ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ನಿರ್ಧಾರ!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರಕ್ಕೆ ಮುಂದಿನ ವಾರದ ವರೆಗೆ ಲಾರಿ ಮಾಲೀಕರ ಸಂಘ ಡೆಡ್ ಲೈನ್ ಕೊಟ್ಟಿದೆ. ಈಗಾಗಲೇ ಒಂದು ವರ್ಷದಲ್ಲಿ 26 ರೂ. ಹೆಚ್ಚಳವಾಗಿದೆ.
ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ (Diesel) ಬೆಲೆ ಏರಿಕೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘ (Lorry Owners Association) ನಿರ್ಧರಿಸಿದೆ. ರಾಜ್ಯಾದ್ಯಂತ ಲಾರಿ ಮುಷ್ಕರದ ಬಗ್ಗೆ ಲಾರಿ ಮಾಲೀಕರ ಸಂಘ ಅಕ್ಟೋಬರ್ 23ರಂದು ತೀರ್ಮಾನ ಕೈಗೊಳ್ಳಲಿದೆ. ಅಕ್ಟೋಬರ್ 23ರ ರೊಳಗೆ ರಾಜ್ಯ ಸರ್ಕಾರ ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡಿದರೆ ಮಾತ್ರ ಲಾರಿಗಳು ರಸ್ತೆಗೆ ಇಳಿಯುತ್ತವೆ. ಇಲ್ಲವಾದಲ್ಲಿ ಗೂಡ್ಸ್ ವೆಹಿಕಲ್ಗಳ ಓಡಾಟ ರಾಜ್ಯಾದ್ಯಂತ ನಿಲ್ಲುತ್ತವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರಕ್ಕೆ ಮುಂದಿನ ವಾರದ ವರೆಗೆ ಲಾರಿ ಮಾಲೀಕರ ಸಂಘ ಡೆಡ್ ಲೈನ್ ಕೊಟ್ಟಿದೆ. ಈಗಾಗಲೇ ಒಂದು ವರ್ಷದಲ್ಲಿ 26 ರೂ. ಹೆಚ್ಚಳವಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಲಾರಿ ಮುಷ್ಕರ ನಡೆಸಲು ಚಿಂತನೆ ನಡೆಸಿದೆ. ಲಾರಿ ಮುಷ್ಕರವಾದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಹೆಚ್ಚಾಗಿದೆ. ಗೂಡ್ಸ್ ಲಾರಿಗಳ ಓಡಾಟ ಸ್ಥಗಿತವಾದರೆ ಎಲ್ಲ ರೀತಿಯ ವಸ್ತುಗಳ ಸರಬರಾಜು ಬಂದ್ ಆಗಲಿದೆ.
ಹಾಲು, ಹಣ್ಣು, ತರಕಾರಿ, ಹೂ, ದಿನಸಿ ಪದಾರ್ಥಗಳು ಸೇರಿದಂತೆ ಎಲ್ಲ ಸರಕು ಸಾಗಾಣಿಕೆಗೆ ಸಮಸ್ಯೆಯಾಗುತ್ತದೆ. ಇದರಿಂದಾಗಿ ಮತ್ತಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ.
ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಸಿಎಂ ನಿನ್ನೆ (ಅ.17) ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ್ದಾರೆ. ತೈಲ ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ ಉಪಚುನಾವಣೆ ಬಳಿಕ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆಯಿದೆ ಅಂತ ತಿಳಿಸಿದ್ದಾರೆ.
ಇದನ್ನೂ ಓದಿ
Kerala Rain: ಕೇರಳದಲ್ಲಿ ಭಾರಿ ಮಳೆ, ಪ್ರವಾಹ; ಮೃತರ ಸಂಖ್ಯೆ 24ಕ್ಕೆ ಏರಿಕೆ, 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್
Shocking Video: ಡಾಬಾದಲ್ಲಿ ಎಣ್ಣೆ, ನೀರಿನ ಬದಲಿಗೆ ಉಗುಳುತ್ತ ತಂದೂರಿ ರೋಟಿ ತಯಾರಿಸುತ್ತಿದ್ದ ಕೆಲಸಗಾರ ಅರೆಸ್ಟ್!