ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ: ಚುನಾವಣಾ ಪ್ರಚಾರ ವೇಳೆ ಬಸವರಾಜ ಬೊಮ್ಮಾಯಿ ವಾಗ್ದಾಳಿ

BJP Karnataka: ಕಾಂಗ್ರೆಸ್ ಮುಗಿಸಲು ಕಾಂಗ್ರೆಸ್ ಪಕ್ಷದವರೇ ಸಾಕು ಎಂದು ಪ್ರಚಾರ ಸಭೆಯಲ್ಲಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ನಾವು ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಲು ಬಿಡಲ್ಲ. ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ: ಚುನಾವಣಾ ಪ್ರಚಾರ ವೇಳೆ ಬಸವರಾಜ ಬೊಮ್ಮಾಯಿ ವಾಗ್ದಾಳಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ganapathi bhat

Updated on:Oct 17, 2021 | 6:12 PM

ಹಾವೇರಿ: ಸಿ.ಎಂ. ಉದಾಸಿ 4 ದಶಕಗಳ ಕಾಲ ಕ್ಷೇತ್ರ ಪ್ರತಿನಿಧಿಸಿದ್ದರು. ದಿವಂಗತ ಸಿ.ಎಂ.ಉದಾಸಿಗೆ ಮತ್ಯಾರೂ ಇಲ್ಲಿ ಸಾಟಿ ಇಲ್ಲ. ಉದಾಸಿ ಏನು ಮಾಡಿದ್ದಾರೆಂದು ಕಾಂಗ್ರೆಸ್‌ನವರೇ ಹೇಳ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಈ ಕ್ಷೇತ್ರವನ್ನು ಪೂರ್ಣವಾಗಿ ನೋಡಿಲ್ಲ. ನಿನ್ನೆ ಮೊನ್ನೆ ಬಂದು ದೊಡ್ಡ ಸಾಧನೆ ಮಾಡಿದಂತೆ ಹೇಳ್ತಿದ್ದಾರೆ. ಕ್ಷೇತ್ರದ ಜನರ ಬಳಿ ಮತ ಕೇಳುವುದಕ್ಕೆ ಬಂದಿದ್ದಾರೆ. ಇಂತಹ ಎಷ್ಟು ಜನರನ್ನು ನೀವು ನೋಡಿಲ್ಲ ಹೇಳಿ. ಕೊರೊನಾ ಸಂದರ್ಭದಲ್ಲಿ ಬಿ.ಎಸ್‌. ಯಡಿಯೂರಪ್ಪರಿಂದ ಉತ್ತಮ ಆಡಳಿತ ಲಭಿಸಿದೆ. ಕೊರೊನಾ ವೇಳೆ ನೂರಾರು ಜನರ ಪ್ರಾಣ ಉಳಿಸಿದ್ದು ಬಿಜೆಪಿ. ಈ ಕ್ಷೇತ್ರದಲ್ಲಿ 20 ಸಾವಿರ ಫುಡ್ ಕಿಟ್ ಕೊಟ್ಟಿದ್ದೇವೆ. ನಾವು ಶಾಶ್ವತವಾಗಿ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ಅಚ್ಛೇ ದಿನ್ ಬರಲ್ಲ. ಪಿಸುಮಾತು ಯಾಕೆ ಆರಂಭ ಆಗಿದೆ ಎಂದು ಗೊತ್ತಾ? ಸೋನಿಯಾ ಗಾಂಧಿ ದಿಲ್ಲಿಗೆ ಬರುವಂತೆ ಹೇಳಿದರು. ಇಲ್ಲೇ ಸ್ಥಾನ ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ಪಿಸುಮಾತು ಶುರು ಮಾಡಿದ್ದಾರೆ. ಕಾಂಗ್ರೆಸ್ ಮುಗಿಸಲು ಬೇರೆ ಯಾರೂ ಬೇಕಾಗಿಲ್ಲ. ಕಾಂಗ್ರೆಸ್ ಮುಗಿಸಲು ಕಾಂಗ್ರೆಸ್ ಪಕ್ಷದವರೇ ಸಾಕು ಎಂದು ಪ್ರಚಾರ ಸಭೆಯಲ್ಲಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ನಾವು ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಲು ಬಿಡಲ್ಲ. ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ ಒಬ್ಬರ ಕೈಯಲ್ಲಿ ಬಾರುಕೋಲು, ಮತ್ತೊಬ್ಬರ ಕೈಯಲ್ಲಿ ಹಗ್ಗ ಇರುತ್ತೆ. ಒಮ್ಮೆ ಸೈಕಲ್ ಮೇಲೆ ಬಂದರು, ಏನ್ ನಾಟಕ ಮಾಡ್ತಾರೆ. ಇವರೆಲ್ಲ ಬೆಂಜ್ ಕಾರ್​​ ಗಿರಾಕಿಗಳು ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಣ್ಣ ನಿನ್ನೆ ಬೆಂಜ್ ಕಾರಿನಲ್ಲಿ ಬಂದಿದ್ದರು. ಈ ಬೆಂಜ್ ಕಾರಿನ ನಾಯಕರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಚಾರ ಸಭೆಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿದ್ದು ದಿ. ಉದಾಸಿ ಅವರು ಎಂದು ಶಿವಕುಮಾರ ಉದಾಸಿ ಹೇಳಿಕೆ ನೀಡಿದ್ದಾರೆ. ಚುನಾವಣೆ ಬಂದಾಗ ಮಾತ್ರ ಸಕ್ಕರೆ‌ ಕಾರ್ಖಾನೆ ನೆನಪಾಗುತ್ತೆ. ಸುಳ್ಳು ಹೇಳೋದು ಕಾಂಗ್ರೆಸ್ ಡಿಎನ್ಎ, ಅವರ ಸಂಸ್ಕೃತಿಯಲ್ಲೇ ಇದೆ. ಒಂದು ಸುಳ್ಳನ್ನೇ ನೂರು ಬಾರಿ ಹೇಳೋದು ಕಾಂಗ್ರೆಸ್ ಪಕ್ಷದ ಸ್ವಭಾವ. ಸಿದ್ದರಾಮಯ್ಯ ಎಲ್ಲಿ ಹೋದರೂ ಅಕ್ಕಿಯ ಬಗ್ಗೆ ಹೇಳುತ್ತಾರೆ. ಆದ್ರೆ ಈಗ ಕೊಡುತ್ತಿರುವ ಅಕ್ಕಿ ಕೇಂದ್ರ ಸರ್ಕಾರದ್ದು ಎಂದು ಹಾನಗಲ್‌ ಪಟ್ಟಣದಲ್ಲಿ ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ.

ನಾಲಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತಾಡಿ: ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ಎಚ್ಚರಿಕೆ ಸಿದ್ದರಾಮಯ್ಯ ನಾಲಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತಾಡಿ. ಪ್ರಧಾನಿ ಮೋದಿಯ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೀರಿ. ನಿಮಗೆ ಮಾನ, ಮರ್ಯಾದೆ ಅನ್ನೋದು ಇಲ್ವಾ. ದೇವೇಗೌಡರ ಜೊತೆಗಿದ್ದು ನೀವು ಅವರನ್ನು ಬಿಟ್ಟುಬಂದಿದ್ದೀರಿ. ನಾವು ನಿಮ್ಮಂತಲ್ಲ, ನಾಲಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತಾಡಿ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.

ನಮ್ಮ ಬಸ್ ಇನ್ನೂ ಒಂದೂವರೆ ವರ್ಷ ಓಡುತ್ತದೆ. ಕಾಂಗ್ರೆಸ್ ಬಸ್ ನಿಂತು ಹೋಗಿದೆ ಎಂದು ಜೆ.ಸಿ.ಮಾಧುಸ್ವಾಮಿ ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ. ಈಗ ನೀವೇ ಯಾವ ಬಸ್ ಹತ್ತುತ್ತೀರೆಂದು ನಿರ್ಧರಿಸಿ ಎಂದು ಹಾನಗಲ್ ಉಪಚುನಾವಣೆ ಬಿಜೆಪಿ ಪ್ರಚಾರ ಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಚ್ಚಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗುತ್ತೇವೆಂದು ಕಚ್ಚಾಡುತ್ತಿದ್ದಾರೆ ಎಂದು ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

ಬೈಎಲೆಕ್ಷನ್ ಫಲಿತಾಂಶ ಬಳಿಕ ಕಾಂಗ್ರೆಸ್‌ಗೆ ಬೀಗ ಹಾಕ್ತಾರೆ: ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಪಕ್ಷದ ಕೊಡುಗೆ ಭಯೋತ್ಪಾದನೆ, ಭ್ರಷ್ಟಾಚಾರ. ಭಯೋತ್ಪಾದನೆ, ಭ್ರಷ್ಟಾಚಾರ ಮುಕ್ತ ದೇಶ ಮಾಡಿದ್ದು ಮೋದಿ. ಬೈಎಲೆಕ್ಷನ್ ಫಲಿತಾಂಶ ಬಳಿಕ ಕಾಂಗ್ರೆಸ್‌ಗೆ ಬೀಗ ಹಾಕ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಡಿಕೆಶಿ ಮಾತ್ರ ಉಳಿಯುತ್ತಾರೆ ಎಂದು ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಹೇಳಿದ್ದಾರೆ. ಕುಣಿಯಲು ಬಾರದವರು ನೆಲ ಡೊಂಕು ಅಂದರಂತೆ. ಅದೇ ರೀತಿ ಈಗ ಕಾಂಗ್ರೆಸ್‌ನವರು ಹೇಳಿಕೆ ನೀಡ್ತಿದ್ದಾರೆ ಎಂದು ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಕಿತ್ತಾಡುವ ಜೋಡೆತ್ತುಗಳಿವೆ. ಚುನಾವಣೆಯಲ್ಲಿ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾರೆ.

ದುರ್ಜನರನ್ನು ಗೆಲ್ಲಿಸಬೇಡಿ, ಸಜ್ಜನರನ್ನು ಗೆಲ್ಲಿಸಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಹೇಳಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಅಭಿವೃದ್ಧಿ ಮಾಡಿದರೆಂದು ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೋಟ್ಯಂತರ ರೂಪಾಯಿ ಸಾಲ ಮಾಡಲಾಗಿದೆ. ಸಾಲ ಮಾಡಿ ರಾಜ್ಯವನ್ನು ಒತ್ತೆ ಇಟ್ಟರು ಎಂದು ಹಾನಗಲ್‌ನಲ್ಲಿ ಸಚಿವ ಬಿ.ಸಿ. ಪಾಟೀಲ್ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಬಿಜೆಪಿ ಅಥವಾ ಜೆಡಿಎಸ್​ನಿಂದ ಸುಪಾರಿ ಪಡೆದು ಸಲೀಂ ಹೇಳಿಕೆ ನೀಡಿರಬಹುದು: ಎಂ ಲಕ್ಷ್ಮಣ್ ಆರೋಪ

Published On - 3:46 pm, Sun, 17 October 21