ಮಾಸ್ಕ್​ ಧರಿಸಿ ಪೊಲೀಸ್​ ಪರೀಕ್ಷೆ ಬರೆಯಲು ಬಂದ ನಕಲಿ ಅಭ್ಯರ್ಥಿ ಈಗ ಖಾಕಿ ಅತಿಥಿ!

ಮಾಸ್ಕ್​ ಧರಿಸಿ ಪೊಲೀಸ್​ ಪರೀಕ್ಷೆ ಬರೆಯಲು ಬಂದ ನಕಲಿ ಅಭ್ಯರ್ಥಿ ಈಗ ಖಾಕಿ ಅತಿಥಿ!

ಬೆಂಗಳೂರು ಗ್ರಾಮಾಂತರ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಲೇ ಇದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನ ಕಡ್ಡಾಯಗೊಳಿಸಿದೆ. ಆದರೆ ಮಾಸ್ಕ್ ಧರಿಸುವುದನ್ನೇ ತನ್ನ ಲಾಭಕ್ಕೆ ಬಳಸಿಕೊಂಡ ವ್ಯಕ್ತಿಯೋರ್ವ ಇಂದು ನಡೆಯುತ್ತಿದ್ದ ಸಿವಿಲ್ ಪೊಲೀಸ್ ಕಾನ್ಸ್​ಟೇಬಲ್ ಲಿಖಿತ ಪರೀಕ್ಷೆಗೆ ಅಭ್ಯರ್ಥಿಯ ಬದಲಾಗಿ ಹಾಜರಾಗಿ ಪರೀಕ್ಷೆ ಬರೆಯುತ್ತಿರುವಾಗ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಜಿಲ್ಲೆಯ ನೆಲಮಂಗಲ ತಾಲೂಕಿನ ಗಣೇಶನಗುಡಿ ಗ್ರಾಮದ ಬಳಿ ಇರುವ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಗರೀಕ ಪೊಲೀಸ್ […]

Ayesha Banu

|

Sep 20, 2020 | 3:13 PM

ಬೆಂಗಳೂರು ಗ್ರಾಮಾಂತರ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಲೇ ಇದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನ ಕಡ್ಡಾಯಗೊಳಿಸಿದೆ. ಆದರೆ ಮಾಸ್ಕ್ ಧರಿಸುವುದನ್ನೇ ತನ್ನ ಲಾಭಕ್ಕೆ ಬಳಸಿಕೊಂಡ ವ್ಯಕ್ತಿಯೋರ್ವ ಇಂದು ನಡೆಯುತ್ತಿದ್ದ ಸಿವಿಲ್ ಪೊಲೀಸ್ ಕಾನ್ಸ್​ಟೇಬಲ್ ಲಿಖಿತ ಪರೀಕ್ಷೆಗೆ ಅಭ್ಯರ್ಥಿಯ ಬದಲಾಗಿ ಹಾಜರಾಗಿ ಪರೀಕ್ಷೆ ಬರೆಯುತ್ತಿರುವಾಗ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾನೆ.

ಜಿಲ್ಲೆಯ ನೆಲಮಂಗಲ ತಾಲೂಕಿನ ಗಣೇಶನಗುಡಿ ಗ್ರಾಮದ ಬಳಿ ಇರುವ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಗರೀಕ ಪೊಲೀಸ್ ಕಾನ್ಸ್​ಟೇಬಲ್ ಪರೀಕ್ಷೆ ನಡೆಯಿತು. ಈ ವೇಳೆ ಪರೀಕ್ಷಾ ಅಭ್ಯರ್ಥಿಯಾದ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ನಿವಾಸಿ ಮಂಜುನಾಥ್ (21) ಬದಲು ಆತನ ಹೆಸರಿನಲ್ಲಿ ಕೋಲಾರ ಜಿಲ್ಲೆ‌ ಶ್ರೀನಿವಾಸಪುರ ತಾಲೂಕಿನ ತೇರನಹಳ್ಳಿ ನಿವಾಸಿ ಶಿವಪ್ರಸಾದ್ (28) ಪರೀಕ್ಷೆ ಬರೆಯಲು ಕೂತಿದ್ದನಂತೆ.

ಪರೀಕ್ಷಾ ಕೊಠಡಿಗೆ ಭೇಟಿಕೊಟ್ಟ ಸರ್ಕಲ್ ಇನ್​ಸ್ಪೆಕ್ಟರ್ ಶಿವಣ್ಣ ಹಾಗೂ ಹೆಚ್ಚುವರಿ SP ಲಕ್ಷ್ಮಿ ಗಣೇಶ್‌ ಪರಿಶೀಲನೆ ನಡೆಸಿದ ವೇಳೆ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ.

ಕೊವಿಡ್‌ನಿಂದ ಮಾಸ್ಕ್ ಧರಿಸುವುದನ್ನೇ ತನ್ನ ಅನುಕೂಲಕ್ಕೆ ಬಳಸಿಕೊಂಡ ನಕಲಿ ಅಭ್ಯರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ‌.

Follow us on

Related Stories

Most Read Stories

Click on your DTH Provider to Add TV9 Kannada