ರೈತರ ಮೇಲೆ ಬಿ.ಎಸ್.ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ

ಬಿಜೆಪಿಯವರು ಮಹಿಳೆಯರು, ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ವಿರೋಧಿಗಳು ಎಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ರೈತರ ಮೇಲೆ ಬಿ.ಎಸ್.ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ
ಸಿದ್ದರಾಮಯ್ಯ

ಹಾವೇರಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುತ್ತೇವೆ. ಎಸ್​ಟಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ಕೊಡುತ್ತೇವೆ ಅಂದರು. ಅಧಿಕಾರಕ್ಕೆ ಬಂದ ಮೇಲೆ ಹೇಳಿದ ಕೆಲಸ ಮಾಡಿದ್ದಾರಾ? ಬಿಜೆಪಿಯವರು ಮಹಿಳೆಯರು, ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ವಿರೋಧಿಗಳು ಎಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಹಾವೇರಿಯಲ್ಲಿ ಗೊಬ್ಬರ ಕೇಳಿದವರ ಮೇಲೆ ಗೋಲಿಬಾರ್ ನಡೆಸಿದ್ದಾರೆ ಎಂದು ಆರೋಪ ಮಾಡಿದ ಸಿದ್ದರಾಮಯ್ಯ, ರೈತರ ಮೇಲೆ ಬಿಎಸ್​ವೈ ಗೋಲಿಬಾರ್ ಮಾಡಿಸಿದರು. ಮೊನ್ನೆ ಯುಪಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹರಿಸಿ ಕೊಂದರು. ಇದನ್ನು ಕೊಲೆಗಡುಕರ ಸರ್ಕಾರ ಎಂದು ಕರೆಯಬೇಕು ಎಂದು ತಿಳಿಸಿದರು.

