ನಾನು ಇಲ್ಲಿಗೆ ಬಂದು ನಿಮಗೆ ಹೇಳಬೇಕಾ? ಬಿಬಿಎಂಪಿ- ಜಲಮಂಡಳಿ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತರಾಟೆ
HSR ಲೇಔಟ್‌ನಲ್ಲಿರುವ STP ಘಟಕ ಪರಿಶೀಲನೆ ವೇಳೆ ಗರಂ ಆದ ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ನಾನು ಇಲ್ಲಿಗೆ ಬಂದು ನಿಮಗೆ ಹೇಳಬೇಕಾ? ಬೇಗ ಬೇಗ ಎಸ್ಟಿಪಿ ನಿರ್ಮಾಣ ಕಾಮಗಾರಿ ಮುಗಿಸಿ...
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಿಟಿ ರೌಂಡ್ಸ್ ಕೈಗೊಂಡಿದ್ದು ಮಳೆ ಹಾನಿ ಸೇರಿದಂತೆ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
HSR ಲೇಔಟ್‌ನಲ್ಲಿರುವ STP ಘಟಕ ಪರಿಶೀಲನೆ ವೇಳೆ ಗರಂ ಆದ ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ನಾನು ಇಲ್ಲಿಗೆ ಬಂದು ನಿಮಗೆ ಹೇಳಬೇಕಾ? ಬೇಗ ಬೇಗ ಎಸ್ಟಿಪಿ ನಿರ್ಮಾಣ ಕಾಮಗಾರಿ ಮುಗಿಸಿ. ಸ್ಥಳೀಯ ಎಂಜನೀಯರ್ಸ್ ಕೆಲಸ ಮಾಡುತ್ತಿಲ್ಲ ಅಂತಾ ದೂರುಗಳು ಹೆಚ್ಚಾಗುತ್ತಿವೆ. ನಿಮ್ಮ ಕಾರ್ಯವೈಖರಿ ಸರಿಯಿಲ್ಲ. ಇದು ಮುಂದುವರಿದ್ರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ. ಮಳೆ ಹಾನಿ ಸಮಸ್ಯೆಗಳು ಕಡಿಮೆಯಾಗಬೇಕು. ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಅಂತಾ ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
HSR ಲೇಔಟ್‌ನಲ್ಲಿರುವ STP ಘಟಕ ಪರಿಶೀಲನೆ ನಡೆಸಿದ ಬಳಿಕ ಸಿಎಂ ಬೊಮ್ಮಾಯಿ ಅಧಿಕಾರಿಗಳು, ಸ್ಥಳೀಯ ನಿವಾಸಿಗಳ ಜೊತೆ ಚರ್ಚೆ ನಡೆಸಿದ್ರು. ಮಳೆ ಹಾನಿಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ್ರು. ರಾಜಕಾಲುವೆ ಒತ್ತುವರಿಯಿಂದಾಗಿ ಸಮಸ್ಯೆಯಾಗಿದೆ. ಮಂತ್ರಿ ಸ್ಕ್ವೇರ್ ಡೆವಲಪರ್ಸ್‌ನಿಂದ ಸಮಸ್ಯೆಯಾಗ್ತಿದೆ. BBMP, BWSSB ಮಧ್ಯೆ ಸಮನ್ವಯತೆ ಇಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದು ಸಮನ್ವಯತೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ಸಿಎಂಗೆ ಮನವಿ ಮಾಡಿದ್ದರು. ಸ್ಥಳೀಯರ ದೂರಿನಿಂದ ಬೇಜಾರಾದ ಸಿಎಂ ಅಧಿಕಾರಿಗಳಿಗೆ ತರಾಟೆಗೆ ತೆಗದುಕೊಂಡಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್ಸ್; ಮಳೆ ಹಾನಿ, ಕಾಮಗಾರಿಗಳ ಪರಿಶೀಲನೆ
Published On - 11:25 am, Mon, 18 October 21