ನಕಲಿ ಬಿಎಂಟಿಸಿ ಅಧಿಕಾರಿ ನೂರ್ ಅಹ್ಮದ್ ಬಂಧನ; ಆರೋಪಿ ಸ್ಟೈಲ್​ಗೆ ದಂಗಾದ ಅಸಲಿ ಅಧಿಕಾರಿಗಳು

ಹಳೆಯ ಡಿಸಿ ವರ್ಗಾವಣೆಯಾಗಿದೆ. ನಾನೇ ಹೊಸ ಡಿಸಿ ಎಂದು ನೂರ್ ಅಹ್ಮದ್ ಹೇಳಿಕೊಂಡಿದ್ದ. ಯಶವಂತಪುರದ ಟಿಟಿಎಂಸಿಗೆ ಭೇಟಿ ನೀಡಿದ ವೇಳೆ ಆರೋಪಿ ಹೀಗೆ ಹೇಳಿಕೊಂಡಿದ್ದ. ಅಲ್ಲದೆ ಮರು ದಿನ ಬಸ್ ಸ್ಟ್ಯಾಂಡ್‌ನಲ್ಲಿ ಆರೋಪಿ ನೂರ್ ಅಹ್ಮದ್ ಪರಿಶೀಲನೆಗೂ ಕೂಡ ಇಳಿದ್ದನು.

ನಕಲಿ ಬಿಎಂಟಿಸಿ ಅಧಿಕಾರಿ ನೂರ್ ಅಹ್ಮದ್ ಬಂಧನ; ಆರೋಪಿ ಸ್ಟೈಲ್​ಗೆ ದಂಗಾದ ಅಸಲಿ ಅಧಿಕಾರಿಗಳು
ನೂರ್ ಅಹ್ಮದ್

ಬೆಂಗಳೂರು: ನಗರದ ಯಶವಂತಪುರ ಪೊಲೀಸರು ನಕಲಿ ಬಿಎಂಟಿಸಿ ಡಿಸಿ (ಸಹಾಯಕ ಸಂಚಾರಿ ಅಧೀಕ್ಷಕ) ಅಧಿಕಾರಿಯನ್ನು ಬಂಧಿಸಿದ್ದಾರೆ. ಉತ್ತರ ವಲಯ ಬಿಎಂಟಿಸಿ ಡಿಸಿ ಎಂದು ಹೇಳಿಕೊಂಡಿದ್ದ ಆರೋಪಿ ಸುಬೇದಾರ್ ಪಾಳ್ಯದ ನೂರ್ ಅಹ್ಮದ್​ನನ್ನು ಬಂಧಿಸಲಾಗಿದೆ. ಹಳೆಯ ಡಿಸಿ ವರ್ಗಾವಣೆಯಾಗಿದೆ. ನಾನೇ ಹೊಸ ಡಿಸಿ ಎಂದು ನೂರ್ ಅಹ್ಮದ್ ಹೇಳಿಕೊಂಡಿದ್ದ. ಯಶವಂತಪುರದ ಟಿಟಿಎಂಸಿಗೆ ಭೇಟಿ ನೀಡಿದ ವೇಳೆ ಆರೋಪಿ ಹೀಗೆ ಹೇಳಿಕೊಂಡಿದ್ದ. ಅಲ್ಲದೆ ಮರು ದಿನ ಬಸ್ ಸ್ಟ್ಯಾಂಡ್‌ನಲ್ಲಿ ಆರೋಪಿ ನೂರ್ ಅಹ್ಮದ್ ಪರಿಶೀಲನೆಗೂ ಕೂಡ ಇಳಿದ್ದನು. ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ನೂರ್ ಅಹ್ಮದ್ ವೇಷಭೂಷಣ ಕಂಡು ಅಸಲಿ ಡಿಸಿಯೇ ಇರಬಹುದು ಎಂದು ಅಧಿಕಾರಿಗಳೂ ಸಹ ಒಮ್ಮೆಲೆ ಸುಮ್ಮನಾಗಿದ್ದಾರೆ. ಬಳಿಕ ಎರಡನೇ ದಿನ, ಕ್ರಾಸ್ ಚೆಕ್ ವೇಳೆ ಅಸಲಿ ಸಂಗತಿ ಬಯಲಾಗಿದೆ. ಈ ವೇಳೆ ಅನುಮಾನ ಬಂದು ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಕೂಡಲೇ ಕಂಟ್ರೋಲ್ ರೂಂನ ಅಧಿಕಾರಿಗಳಿಗೆ ಮಾಹಿತಿ ಕೇಳಿದಾಗ ನೂರ್ ಅಹ್ಮದ್ ಹೆಸರಿನ ವ್ಯಕ್ತಿ ಇಲ್ಲಾ ಎನ್ನುವುದು ಬೆಳಕಿಗೆ ಬಂದಿದೆ.

ಈ ಬೆಳವಣಿಗೆಯನ್ನೆಲ್ಲಾ ಯಶವಂತಪುರ ಪೊಲೀಸ್ ಠಾಣೆ ಅಧಿಕಾರಿಗಳ ಗಮನಕ್ಕೆ ತಂದು, ಸಹಾಯಕ ಸಂಚಾರಿ ಅಧೀಕ್ಷಕರು ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಯನ್ನು ಸದ್ಯ ಬಂಧಿಸಲಾಗಿದೆ.

ಇದನ್ನೂ ಓದಿ:
ಮಾಸ್ಕ್​ ಧರಿಸಿ ಪೊಲೀಸ್​ ಪರೀಕ್ಷೆ ಬರೆಯಲು ಬಂದ ನಕಲಿ ಅಭ್ಯರ್ಥಿ ಈಗ ಖಾಕಿ ಅತಿಥಿ!

ಆರ್ಯನ್​ ಖಾನ್​ ಬಂಧನದ ಹಿಂದಿನ ಅಸಲಿಯತ್ತೇ ಬೇರೆ; ಎನ್​ಸಿಬಿ ಕಡೆಯಿಂದಲೇ ಹೊರಬಿತ್ತು ಸತ್ಯ

Click on your DTH Provider to Add TV9 Kannada