RSS ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ: ಎಲ್ಲ ವಿವಿಗಳಲ್ಲಿ ಆರ್​ಎಸ್​ಎಸ್​ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ!

RSS: ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ‌ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಆರ್​ಎಸ್​ಎಸ್​ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಇವತ್ತು ಈ ಸರ್ಕಾರದಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಆರ್​ಎಸ್​ಎಸ್​ನ ಕಾರ್ಯಕರ್ತರನ್ನ ಸಿಂಡಿಕೇಟ್ ಮೆಂಬರ್ ಮಾಡಿಕೊಂಡಿದ್ದಾರೆ. 40 ವರ್ಷದ ಹಿಂದಿನ ಆರ್​ಎಸ್​ಎಸ್​ ಬೇರೆ, ಈಗಿನ ಆರ್​ಎಸ್​ಎಸ್​ ಬೇರೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

RSS ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ: ಎಲ್ಲ ವಿವಿಗಳಲ್ಲಿ ಆರ್​ಎಸ್​ಎಸ್​ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ!
2013ರಿಂದ ನನ್ನ ಬಗ್ಗೆ ಅಪಪ್ರಚಾರ, ಜೆಡಿಎಸ್ ಕಟ್ಟಲು ಕಷ್ಟ ಪಟ್ಟಿದ್ದೇನೆ- ಕುಮಾರಸ್ವಾಮಿ ಕಣ್ಣಿರು, ಭಾವುಕ ನುಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 16, 2021 | 1:16 PM

ರಾಮನಗರ: ಆರ್​ಎಸ್​ಎಸ್ ವಿರುದ್ಧ ಇತ್ತೀಚೆಗೆ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿರುವ ಜೆಡಿಎಸ್ ನಾಯಕ, ​ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಹೊಸ ಬಾಂಬ್ ಸಿಡಿಸಿದ್ದಾರೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆರ್​ಎಸ್​ಎಸ್​ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ‌ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಆರ್​ಎಸ್​ಎಸ್​ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಇವತ್ತು ಈ ಸರ್ಕಾರದಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಆರ್​ಎಸ್​ಎಸ್​ನ ಕಾರ್ಯಕರ್ತರನ್ನ ಸಿಂಡಿಕೇಟ್ ಮೆಂಬರ್ ಮಾಡಿಕೊಂಡಿದ್ದಾರೆ. ಕೆಲಸ ಆಗಲು ಒಂದು ಎರಡು ಲಕ್ಷ ರೂಪಾಯಿ ಡಿಮ್ಯಾಂಡ್ ಇಟ್ಟಿದ್ದಾರೆ. 40 ವರ್ಷದ ಹಿಂದಿನ ಆರ್​ಎಸ್​ಎಸ್​ ಬೇರೆ, ಈಗಿನ ಆರ್​ಎಸ್​ಎಸ್​ ಬೇರೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಅಡ್ವಾಣಿಯವರು ರಥಯಾತ್ರೆ: ಕಲೆಕ್ಟ್ ಆದ ಹಣ ಎಷ್ಟು, ಅದು ಎಲ್ಲಿದೆ, ಲೆಕ್ಕ ಯಾರು ಕೊಟ್ಟಿದ್ದಾರೆ ಆರ್​ಎಸ್​​ಎಸ್ ಮುಖ್ಯಸ್ಥ ಭಾಗವತ್ ದೇಶ ಒಡೆಯುವ ಹೇಳಿಕೆಗಳನ್ನು ಕೊಟ್ಟಿದ್ದಾರೆ. ದೇಶ ಏನು ಇವರಿಗೆ ಗುತ್ತಿಗೆ ಕೊಟ್ಟಿದ್ದೀರಾ? ಅಡ್ವಾಣಿಯವರು ರಥಯಾತ್ರೆ ಮಾಡಿದ್ದರು. ಆ ಸಂದರ್ಭದಲ್ಲಿ ಕಲೆಕ್ಟ್ ಆದ ಹಣ ಎಷ್ಟು, ಆ ಹಣ ಎಲ್ಲಿ ಇದೆ? ಅದರ ಬಗ್ಗೆ ಲೆಕ್ಕ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ರಾಮ ಮಂದಿರ ವಿಚಾರದಲ್ಲೂ ಲೋಪವಿದೆ. ರಾಮನ ಹೆಸರಲ್ಲೂ ಸಂಗ್ರಹವಾದ ಹಣದ ಲೆಕ್ಕ ಯಾರು ಇಟ್ಟಿದ್ದಾರೆ? ರಾಮನ ಹೆಸರಿನ ದುರುಪಯೋಗ ಕೂಡ ಆಗಿದೆ ಎಂದು ವಿಷಾದದ ದನಿಯಲ್ಲಿ ಹೇಳಿದರು.

