AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರನ್ನಾದ್ರು ಮಾಡ್ಲಿ, ದಲಿತರನ್ನಾದರೂ ಸಿಎಂ ಮಾಡಲಿ; ಅದು ಹೈಕಮಾಂಡ್, ಶಾಸಕರಿಗೆ ಬಿಟ್ಟ ವಿಚಾರ: ಸಿದ್ದರಾಮಯ್ಯ

siddaramaiah: ಬಿಎಸ್​ ಯಡಿಯೂರಪ್ಪ ಆರ್​ಎಸ್​ಎಸ್​ನಿಂದ ಬಂದವರು‌. ನಾವು- ಅವರು ತದ್ವಿರುದ್ಧ. ಅವರನ್ನ ಭೇಟಿಯಾಗಿದ್ದು ಸುಳ್ಳು. ಅಧಿಕಾರದಲ್ಲಿರೋರ ಮನೆ ಬಾಗಿಲಿಗೆ ನಾನೆಂದೂ ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್‌. ಹೀಗಾಗಿ ನಾನು BSY ಭೇಟಿಯಾಗಿಲ್ಲ ಎಂದು ಸ್ಪಷ್ಟೋಕ್ತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮುಸ್ಲಿಮರನ್ನಾದ್ರು ಮಾಡ್ಲಿ, ದಲಿತರನ್ನಾದರೂ ಸಿಎಂ ಮಾಡಲಿ; ಅದು ಹೈಕಮಾಂಡ್, ಶಾಸಕರಿಗೆ ಬಿಟ್ಟ ವಿಚಾರ: ಸಿದ್ದರಾಮಯ್ಯ
ಸಿದ್ದರಾಮಯ್ಯ
TV9 Web
| Edited By: |

Updated on:Oct 16, 2021 | 1:24 PM

Share

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ​ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಯಾರಾದ್ರೂ ಬೇಜಾರಿಲ್ಲ. ಮುಸ್ಲಿಂರನ್ನಾದ್ರು ಮಾಡ್ಲಿ, ದಲಿತರನ್ನಾದ್ರು ಸಿಎಂ ಮಾಡಲಿ. ಸಿಎಂ ಮಾಡೋದು ಹೈಕಮಾಂಡ್ ಮತ್ತು ಶಾಸಕರಿಗೆ ಬಿಟ್ಟ ವಿಚಾರ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  ಇನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಮಾತನಾಡುತ್ತಾ ಬೊಮ್ಮಾಯಿಗೆ ಆರ್​ಎಸ್​ಎಸ್​ ಅನ್ನು ಹೊಗಳದಿದ್ದರೇ ಖುರ್ಚಿ ಉಳಿಯಬೇಕಲ್ಲಾ!? ಅವರು ಪಾಪ ಆರ್​ಎಸ್​ಎಸ್​ ನಿಂದ ಬಂದವರಲ್ಲ. ಅವರ ತಂದೆ ಕೂಡಾ ಆರ್​ಎಸ್​ಎಸ್​ ನವರನವರಲ್ಲ. ನೈತಿಕ ಪೊಲೀಸರಿಗೆ ಆಗ್ಲೇ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಯಡಿಯೂರಪ್ಪ ಮತ್ತು ನಾನು ಭೇಟಿಯಾಗಿದ್ದು ಅಪ್ಪಟ ಸುಳ್ಳು. ನಾವಿಬ್ಬರೂ ಭೇಟಿಯಾಗಿದ್ದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ಬಿಎಸ್​ ಯಡಿಯೂರಪ್ಪ ಆರ್​ಎಸ್​ಎಸ್​ನಿಂದ ಬಂದವರು‌. ನಾವು- ಅವರು ತದ್ವಿರುದ್ಧ. ಅವರನ್ನ ಭೇಟಿಯಾಗಿದ್ದು ಸುಳ್ಳು. ಅಧಿಕಾರದಲ್ಲಿರೋರ ಮನೆ ಬಾಗಿಲಿಗೆ ನಾನೆಂದೂ ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್‌. ಹೀಗಾಗಿ ನಾನು BSY ಭೇಟಿಯಾಗಿಲ್ಲ ಎಂದು ಸ್ಪಷ್ಟೋಕ್ತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದೇ ವೇಳೆ, ಕಾಂಗ್ರೆಸ್​ ಮುಖಂಡರಾದ ಸಲೀಂ-ಉಗ್ರಪ್ಪ ಸಂಭಾಷಣೆ ಪ್ರಕರಣದ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಅನ್ನೋ ಶೆಟ್ಟರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಹಾಗಿದ್ರೆ ಯತ್ನಾಳ್, ವಿಶ್ವಾನಾಥ ಅವರಿಗೂ ನಾನೇ ಹೇಳಿದ್ನಾ..? ಹಿಂದೆ ಅನಂತಕುಮಾರ-ಬಿಎಸ್ ವೈ ಮಾತನಾಡಿದ್ದರು ಅದಕ್ಕೂ ನಾನೇ ಕಾರಣನಾ..? ಇವರೆಲ್ಲಾ ಸಿಎಂ ಆದವರು.. ಹೀಗೇ ಮತನಾಡಿದ್ರೆ ಹೇಗೆ? ಎಲ್ಲದಕ್ಕೂ ಸಿದ್ದರಾಮಯ್ಯ ಟಾರ್ಗಟ್ ಮಾಡಿದ್ರೆ ಹೇಗೆ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

Also Read: ಬಿಎಸ್‌ವೈ ಅಧಿಕಾರ ಕಳೆದುಕೊಳ್ಳಲು ಆರ್​ಎಸ್​ಎಸ್​​ ಕಾರಣ; ಆರ್​ಎಸ್​ಎಸ್ ಬಗ್ಗೆ ನಿಜ ಏನೆಂದು ಜನರೇ ಚರ್ಚೆ ಮಾಡಲಿ: ಹೆಚ್‌ಡಿಕೆ

Also Read: ಸಿದ್ದರಾಮಯ್ಯಗೆ ಆರ್​ಎಸ್​ಎಸ್​ ಶಾಖೆಗೆ ಬರುವಂತೆ ಆಹ್ವಾನಿಸಿದ ಸಿ ಟಿ ರವಿ

ಸರ್​.. ನೀವು, ಯಡಿಯೂರಪ್ಪ ಭೇಟಿ ಆಗಿ ಮಾತ್ನಾಡಿದ್ದಾರೆ ಅಂತ ಸುದ್ದಿ ಆಗ್ತಿದೆ ಅಂದ್ರೆ.. | Siddu | Tv9kannada

(congress leader siddaramaiah says let anybody be chief minister of karnataka congress high command to take decision)

Published On - 9:57 am, Sat, 16 October 21

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