ಆರ್ಯನ್ ಖಾನ್ ಬಂಧನದ ಹಿಂದಿನ ಅಸಲಿಯತ್ತೇ ಬೇರೆ; ಎನ್ಸಿಬಿ ಕಡೆಯಿಂದಲೇ ಹೊರಬಿತ್ತು ಸತ್ಯ
ಮುಂಬೈನ ವಿಶೇಷ ಕೋರ್ಟ್ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮಾಡುತ್ತಿದೆ. ಅವರಿಗೆ ಜಾಮೀನು ನೀಡಬಾರದು ಎಂದು ಎನ್ಸಿಬಿ ಪಟ್ಟು ಹಿಡಿದಿದೆ. ಇದಕ್ಕೆ ನಾನಾ ಕಾರಣಗಳನ್ನು ಎನ್ಸಿಬಿ ಕೋರ್ಟ್ಗೆ ನೀಡಿದೆ.
ಆರ್ಯನ್ ಖಾನ್ ರೇವ್ ಪಾರ್ಟಿಗೆ ತೆರಳಿ ಅರೆಸ್ಟ್ ಆದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಕಾರ್ಯವನ್ನು ಸಾಕಷ್ಟು ಜನರು ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಎನ್ಸಿಬಿ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆರ್ಯನ್ ಬಳಿ ಡ್ರಗ್ ಸಿಕ್ಕಿಲ್ಲ ಎಂದು ಖುದ್ದು ಎನ್ಸಿಬಿ ಹೇಳಿದೆ. ಆದಾಗ್ಯೂ ಅವರನ್ನು ಅರೆಸ್ಟ್ ಮಾಡಿದ್ದೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಈ ಎಲ್ಲಾ ವಿಚಾರಗಳಿಗೆ ಎನ್ಸಿಬಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಮುಂಬೈನ ವಿಶೇಷ ಕೋರ್ಟ್ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮಾಡುತ್ತಿದೆ. ಅವರಿಗೆ ಜಾಮೀನು ನೀಡಬಾರದು ಎಂದು ಎನ್ಸಿಬಿ ಪಟ್ಟು ಹಿಡಿದಿದೆ. ಇದಕ್ಕೆ ನಾನಾ ಕಾರಣಗಳನ್ನು ಎನ್ಸಿಬಿ ಕೋರ್ಟ್ಗೆ ನೀಡಿದೆ. ಅಷ್ಟಕ್ಕೂ ಆರ್ಯನ್ ಅವರನ್ನು ಜೈಲಿನಲ್ಲೇ ಇರಿಸಬೇಕು ಎಂದು ಎನ್ಸಿಬಿ ಇಷ್ಟೊಂದು ಬಾರಿ ಕೇಳಿಕೊಳ್ಳುತ್ತಿರುವುದೇಕೆ? ಆ ಪ್ರಶ್ನೆಗೆ ಎನ್ಸಿಬಿ ಕಡೆಯಿಂದಲೇ ಉತ್ತರ ಸಿಕ್ಕಿದೆ.
ಐಷಾರಾಮಿ ಕ್ರೂಸ್ ಹಡಗಿನ ಮೇಲೆ ರೇಡ್ ಮಾಡಿದಾಗ ಆರ್ಯನ್ ಬಳಿ ಡ್ರಗ್ ಸಿಕ್ಕಿಲ್ಲ ಎಂಬುದು ನಿಜ. ಆದರೆ, ಅವರು ಡ್ರಗ್ ಪೆಡ್ಲರ್ಗಳ ಜತೆ ಸಂಪರ್ಕದಲ್ಲಿದ್ದರು. ಇದು ಅವರಿಗೆ ಮುಳುವಾಗಿದೆ. ಇದು ಆರ್ಯನ್ ಬಂಧನಕ್ಕೆ ನಿಜವಾದ ಕಾರಣ. ಈ ಬಗ್ಗೆ ಎನ್ಸಿಬಿ ಕೋರ್ಟ್ಗೆ ಮಾಹಿತಿ ನೀಡಿದೆ.
‘ಆರ್ಯನ್ ಅವರ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಆರ್ಯನ್ ಖಾನ್ ಬಳಿ ದಾಳಿ ವೇಳೆ ಡ್ರಗ್ಸ್ ಸಿಕ್ಕಿಲ್ಲ. ಆದರೂ ಡ್ರಗ್ಸ್ ಖರೀದಿಸಿರುವ ಬಗ್ಗೆ ಪುರಾವೆ ಸಿಕ್ಕಿವೆ. ಆರ್ಯನ್ ಖಾನ್ ಸೇರಿದಂತೆ ಇತರರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಅವರು ನಿಷೇಧಿತ ಡ್ರಗ್ಸ್ ಖರೀದಿಸಿದ್ದಾರೆ. ಅರ್ಬಾಜ್ ಮರ್ಚೆಂಟ್ ಬಳಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ವಿದೇಶಗಳ ವಹಿವಾಟು ಸಂಬಂಧಿಸಿ ತನಿಖೆ ಮಾಡಬೇಕಿದೆ. ಈ ಪ್ರಕರಣದಿಂದ ಆರ್ಯನ್ ಖಾನ್ ಪಾತ್ರವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಡ್ರಗ್ಸ್ ಹಂಚಿಕೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದಿದ್ದಾರೆ’ ಎಂದು ಎನ್ಸಿಬಿ ಕೋರ್ಟ್ಗೆ ತಿಳಿಸಿದೆ. ಇದರಿಂದ ಆರ್ಯನ್ಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.
ಆರ್ಯನ್ ಖಾನ್ ಅಕ್ಟೋಬರ್ 2ರ ರಾತ್ರಿ ಎನ್ಸಿಬಿ ಕೈಗೆ ಸಿಕ್ಕಿ ಬಿದ್ದಿದ್ದರು. ಇದಾದ ನಂತರ ಕೆಲ ದಿನ ಅವರು ಎನ್ಸಿಬಿ ವಶದಲ್ಲಿದ್ದರು. ನಂತರ ಕೋರ್ಟ್ ಆರ್ಯನ್ಗೆ ನ್ಯಾಯಾಂಗ ಬಂಧನ ವಿಧಿಸಿತು. ಸದ್ಯ, ಜಾಮೀನು ಪಡೆಯೋಕೆ ಅವರು ಹರಸಾಹಸ ಪಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಶಾರುಖ್ ವಿಚಲಿತರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಇಲ್ಲೊಬ್ಬ ಬಡಪಾಯಿ, ನಕಲಿ ಶಾರುಖ್ ಖಾನ್ಗೆ ಮಕ್ಕಳ ಶಾಲೆ ಫೀಸ್ ಕಟ್ಟಲು ದುಡ್ಡಿಲ್ಲ; ಯಾರಿದು?
ಶಾರುಖ್ ಮಗನನ್ನು ಅರೆಸ್ಟ್ ಮಾಡಿದ ಎನ್ಸಿಬಿ ಅಧಿಕಾರಿಗೆ ಈಗ ಹೊಸ ತಲೆನೋವು; ಇದು ಯಾರ ಸಂಚು?