AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಕ್ರೈಸ್ತ ಮಿಷನರಿಗಳ ಸರ್ವೆ ವಿಚಾರ; ಸರ್ಕಾರದ ನಿಲುವಿಗೆ ಬೆಂಗಳೂರಿನ ಆರ್ಚ್ ಬಿಷಪ್ ಆಕ್ಷೇಪ

ಇದೊಂದು ಅನಗತ್ಯ ಕ್ರಮವೆಂದೇ ನಾವು ಭಾವಿಸುತ್ತೇವೆ. ಈ ಸರ್ವೆಯಿಂದ ರಾಜ್ಯಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ. ರಾಜ್ಯದಲ್ಲಿನ ಕ್ರೈಸ್ತ ಮಿಷನರಿಗಳ ಸರ್ವೆ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ನಿಲುವಿಗೆ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕ್ರೈಸ್ತ ಮಿಷನರಿಗಳ ಸರ್ವೆ ವಿಚಾರ; ಸರ್ಕಾರದ ನಿಲುವಿಗೆ ಬೆಂಗಳೂರಿನ ಆರ್ಚ್ ಬಿಷಪ್ ಆಕ್ಷೇಪ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Oct 18, 2021 | 12:13 PM

Share

ಬೆಂಗಳೂರು: ರಾಜ್ಯದಲ್ಲಿನ ಕ್ರೈಸ್ತ ಮಿಷನರಿಗಳ ಸರ್ವೆ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ನಿಲುವಿಗೆ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ಅನಗತ್ಯ ಕ್ರಮವೆಂದೇ ನಾವು ಭಾವಿಸುತ್ತೇವೆ. ಈ ಸರ್ವೆಯಿಂದ ರಾಜ್ಯಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ. ಕೋಮುವಿರೋಧಿ ವಾತಾವರಣ ತೀವ್ರವಾಗಿರುವ ವೇಳೆ ಇಂತಹ ಗಣತಿ ಮಾಡುವುದು ಅತ್ಯಂತ ಅಪಾಯಕಾರಿ ಎಂದು ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ತಿಳಿಸಿದ್ದಾರೆ.

ಇಂತಹ ಗಣತಿ ಮಾಡುವುದು ಅಪಾಯಕಾರಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಜ್ಯದಲ್ಲಿನ ಕ್ರೈಸ್ತ ಮಿಷನರಿಗಳ ಗಣತಿ ಮಾಡಲು ಆದೇಶಿಸಿದೆ ಎಂಬುದನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಇದೊಂದು ಅನಾವಶ್ಯಕ ಕ್ರಮವೆಂದೇ ನಾವು ಭಾವಿಸುತ್ತೇವೆ. ಇದರಿಂದ ರಾಜ್ಯಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ. ಮತಾಂತರ ಮಿಥ್ಯ ಹಾಗೂ ಕೋಮುವಿರೋಧಿ ವಾತಾವರಣವು ತೀವ್ರವಾಗಿರುವ ಸಮಯದಲ್ಲಿ ಇಂತಹ ಒಂದು ಗಣತಿಯನ್ನು ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಈ ಗಣತಿಯನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಚರ್ಚುಗಳು, ಪಾದ್ರಿಗಳು ಮತ್ತು ಕ್ರೈಸ್ತ ಸನ್ಯಾಸಿನಿಯರನ್ನು ಕೋಮುವಾದಿ ಶಕ್ತಿಗಳು ಅನಗತ್ಯವಾಗಿ ಟಾರ್ಗೆಟ್ ಮಾಡುವುದನ್ನೂ ಸಹ ನಾವು ತಳ್ಳಿಹಾಕುವಂತಿಲ್ಲ. ಈ ರೀತಿಯ ಹಲವು ಘಟನೆಗಳು ಉತ್ತರ ಭಾರತ ಹಾಗೂ ಕರ್ನಾಟಕದಲ್ಲಿಯೂ ಸಹ ಈಗಾಗಲೇ ನಡೆದಿರುವುದು ಅದಾಗಲೇ ನಮ್ಮ ಗಮನಕ್ಕೆ ಬಂದಿದೆ ಎಂದು ಆರ್ಚ್ ಬಿಷಪ್ ಡಾ.ಪೀಟರ್ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕ್ರೈಸ್ತ ಸಮುದಾಯದ ಚರ್ಚುಗಳು ಹಾಗೂ ಧಾರ್ಮಿಕ ವ್ಯಕ್ತಿಗಳ ಗಣತಿಯನ್ನು ಮಾತ್ರ ಮಾಡಲು ಸರ್ಕಾರ ಆಸಕ್ತಿ ತೋರಿಸುತ್ತಿರುವುದೇಗೆ? ನಾವು ಬಹಳ ಗೌರವಿಸುವ ವಿಶಾಲ ದೃಷ್ಟಿಯ ನಾಯಕ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಸಹ ಸಮಾಜವನ್ನು ಧಾರ್ಮಿಕವಾಗಿ ವಿಭಜಿಸಿ, ಶಾಂತಿ ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಕೋಮುವಾದಿ ಗುಂಪುಗಳ ಒತ್ತಡಕ್ಕೆ ಮಣಿದಿರುವುದು ಅತ್ಯಂತ ಖೇದಕರ ಹಾಗೂ ಬೇಸರದ ಸಂಗತಿಯಾಗಿದೆ.

