ಸಿದ್ದರಾಮಯ್ಯ ಮುಸ್ಲಿಂ ನಾಯಕರನ್ನು ಮುಗಿಸುತ್ತಾ ಬಂದಿದ್ದಾರೆ; ನಾಳೆ ಶಾಸಕ ಜಮೀರ್ ಅಹ್ಮದ್ರನ್ನೂ ಮುಗಿಸ್ತಾರೆ: ಟಿ.ಎ. ಶರವಣ
ಕಾಂಗ್ರೆಸ್ನವರು ಅಲ್ಪಸಂಖ್ಯಾತರಿಗೆ ಹೇಗೆ ಅನ್ಯಾಯ ಮಾಡಿದ್ದಾರೆ ಎಂದು ಕುಮಾರಣ್ಣ ಹೇಳಿದ್ದಾರೆ. ಜೆಡಿಎಸ್ ಮೇಲೆ, ಕುಮಾರಸ್ವಾಮಿ ಮೇಲೆ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರು ದಾಳಿ ಮಾಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ವಕ್ತಾರರಾದ ಟಿ.ಎ ಶರವಣ ತಿಳಿಸಿದ್ದಾರೆ.
ಬೆಂಗಳೂರು: ನಮ್ಮ ನಾಯಕರಾದ ಕುಮಾರಣ್ಣ, ಸಿದ್ದರಾಮಯ್ಯ ಅವರಿಗೆ ಐದು ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಉತ್ತರವನ್ನು ಸಿದ್ದರಾಮಯ್ಯ ನೀಡಿಲ್ಲ. ಕಾಂಗ್ರೆಸ್ನವರು ಅಲ್ಪಸಂಖ್ಯಾತರಿಗೆ ಹೇಗೆ ಅನ್ಯಾಯ ಮಾಡಿದ್ದಾರೆ ಎಂದು ಕುಮಾರಣ್ಣ ಹೇಳಿದ್ದಾರೆ. ಜೆಡಿಎಸ್ ಮೇಲೆ, ಕುಮಾರಸ್ವಾಮಿ ಮೇಲೆ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರು ದಾಳಿ ಮಾಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ವಕ್ತಾರರಾದ ಟಿ.ಎ ಶರವಣ ತಿಳಿಸಿದ್ದಾರೆ.
ಶೇಷಾದ್ರಿಪುರಂನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಳಿಕ ಸಿದ್ದರಾಮಯ್ಯನವರ ಹೇಳಿಕೆ ವಿಚಾರವಾಗಿ ಮಾತನಾಡಿದ್ದಾರೆ. ಮುಸ್ಲಿಂ ನಾಯಕರನ್ನು ಮುಗಿಸಿ ಬಂದಿದ್ದಾರೆ. ರೋಷನ್ ಬೇಗ್ ಸೇರಿದಂತೆ ಎಲ್ಲಾ ನಾಯಕರನ್ನು ಮುಗಿಸಿದ್ದಾರೆ. ನಾಳೆ ನಿಮ್ಮನ್ನು ಮುಗಿಸುತ್ತಾರೆ. ಸಿದ್ದರಾಮಯ್ಯ ಅವರಿಗೆ ಜೆಡಿಎಸ್ನ ಕೆದಕದೆ ಹೋದರೆ ನಿದ್ದೆ ಬರಲ್ಲ. ಬರೀ ಜೆಡಿಎಸ್ ಬಗೆನೇ ಜಪ ಮಾಡುತ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಮುಳುಗಿ ಹೋಗುತ್ತದೆ ಎಂದು ಟಿ.ಎ ಶರವಣ ತಿಳಿಸಿದ್ದಾರೆ.
ಜೆಡಿಎಸ್ಗೆ ಧಮ್ ಇದ್ದರೆ ಮುಸ್ಲಿಂ ಕ್ಯಾಂಡಿಟೆಟ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಜಮೀರ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ಧಮ್ ಇದ್ದರೆ ಮುಸ್ಲಿಂ ಅಭ್ಯರ್ಥಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ಕುಮಾರಣ್ಣ ಅವರು ಕೇಳಿದ ಐದು ಪ್ರಶ್ನೆಗೆ ಉತ್ತರ ನೀಡಿ. ಜಮೀರ್ ಏನೇ ಹೇಳಿದರು ಅದಕ್ಕೆ ಕುಮಾರಣ್ಣ ಉತ್ತರ ನೀಡಬಾರದು. ನಾನು ಕುಮಾರಣ್ಣ ಅವರಿಗೆ ಮನವಿ ಮಾಡುತ್ತೇನೆ. ಜಮೀರ್ ಪ್ರಶ್ನೆಗೆ ಉತ್ತರ ನೀಡಬೇಡಿ ಎಂದು ಟಿ.ಎ ಶರವಣ ಹೇಳಿದ್ದಾರೆ.
ಜಮೀರ್ ಅಹ್ಮದ್ಗೆ ಯಾವ ನೈತಿಕತೆ ಇದೆ: ಟಿ.ಎ ಶರವಣ ಜಮೀರ್ ಅಹ್ಮದ್ಗೆ ಯಾವ ನೈತಿಕತೆ ಇದೆ. ಜಮೀರ್ ಅವರ ಮೂಲ ಬೇರು ಯಾವುದು. ಜಮೀರ್ನನ್ನು ವಿಧಾನಸೌಧಕ್ಕೆ ಪ್ರವೇಶ ಮಾಡಿಸಿದ್ದು ಯಾರು ಜಮೀರ್ ಜೆಡಿಎಸ್ ನಲ್ಲಿದ್ದಾಗ ಕುಮಾರಣ್ಣ, ಕಾಂಗ್ರೆಸ್ನಲ್ಲಿದ್ದಾಗ ಸಿದ್ದರಾಮಣ್ಣ, ಮುಂದೆ ಯಾವ ಅಣ್ಣನೋ ? ಕಾಂಗ್ರೆಸ್ನವರು ಜಮೀರ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಫೋಷಣೆ ಮಾಡಲಿ ಎಂದು ಟಿ.ಎ ಶರವಣ ಅಭಿಪ್ರಾಯಪಟ್ಟಿದ್ದಾರೆ.
ಗಂಗಾವತಿ ಕ್ಷೇತ್ರದ ಜನ ಇಕ್ಬಾಲ್ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ: ಟಿ.ಎ ಶರವಣ ಇಕ್ಬಾಲ್ ನವರು ಹೇಳುತ್ತಾರೆ ಜೆಡಿಎಸ್ ಮೋಸ ಮಾಡಿದೆಯಂತೆ. ಇಕ್ಬಾಲ್ ನವರನ್ನು ಜೆಡಿಎಸ್ ಎಂಎಲ್ಎ ಮಾಡಿದರು. ಗಂಗಾವತಿಗೆ ಕುಮಾರಸ್ವಾಮಿ 20 ಕೋಟಿ ರೂ. ಅನುದಾನ ನೀಡಿದರು. ಗಂಗಾವತಿ ಕ್ಷೇತ್ರದ ಜನ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಟಿ.ಎ ಶರವಣ ಹೇಳಿದ್ದಾರೆ.
ಇದನ್ನೂ ಓದಿ: ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವಿವಿ ಸಿಂಡಿಕೇಟ್ ಸದಸ್ಯರ ಕಿಡಿ; ಮಾನಹಾನಿ ಪ್ರಕರಣ ದಾಖಲಿಸುವ ಎಚ್ಚರಿಕೆ
Published On - 12:27 pm, Mon, 18 October 21