ತೈಲ ದರ ಇಳಿಕೆ ಬಗ್ಗೆ ಸಿಎಂ ಬೊಮ್ಮಾಯಿ ಸುಳಿವು; ಚುನಾವಣೆಗೋಸ್ಕರ ಹೀಗೆ ಮಾತಾಡಿದ್ದಾರೆ ಎಂದ ಸಿದ್ದರಾಮಯ್ಯ
Siddaramaiah: ಸೆಪ್ಟೆಂಬರ್‌ನಿಂದ ಈವರೆಗೆ 9 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. ತೈಲ ಬೆಲೆ ಹೆಚ್ಚಳದಿಂದ ಸರ್ಕಾರದ ಆದಾಯ ಹೆಚ್ಚಾಗಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆ 10 ರೂಪಾಯಿ ಕಡಿಮೆ ಮಾಡಲಿ ಎಂದು ಮಾಸನಕಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹಾವೇರಿ: ನರೇಂದ್ರ ಮೋದಿ ಪ್ರಧಾನಿಯಾಗಿ 7 ವರ್ಷ ಕಳೆಯಿತು. ಮೋದಿ ಏನಾದ್ರೂ ಮಾಡಿದ್ದಾರಾ ಎಂದು ಹಾನಗಲ್ ಉಪಚುನಾವಣೆ ಕಾಂಗ್ರೆಸ್ ಪ್ರಚಾರ ವೇಳೆ ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು (ಅಕ್ಟೋಬರ್ 17) ಪ್ರಶ್ನಿಸಿದ್ದಾರೆ. ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದ್ರು. ಅದಕ್ಕೆ ನಮ್ಮ ಯುವಕರೆಲ್ಲಾ ಮೋದಿ ಮೋದಿ ಎಂದಿದ್ದರು. ಆದರೆ ಈಗ ಈ ಯುವಕರೆಲ್ಲಾ ಸುಮ್ಮನಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೈಎಲೆಕ್ಷನ್ ಬಳಿಕ ತೈಲ ದರ ಇಳಿಕೆ ಮಾಡುವ ಚಿಂತನೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಚುನಾವಣೆಗೋಸ್ಕರ ಸಿಎಂ ಬೊಮ್ಮಾಯಿ ಹೀಗೆ ಮಾತನಾಡಿದ್ದಾರೆ. ಸೆಪ್ಟೆಂಬರ್‌ನಿಂದ ಈವರೆಗೆ 9 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. ತೈಲ ಬೆಲೆ ಹೆಚ್ಚಳದಿಂದ ಸರ್ಕಾರದ ಆದಾಯ ಹೆಚ್ಚಾಗಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆ 10 ರೂಪಾಯಿ ಕಡಿಮೆ ಮಾಡಲಿ ಎಂದು ಮಾಸನಕಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ನಾಲಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತಾಡಿ: ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ಎಚ್ಚರಿಕೆ ಇತ್ತ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ, ಉಪಚುನಾವಣೆ ಪ್ರಚಾರ ಜೋರಾಗಿದೆ. ಸಿದ್ದರಾಮಯ್ಯ ನಾಲಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತಾಡಿ. ಪ್ರಧಾನಿ ಮೋದಿಯ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೀರಿ. ನಿಮಗೆ ಮಾನ, ಮರ್ಯಾದೆ ಅನ್ನೋದು ಇಲ್ವಾ. ದೇವೇಗೌಡರ ಜೊತೆಗಿದ್ದು ನೀವು ಅವರನ್ನು ಬಿಟ್ಟುಬಂದಿದ್ದೀರಿ. ನಾವು ನಿಮ್ಮಂತಲ್ಲ, ನಾಲಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತಾಡಿ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ನಮ್ಮ ಬಸ್ ಇನ್ನೂ ಒಂದೂವರೆ ವರ್ಷ ಓಡುತ್ತದೆ. ಕಾಂಗ್ರೆಸ್ ಬಸ್ ನಿಂತು ಹೋಗಿದೆ ಎಂದು ಜೆ.ಸಿ.ಮಾಧುಸ್ವಾಮಿ ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ. ಈಗ ನೀವೇ ಯಾವ ಬಸ್ ಹತ್ತುತ್ತೀರೆಂದು ನಿರ್ಧರಿಸಿ ಎಂದು ಹಾನಗಲ್ ಉಪಚುನಾವಣೆ ಬಿಜೆಪಿ ಪ್ರಚಾರ ಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಚ್ಚಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗುತ್ತೇವೆಂದು ಕಚ್ಚಾಡುತ್ತಿದ್ದಾರೆ ಎಂದು ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.
ಇದನ್ನೂ ಓದಿ: ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ: ಚುನಾವಣಾ ಪ್ರಚಾರ ವೇಳೆ ಬಸವರಾಜ ಬೊಮ್ಮಾಯಿ ವಾಗ್ದಾಳಿ
Published On - 4:39 pm, Sun, 17 October 21