ಅಕ್ಟೋಬರ್ 30ರಂದು ಮಾನೆಯವರ ಹಸ್ತದ ಗುರುತಿಗೆ ವೋಟು ಹಾಕಿ: ಸಿದ್ದರಾಮಯ್ಯ
ಏನೂ ಕೆಲಸ‌ ಮಾಡದಿದ್ದರೆ ಅವರೆ ಬಿಟ್ಟು ಹೋಗಬೇಕು. ಬಿಜೆಪಿಯವರು ಬಿಟ್ಟು ಹೋಗುವುದಿಲ್ಲ. ಭಂಡರಿವರು. ಹತ್ತು ಕೆಜಿ ಅಕ್ಕಿ ಬೇಕು ಎನ್ನುವುದಾದರೆ ನಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು ಗೆಲ್ಲಿಸಿ. ನುಂಗುವವರ ಬಗ್ಗೆ ಬಹಳ ಎಚ್ಚರದಿಂದಿರಿ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ಶಿವರಾಜ ಸಜ್ಜನರ ಅಂಥವರನ್ನು ನಂಬಬೇಡಿ. ಅಕ್ಟೋಬರ್ 30ರಂದು ಮಾನೆಯವರ ಹಸ್ತದ ಗುರುತಿಗೆ ವೋಟು ಹಾಕಿ ಕಳಿಸಿಕೊಡಿ. 2023ಕ್ಕೆ ನಾವೆ ಮತ್ತೆ ಅಧಿಕಾರಕ್ಕೆ ಬರುತ್ತೀವಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಜೆಡಿಎಸ್​ನವರು ಬಿಜೆಪಿಯವನ್ನು ಗೆಲ್ಲಿಸಲು ನಿಂತಿದ್ದಾರೆ: ಸಿದ್ದರಾಮಯ್ಯ
ಹೆಚ್​ಡಿಕೆ ಸರ್ಕಾರ ಬೀಳಿಸಿ ಬಿಎಸ್​ವೈ ಅಧಿಕಾರಕ್ಕೆ ಬಂದರು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದುಬಿಎಸ್​ವೈ ಸಿಎಂ ಆದರು. ಜೆಡಿಎಸ್​ನವರ ಬಗ್ಗೆ ನಾನು ಮಾತನಾಡಲು ಹೋಗಲ್ಲ. ನೀವು ಜೆಡಿಎಸ್​ಗೆ 1 ವೋಟ್ ಹಾಕಿದ್ರೂ ಅದು ಬಿಜೆಪಿಗೆ. ಜೆಡಿಎಸ್​ನವರು ಬಿಜೆಪಿಯವನ್ನು ಗೆಲ್ಲಿಸಲು ನಿಂತಿದ್ದಾರೆ. ಅಪ್ಪ, ಮಗನ ಮೇಲೆ, ಮಗ‌ ಅಪ್ಪನ‌ ಮೇಲೆ ಹೇಳಿದರು. ಜೆಡಿಎಸ್​ನಲ್ಲಿ ಒಬ್ಬರು ಮುಸ್ಲಿಮರನ್ನು ಮಂತ್ರಿ‌ ಮಾಡ್ಲಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಮರಿಗೆ ಮಂಡ್ಯ, ಹಾಸನದಲ್ಲಿ ಟಿಕೆಟ್ ಕೊಡಲಿ ನೋಡೋಣ. ಉಪಚುನಾವಣೆಯಲ್ಲಿ ಮಾತ್ರ ಅಲ್ಪಸಂಖ್ಯಾತರಿಗೆ ಟಿಕೆಟ್. ಜೆಡಿಎಸ್​ನವರು ರಾಜಕೀಯ ಬೂಟಾಟಿಕೆ ಅರ್ಥ ಮಾಡ್ಕೊಳ್ಳಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೊಂದಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಸಿದ್ದರಾಮಯ್ಯ ಪ್ರಚಾರ
ಅ.30ರಂದು ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯುತ್ತಿದೆ. ಗೊಂದಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಸಿದ್ದರಾಮಯ್ಯ ಮತಯಾಚನೆ ಮಾಡಲು ಇಂದು ಆಗಮಿಸಿದ್ದಾರೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 30 ಜನ ಸತ್ತಿದ್ದಾರೆ. ಆದರೆ ಈ ಬಿಜೆಪಿ ಸರ್ಕಾರ ಮೂವರು ಸತ್ತಿದ್ದಾರೆ ಅಂದಿತು. ಸತ್ತವರೆಲ್ಲರಿಗೂ 1 ಲಕ್ಷ ರೂ. ಪರಿಹಾರ ಕೊಡುತ್ತೇವೆ ಅಂದರು. ಸಚಿವರಾದ ಸುಧಾಕರ್ ಸುಳ್ಳು, ಶ್ರೀರಾಮುಲು ಸುಳ್ಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಳ್ಳು ಬರೀ ಸುಳ್ಳು. 15 ಲಕ್ಷ ಕೊಡ್ತೀನಿ ಅಂದರು, 15 ಪೈಸೆನಾದ್ರೂ ಕೊಟ್ರಾ? ಯುವಕರಿಗೆ ಏನು ಗೊತ್ತಿಲ್ಲ ಮೋದಿ ಮೋದಿ ಅಂತಾರೆ ಎಂದು ಗೊಂದಿ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಬಿಜೆಪಿಯವರಿಗೆ ಅಭಿವೃದ್ಧಿ ಮಾಡಬೇಕು ಎಂಬ ವಿಚಾರವಿಲ್ಲ: ಮಾಜಿ ಸಚಿವ ಕೃಷ್ಣ ಭೈರೇಗೌಡ
ಏನೂ ಮಾಡದಿದ್ದರೂ ವೋಟ್ ಹಾಕುತ್ತಾರೆ ಎಂಬ ದುರಹಂಕಾರ ಬಿಜೆಪಿ ಅವರಿಗೆ ಇದೆ. ಬಿಜೆಪಿಯವರಿಗೆ ಅಭಿವೃದ್ಧಿ ಮಾಡಬೇಕು ಎಂಬ ವಿಚಾರವಿಲ್ಲ. ಜನ ವೋಟ್ ಹಾಕುತ್ತಾರೆಂದು ಬಿಜೆಪಿಯವರ ತಲೆಯಲ್ಲಿದೆ. ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ಕಿಮ್ಮತ್ತು ಕೊಟ್ಟಿಲ್ಲ. ಬ್ರಿಟಿಷರು ಭಾರತೀಯರಿಗೆ ಹೇಗೆ ಗುಂಡಿಕ್ಕಿ ಕೊಲ್ಲುತ್ತಿದ್ದರೋ ಹಾಗೆ, ಈಗ ಬಿಜೆಪಿಯವರು ರೈತರ ವಿಚಾರದಲ್ಲಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ನಡೆದ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಶ್ರೀಮಂತರು ಸತ್ತರೆ ಕಣ್ಣೀರು ಸುರಿಸುವ ಪ್ರಧಾನಿ ಮೋದಿ, ಇದುವರೆಗೆ ನೂರಾರು ರೈತರು ಸತ್ತರೂ ಕ್ಯಾರೇ ಎಂದಿಲ್ಲ. ದೆಹಲಿ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಯವರ ಕಣ್ಣಿಗೆ ಭಾರತೀಯರಾಗಿ ಕಾಣುತ್ತಿಲ್ಲವೇ? ಹೋರಾಟಗಾರರನ್ನು ಉಗ್ರರು ಎನ್ನುತ್ತಾರೆ ಬಿಜೆಪಿಯವರು. ಅಧಿಕಾರದ ಅಮಲಿನಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮೂರ್ಖರಾಗುತ್ತೇವೆ. ಬಿಜೆಪಿ ನಾಯಕರು ಭಸ್ಮಾಸುರನ ಮಟ್ಟಕ್ಕೆ ಇಳಿದಿದ್ದಾರೆ. ಮತ ಹಾಕಿ ಆಯ್ಕೆ ಮಾಡಿದ ರೈತರನ್ನು ಸುಡಲು ಹೊರಟಿದ್ದಾರೆ. ವೋಟ್ ಹಾಕಿಸಿಕೊಳ್ಳುವವರೆಗೆ ಹಿಂದೂ ಹಿಂದೂ ಅಂತಾರೆ. ಅಧಿಕಾರಕ್ಕೆ ಬಂದ ಮೇಲೆ ಅಂಬಾನಿ, ಅದಾನಿ ಮಾತ್ರ ಕಾಣುತ್ತಾರೆ ಎಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಉಪ ಚುನಾವಣಾ ಪ್ರಚಾರದಲ್ಲಿ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಕಾಂಗ್ರೆಸ್‌ನ ‘ರಾಜಕೀಯ ನರಮೇಧ’ಕ್ಕೆ ಕಾರಣ ಯಾರು? ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್

ಮೋದಿ ವಿರುದ್ಧ ಮಾತಾಡಿದ್ರೆ ದೇಶದ್ರೋಹಿಯಂತೆ, ಯಾವನ್ರಿ ಇವನು ಪ್ರಧಾನ ಮಂತ್ರಿ? -ಸಿದ್ದರಾಮಯ್ಯ ಗುಡುಗು

Click on your DTH Provider to Add TV9 Kannada