್ ಮಾಡ್ಬೇಕು. ಇಬ್ರಾಹಿಂ ಏನು ಮಾತನಾಡುತ್ತಾರೆ ಅವರಿಗೇ ಗೊತ್ತಾಗಲ್ಲ ಎಂದು ಜಮೀರ್ ಟೀಕಿಸಿದ್ದಾರೆ.

ಪಕ್ಷದಲ್ಲಿದ್ದುಕೊಂಡು ಇಬ್ರಾಹಿಂ ಇಷ್ಟುದಿನ ಏಕೆ ಧ್ವನಿ ಎತ್ತಲಿಲ್ಲ? ಹೊಸದಾಗಿ ಬಂದಿದ್ದ ನನ್ನನ್ನು ಮಂತ್ರಿ ಮಾಡಿಲ್ವಾ ಕಾಂಗ್ರೆಸ್​. 2013ರ ಚುನಾವಣೆಯಲ್ಲಿ ಬೇಡ ಅಂದರೂ ಸ್ಪರ್ಧಿಸಿ ಸೋತರು. ಭದ್ರಾವತಿ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದ ಸಿ.ಎಂ.ಇಬ್ರಾಹಿಂ, ಆದರೂ ಇಬ್ರಾಹಿಂರನ್ನ ಪರಿಷತ್​ ಸದಸ್ಯರನ್ನಾಗಿ ಮಾಡಿದರು. ಇಷ್ಟು ದಿನ ಇಬ್ರಾಹಿಂ ಸಿದ್ದರಾಮಯ್ಯರನ್ನ ಹೊಗಳುತ್ತಿದ್ದರು. ಈಗ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಹೆಚ್​ಡಿ ದೇವೇಗೌಡರನ್ನು ಒಂದೇ ವೇದಿಕೆಯಲ್ಲಿ ತರ್ತೇನೆ ಎಂದು ಇಬ್ರಾಹಿಂ ಹೇಳಿದ್ದಾರೆ. ಇಬ್ರಾಹಿಂರವರ ಇಂತಹ ಮಾತನ್ನು ನಂಬುವುದಕ್ಕೆ ಆಗುತ್ತಾ? ಇಬ್ರಾಹಿಂಗೆ ಜ್ಞಾನ ಇಲ್ಲದೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿಗೆ RSS​ ಗಂಧಗಾಳಿ ಗೊತ್ತಿಲ್ಲ; ಯಾವುದೋ ಒಂದು ಪುಸ್ತಕ ಓದಿ ಅದೇ ಸತ್ಯ ಅಂತಾರೆ: ಆರ್ ಅಶೋಕ್

ಇದನ್ನೂ ಓದಿ: ರೈತರ ಮೇಲೆ ಬಿ.ಎಸ್.ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ

Follow us on

Related Stories

Most Read Stories

Click on your DTH Provider to Add TV9 Kannada