Drugs ದಂಧೆ ಜೊತೆ ಗಿರವಿ ವ್ಯಾಪಾರ: ವೈಭವ್ ಬಳಿ ಅಡವಿಟ್ಟಿದ್ದ ವಾಚ್ಗಾಗಿ ಪರಿತಪಿಸಿದ ನಟಿ
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ A5 ಆರೋಪಿ ವೈಭವ್ ಜೈನ್ನಿಂದ ಮತ್ತಷ್ಟು ಮಾಹಿತಿ ಬೆಳಕಿಗೆ ಬಂದಿದೆ. ಹಲವು ಸೆಲೆಬ್ರಿಟಿಗಳ ಜೊತೆಗೆ ಲಿಂಕ್ ಹೊಂದಿದ್ದ ವೈಭವ್ ಜೈನ್ ಕೆಲವರಿಗೆ ಲಕ್ಷಾಂತರ ರೂಪಾಯಿ ಸಾಲ ಸಹ ನೀಡಿದ್ದ ಎಂದು ತಿಳಿದುಬಂದಿದೆ. ನಟ ನಟಿಯರ ಐಷಾರಾಮಿ ಕಾರುಗಳನ್ನ ಅಡ ಇಟ್ಟುಕೊಂಡು ಸಾಲ ನೀಡ್ತಿದ್ದ ವೈಭವ್ ಜೈನ್ ನಟಿ ಸಂಜನಾ ಆಪ್ತ ರಾಹುಲ್ಗೂ 11 ಲಕ್ಷ ಸಾಲ ನೀಡಿದ್ದ ಎಂದು ಹೇಳಲಾಗಿದೆ. ಇದಲ್ಲದೆ, ವೈಭವ್ ಜೈನ್ ಸೆಲೆಬ್ರಿಟಿಗಳ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ A5 ಆರೋಪಿ ವೈಭವ್ ಜೈನ್ನಿಂದ ಮತ್ತಷ್ಟು ಮಾಹಿತಿ ಬೆಳಕಿಗೆ ಬಂದಿದೆ. ಹಲವು ಸೆಲೆಬ್ರಿಟಿಗಳ ಜೊತೆಗೆ ಲಿಂಕ್ ಹೊಂದಿದ್ದ ವೈಭವ್ ಜೈನ್ ಕೆಲವರಿಗೆ ಲಕ್ಷಾಂತರ ರೂಪಾಯಿ ಸಾಲ ಸಹ ನೀಡಿದ್ದ ಎಂದು ತಿಳಿದುಬಂದಿದೆ. ನಟ ನಟಿಯರ ಐಷಾರಾಮಿ ಕಾರುಗಳನ್ನ ಅಡ ಇಟ್ಟುಕೊಂಡು ಸಾಲ ನೀಡ್ತಿದ್ದ ವೈಭವ್ ಜೈನ್ ನಟಿ ಸಂಜನಾ ಆಪ್ತ ರಾಹುಲ್ಗೂ 11 ಲಕ್ಷ ಸಾಲ ನೀಡಿದ್ದ ಎಂದು ಹೇಳಲಾಗಿದೆ. ಇದಲ್ಲದೆ, ವೈಭವ್ ಜೈನ್ ಸೆಲೆಬ್ರಿಟಿಗಳ ದುಬಾರಿ ಬೆಲೆಯ ವಾಚ್, ಬೈಕ್ ಹಾಗೂ ಆಭರಣಗಳನ್ನೂ ಸಹ ಅಡವಾಗಿ ಇಟ್ಟುಕೊಳ್ಳುತ್ತಿದ್ದನಂತೆ.
ಒಮ್ಮೆ, ತಾನು ಅಡವಿಟ್ಟಿದ್ದ ದುಬಾರಿ ವಾಚ್ನ ವಾಪಸ್ ಕೊಡುವಂತೆ ನಟಿಮಣಿಯೊಬ್ಬಳು ಈತನ ಬಳಿ ಅಂಗಲಾಚಿದ್ದಳಂತೆ. ಅಡವಿಟ್ಟು ಬಿಡಿಸಿಕೊಳ್ಳದ ವಾಚ್ ಕೊಡುವಂತೆ ನಟಿ ವೈಭವ್ ಬಳಿ ಕೇಳಿಕೊಂಡಿದ್ದಳು ಎಂಬ ಮಾಹಿತಿ ಸಿಕ್ಕಿದೆ.