ಸಿದ್ದರಾಮಯ್ಯಗೆ ಮತ್ತೆ ಐದು ಪ್ರಶ್ನೆಗಳ ಸುರಿಮಳೆ ಮಾಡಿದ ಹೆಚ್ ಡಿ ಕುಮಾರಸ್ವಾಮಿ: ಈ ಮಧ್ಯೆ, ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್ ಡಿ ಕುಮಾರಸ್ವಾಮಿ ಅವರು ಸಿಎಂ ಇಬ್ರಾಹಿಂ ತಮಗೆ ಆದ ಅನುಭವವನ್ನ ಹೇಳಿದ್ದಾರೆ. ಕೇವಲ ಭಾಷಣ ಮಾಡಲು ಮಾತ್ರ ಇಬ್ರಾಹಿಂ ಅವರನ್ನ ಇಟ್ಟುಕೊಂಡಿದ್ರು. ನಮ್ಮ ಪಕ್ಷದ ಅಭ್ಯರ್ಥಿ ನಿಲ್ಲಿಸಿರುವ ಬಗ್ಗೆ ಪದೇ ಪದೇ ಸಿದ್ದರಾಮಯ್ಯ ಚರ್ಚೆ ಮಾಡುತ್ತಾರೆ. ಜೆಡಿಎಸ್ ನಿಂದ ಮುಸ್ಲಿಂ ಅಭ್ಯರ್ಥಿ ಯನ್ನ ನಿಲ್ಲಿಸುವುದು ಕಾಂಗ್ರೆಸ್ ಅಭ್ಯರ್ಥಿ ಯನ್ನ ಸೋಲಿಸಲು ಎಂದು ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಬಿ ಟೀಂ ಎಂದು ಅಪಪ್ರಚಾರ ಮಾಡಿದ್ದರು. ಇದಕ್ಕಾಗಿಯೇ ಐದು ಪ್ರಶ್ನೆಗಳನ್ನ ಅವರ ಮುಂದೆ ಇಟ್ಟಿದ್ದೇನೆ.

ಶಾಸಕಾಂಗ ಪಕ್ಷದ ನಾಯಕನಾಗಿ 2012 ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅವರ ಪಕ್ಷದ ಅಭ್ಯರ್ಥಿಯನ್ನ ಸೋಲಿಸುವ ಕುತಂತ್ರ ಮಾಡಿದವರು ಯಾರು? ಕಾಂಗ್ರೆಸ್ ನ ಮುಸ್ಲಿಂ ಅಭ್ಯರ್ಥಿಯನ್ನ ಸೋಲಿಸುವಲ್ಲಿ ಇವರ ಪಾತ್ರ ಏನು? ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುವವರು ನಾವು ಮಾತ್ರ ಎನ್ನುತ್ತಾರೆ, ರೋಷನ್ ಬೇಗ್ ಅವರಿಗೆ ಏನ್ ಆಯ್ತು? ನೋಟಿಸ್ ಕೊಟ್ಟು ಸಸ್ಪೆಂಡ್ ಮಾಡಿದ್ರು. ಜಾಫರ್ ಷರೀಪ್ ಅವರ ಮೊಮ್ಮಗನನ್ನ ಸೋಲಿಸುವಲ್ಲಿ ಇವರ ಮಗನ ಪಾತ್ರ ಏನಿತ್ತು? ಸಲೀಂ ಇದೀಗ ದೇವತಾ ಮನುಷ್ಯ ಅಂತಾ ಹೇಳುತ್ತಾನೆ. ಅವನನ್ನ ಸಸ್ಪೆಂಡ್ ಮಾಡಿದ್ದೀರಿ. ಇಷ್ಟು ತರಾತುರಿಯಲ್ಲಿ ನಿರ್ಧಾರಗಳನ್ನ ತೆಗೆದುಕೊಳ್ಳುತ್ತೀರಿ ಎಂದು ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಗಳನ್ನು ಪ್ರಶ್ನಿಸುತ್ತಾ​ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Congressನಲ್ಲಿ Muslim ನಾಯಕರನ್ನು Target ಮಾಡಿ ಮುಗಿಸ್ತಿದ್ದಾರಾ? Siddaramaiah ವಿರುದ್ಧ ಮತ್ತೆ ಗುಡುಗಿದ HDK

(University syndicate members are filled with rss members alleges hd kumaraswamy)

Published On - 12:47 pm, Sat, 16 October 21