ಕುಸಿಯುವ ಹಂತದಲ್ಲಿದೆ ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್, ಅಪಾಯ ತಿಳಿದಿದ್ದರು ಕ್ರಮಕ್ಕೆ ಮುಂದಾಗದ ಅಧಿಕಾರಿಗಳು

ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್ ತುಂಬಾ ಕೆಟ್ಟದಾಗಿದೆ. ಮಳೆ ಬಂದ್ರೆ ಸಾಕು ಆಫೀಸ್ಗಳ‌ ಒಳಗೆ ಮಳೆನೀರು ನುಗ್ಗುತ್ತಿದೆ. ಬಿಲ್ಡಿಂಗ್ ಬಳಿ ಫುಲ್ ಪಾಚಿ ಕಟ್ಟಿ, ಗಿಡ-ಗಂಟೆಗಳು ಬೆಳೆದುಕೊಂಡಿದೆ. ಸುಮಾರು 35-40 ವರ್ಷದ ಹಳೆಯದಾದ ಬಿಲ್ಡಿಂಗ್ ಆಗಿದ್ದು ಮಳೆಗೆ ಕಬ್ಬಿಣದ ಕಂಬಿ ತುಕ್ಕು ಹಿಡಿದು ಮೋಲ್ಡ್ ಕಿತ್ತುಹೋಗಿದೆ.

ಕುಸಿಯುವ ಹಂತದಲ್ಲಿದೆ ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್, ಅಪಾಯ ತಿಳಿದಿದ್ದರು ಕ್ರಮಕ್ಕೆ ಮುಂದಾಗದ ಅಧಿಕಾರಿಗಳು
ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್
Follow us
TV9 Web
| Updated By: ಆಯೇಷಾ ಬಾನು

Updated on: Oct 18, 2021 | 1:10 PM

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಈಗಾಗಲೇ ಕಟ್ಟಡಗಳು ಕುಸಿದು ಬೀಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಇದರ ಜೊತೆಗೆ ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್ ಈಗ ಅಪಾಯದ ಹಂತ ತಲುಪಿದೆ. ಎರಡು ವಾರದಿಂದ ನಗರದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಯಶವಂತಪುರ ಬಳಿ ಇರುವ ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕುಸಿಯುವ ಹಂತದಲ್ಲಿದೆ.

ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್ ತುಂಬಾ ಕೆಟ್ಟದಾಗಿದೆ. ಮಳೆ ಬಂದ್ರೆ ಸಾಕು ಆಫೀಸ್ಗಳ‌ ಒಳಗೆ ಮಳೆನೀರು ನುಗ್ಗುತ್ತಿದೆ. ಬಿಲ್ಡಿಂಗ್ ಬಳಿ ಫುಲ್ ಪಾಚಿ ಕಟ್ಟಿ, ಗಿಡ-ಗಂಟೆಗಳು ಬೆಳೆದುಕೊಂಡಿದೆ. ಸುಮಾರು 35-40 ವರ್ಷದ ಹಳೆಯದಾದ ಬಿಲ್ಡಿಂಗ್ ಆಗಿದ್ದು ಮಳೆಗೆ ಕಬ್ಬಿಣದ ಕಂಬಿ ತುಕ್ಕು ಹಿಡಿದು ಮೋಲ್ಡ್ ಕಿತ್ತುಹೋಗಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಈ ಕಾಂಪ್ಲೆಕ್ಸ್ಗೆ ಸಾವಿರಾರು ಜನ ನಿತ್ಯ ಕೆಲಸ ಮಾಡಲು ಬರುತ್ತಾರೆ. ಹೀಗಾಗಿ ಇಲ್ಲಿನ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

ಇನ್ನು ಬಿಬಿಎಂಪಿ ಶಿಥಿಲಾವಸ್ಥೆಯ ಸರ್ವೇಯಲ್ಲಿದ ಈ ಬಿಲ್ಡಿಂಗ್ ಕೂಡ ನಮೂದಾಗಿದೆ. ನಿರ್ವಹಣೆ ಇಲ್ಲದೇ, ಬೀಳುವ ಸ್ಥಿತಿಯನ್ನು ಈ ಬಿಬಿಎಂಪಿ ಕಟ್ಟಡ ತಲುಪಿದೆ. ಆರ್.ಟಿ.ಓ, ಕಾನೂನು ಮಾಪನಶಾಸ್ತ್ರ ಇಲಾಖೆ, ಬೆಂಗಳೂರು ಒನ್, ಅಬಕಾರಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆಗಳು ಇಲ್ಲಿ ಕೆಲಸ ಮಾಡುತ್ತಿವೆ. ಕಳೆದ ಬಾರಿ ಸರ್ವೇ ಮಾಡಿ, ಬಿಲ್ಡಿಂಗ್ ಡೆಮಾಲಿಶ್ ಮಾಡ್ತೀವಿ ಅಂತಾ ಬಿಬಿಎಂಪಿ ವಲಯ ಆಯುಕ್ತರು ಹೇಳಿದ್ದರು. ಅಲ್ಲದೆ ಕಾಂಪ್ಲೆಕ್ಸ್ ನಲ್ಲಿ ಇರುವ ವರ್ತಕರಿಗೆ ಹೊಸ ಮಳಿಗೆ ಕಟ್ಟಿಕೊಡುವುದಾಗಿ ತಿಳಿಸಿದ್ದರು. ಆದ್ರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿನಿತ್ಯ ಭಯದಲ್ಲಿಯೇ ವ್ಯಾಪಾರ-ವಹಿವಾಟು ಮಾಡುವ ಸ್ಥಿತಿ ಇಲ್ಲಿನ ವರ್ತಕರು, ಸಾರ್ವಜನಿಕರದ್ದು.

ನಿರಂತರ ಮಳೆ ಹಿನ್ನೆಲೆ ಕುಸಿದುಬಿದ್ದ ಕಾಂಪೌಂಡ್ ತೆರವು ಇನ್ನು ಮತ್ತೊಂದೆಡೆ ಬೆಂಗಳೂರಿನ ಹೆಸರಘಟ್ಟ ರಸ್ತೆಯ ಚಿಮನಿ ಹಿಲ್ಸ್‌ನ ಸೌಂದರ್ಯ ಲೇಔಟ್‌ನಲ್ಲಿ ಕಾಂಪೌಂಡ್ ತೆರವು ಮಾಡಿ ಹೊಸ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಗೋಡೆ ಕುಸಿದುಬಿದ್ದ ಹಿನ್ನೆಲೆ ಮನೆ ಬೀಳುವ ಆತಂಕವಿತ್ತು. ಸದ್ಯ ಮನೆಗಳಿಗೆ ಯಾವುದೇ ಹಾನಿಯಾಗದ ಹಿನ್ನೆಲೆ ಹಾನಿಯಾಗಿರುವ ಗೋಡೆಯನ್ನು ತೆರವು ಮಾಡಿ ಹೊಸದಾಗಿ ಗೋಡೆ ನಿರ್ಮಾಣ ಮಾಡವುದಕ್ಕೆ ನಿರ್ಧಾರ ಮಾಡಲಾಗಿದ್ದು ಹೊಸ ಗೋಡೆ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 3-ಅಂತಸ್ತಿನ ಕಟ್ಟಡ ಕುಸಿದು ಅದರಲ್ಲಿ ವಾಸವಾಗಿದ್ದ ಕುಟುಂಬಗಳು ಬೀದಿಪಾಲು