ಆಮಿಷಗಳನ್ನು ಒಡ್ಡಿ ಮತಾಂತರ ಮಾಡಬಾರದು ಸರ್ಕಾರ ಕ್ರೈಸ್ತ ಸಮುದಾಯವು ನಡೆಸುತ್ತಿರುವ ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳ ಲೆಕ್ಕ ತಗೆದುಕೊಂಡರೆ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಸಮುದಾಯವು ನೀಡುತ್ತಿರುವ ಅಪರಿಮಿತ ಸೇವೆಯ ಅಂದಾಜು ದೊರೆಯುತ್ತದೆ. ಈ ನಮ್ಮ ಸಂಸ್ಥೆಗಳಲ್ಲಿ ಎಷ್ಟು ಜನರನ್ನು ಮತಾಂತರಗೊಳಿಸಲಾಗಿದೆ? ಕೆಲವರು ಹೇಳುವ ಪ್ರಕಾರ ಕ್ರೈಸ್ತರು ಮತಾಂತರ ಮಾಡುವುದೇ ಆಗಿದ್ದರೆ ಕ್ರೈಸ್ತರ ಜನಸಂಖ್ಯೆ ಏಕೆ ಪ್ರತಿ ವರ್ಷವೂ ಸಹ ಕಡಿಮೆಯಾಗುತ್ತಾ ಬರುತ್ತಿದೆ? ನಾವು ಎಂದಿಗೂ ಸಹ ಬಲವಂತದ, ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರದ ಕಡು ವಿರೋಧಿಗಳಾಗಿದ್ದೇವೆ. ಇದನ್ನೇ ನಾವು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿದ್ದೇವೆ. ಅದಲ್ಲದೆ ನಮಗೆ ಶ್ರೇಷ್ಟವೂ ಹಾಗೂ ಪವಿತ್ರವೂ ಆದ ಭಾರತದ ಘನತೆವೆತ್ತ ಸಂವಿಧಾನದ ಆಶಯಗಳನ್ನು ಪಾಲಿಸಿಕೊಂಡು ಬರುತ್ತಿದ್ದೇವೆ.

ಸಂವಿಧಾನದ 25 ನೇ ಪರಿಚ್ಛೇದವು (26, 29 ಮತ್ತು 30 ಸಹ) ಈ ದೇಶದಲ್ಲಿ ತನಗೆ ಇಷ್ಟ ಬಂದ ಧಾರ್ಮಿಕ ವಿಶ್ವಾಸವನ್ನು ಹಾಗೂ ನಂಬಿಕೆಯನ್ನು ಪಾಲಿಸಲು ಯಾವುದೇ ನಾಗರೀಕನು ಸ್ವತಂತ್ರನಾಗಿದ್ದಾನೆ ಎಂದು ಹೇಳಿಲ್ಲವೇ? ತಪ್ಪುಮಾಡುವವರನ್ನು ಶಿಕ್ಷಿಸಲು ಸಂವಿಧಾನದಲ್ಲೇ ಹಲವು ರೀತಿಯ ಕ್ರಮಗಳನ್ನು ನೀಡಿರುವಾಗ, ಈ ಕಾಯ್ದೆಯ ಪ್ರಸ್ತುತತೆಯಾದರೂ ಏನು?

ಮುಂದುವರೆದು ಹೇಳಬಾಕಾದರೆ ಸರ್ಕಾರವು ತರಲಿಚ್ಚಿಸಿರುವ ಕಾನೂನು ಕೆಲವೇ ಕೆಲವು ಶಕ್ತಿಗಳ ಕೈಸೇರಿ, ನಿರಪರಾಧಿಗಳನ್ನು ಶಿಕ್ಷಿಸುವ ಉಪಕರಣವಾಗಿ ಮಾರ್ಪಡಲಿದೆ. ಕೆಲವೇ ದಿನಗಳ ಹಿಂದೆ ಮದ್ರಾಸ್ ಹೈಕೋರ್ಟು ಚರ್ಚಿಗೆ ಹೋಗುವುದು, ಕ್ರೈಸ್ತ ಚಿಹ್ನೆಗಳನ್ನು ಅಥವಾ ಚಿತ್ರಗಳನ್ನು ಹಾಕಿಕೊಳ್ಳುವುದೆಂದರೆ ಮತಾಂತರವಾಗಿದ್ದಾರೆ ಎನ್ನುವುದಕ್ಕಾಗುವುದಿಲ್ಲ ಎಂಬ ತೀರ್ಪನ್ನು ನೀಡಿದೆ. ಕ್ರೈಸ್ತ ಸಮುದಾಯವು ಸದಾ ದೇಶಪ್ರೇಮಿಯಾಗಿದೆ. ಮಾತ್ರವಲ್ಲದೆ ಈ ನೆಲದ ಕಾನೂನುಗಳನ್ನು ಚಾಚೂ ತಪ್ಪದೆ ಪಾಲಿಸುತ್ತದೆ. ಈ ದೇಶದಲ್ಲಿನ ಬಡವರ ಮತ್ತು ಹಿಂದುಳಿದವರ ಸೇವೆಗೆ ಸದಾ ಸಿದ್ಧವಿದೆ. ಈ ನಿಟ್ಟಿನಲ್ಲಿ ನಮಗೆ ಸರ್ಕಾರದಿಂದ ಬೆಂಬಲ ಹಾಗೂ ಪ್ರೋತ್ಸಾಹದ ಅಗತ್ಯತೆ ಇದೆ ಎಂಬುದನ್ನು ಹೇಳಲಿಚ್ಛಿಸುತ್ತೇನೆ ಎಂದು ತಿಳಿಸಿದ್ರು.

ಇದನ್ನೂ ಓದಿ: Shankar Rao: ‘ಪಾಪ ಪಾಂಡು’ ಖ್ಯಾತಿಯ ಹಿರಿಯ ನಟ ಶಂಕರ್​ ರಾವ್​ ನಿಧನ; ಸ್ಯಾಂಡಲ್​ವುಡ್​ ಸಂತಾಪ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