ಅಮಿತಾಭ್ ಬಚ್ಚನ್ ಇನ್ನು ನಿವೃತ್ತಿ ಹೊಂದಬೇಕು: ಸಲೀಂ ಖಾನ್ ಅಭಿಪ್ರಾಯ

Amitabh Bachchan: ಅಮಿತಾಭ್ ತಮ್ಮ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದೋ ಅದೆಲ್ಲವನ್ನೂ ಮಾಡಿದ್ದಾರೆ. ಒಬ್ಬ ವ್ಯಕ್ತಿ ಅವರಿಗಾಗಿಯೇ ಜೀವನದ ಕೆಲವು ವರ್ಷಗಳನ್ನಾದರೂ ಮೀಸಲಿಡಬೇಕು ಎಂದು ಸಲೀಂ ಖಾನ್ ಹೇಳಿದ್ದಾರೆ.

ಅಮಿತಾಭ್ ಬಚ್ಚನ್ ಇನ್ನು ನಿವೃತ್ತಿ ಹೊಂದಬೇಕು: ಸಲೀಂ ಖಾನ್ ಅಭಿಪ್ರಾಯ
ಅಮಿತಾಭ್ ಬಚ್ಚನ್
Follow us
| Updated By: ganapathi bhat

Updated on:Oct 12, 2021 | 11:02 PM

ಅಮಿತಾಭ್ ಬಚ್ಚನ್ ಬಹಳಷ್ಟು ಸಾಧಿಸಿದ್ದಾರೆ. ಅವರು ಚಿತ್ರರಂಗದಿಂದ ನಿವೃತ್ತಿ ಹೊಂದಬೇಕು ಎಂದು ಬರಹಗಾರ ಸಲೀಂ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಲೀಂ ಹಾಗೂ ಅಮಿತಾಭ್ ಬಚ್ಚನ್ ಸುಮಾರು 10ಕ್ಕೂ ಅಧಿಕ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಮಿತಾಭ್ ತಮ್ಮ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದೋ ಅದೆಲ್ಲವನ್ನೂ ಮಾಡಿದ್ದಾರೆ. ಒಬ್ಬ ವ್ಯಕ್ತಿ ಅವರಿಗಾಗಿಯೇ ಜೀವನದ ಕೆಲವು ವರ್ಷಗಳನ್ನಾದರೂ ಮೀಸಲಿಡಬೇಕು. ಅವರು ಈಗಾಗಲೇ ಅದ್ಭುತ ಕೆಲಸಗಳನ್ನು ಚಿತ್ರರಂಗದಲ್ಲಿ ಮಾಡಿದ್ದಾರೆ. ಹಾಗಾಗಿ, ಈಗ ಅವರು ಈ ಓಟದಿಂದ ಹಿಂದೆ ಸರಿಯಬೇಕು, ನಿವೃತ್ತಿ ಹೊಂದಬೇಕು ಎಂದು ಸಲೀಂ ಖಾನ್ ದೈನಿಕ್ ಭಾಸ್ಕರ್​ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಿವೃತ್ತಿ ಎಂಬ ವ್ಯವಸ್ಥೆ ಇರುವುದು ಅದಕ್ಕಾಗಿ. ಅಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತನ್ನ ಇಷ್ಟದಂತೆ ಕಳೆಯಬೇಕು. ಜೀವನದ ಮೊದಲ ವರ್ಷಗಳು ಕಲಿಯುವಿಕೆ, ಅಧ್ಯಯನದಲ್ಲಿ ಕಳೆದುಹೋಗುತ್ತದೆ. ನಂತರ ನಿಮಗೆ ಜವಾಬ್ದಾರಿಗಳು ಬರುತ್ತವೆ. ಉದಾಹರಣೆಗೆ, ನನ್ನ ಜೀವನ ಈಗ ಸೀಮಿತವಾಗಿದೆ. ನನ್ನ ಜೊತೆಗೆ ಈಗ ಹೆಜ್ಜೆ ಹಾಕುತ್ತಿರುವವರು ಎಲ್ಲರೂ ಸಿನಿಮೇತರ ಹಿನ್ನೆಲೆಯವರಾಗಿದ್ದಾರೆ ಎಂದು ಸಲೀಂ ಹೇಳಿದ್ದಾರೆ.

ಅಮಿತಾಭ್ ಬಚ್ಚನ್ ಆಂಗ್ರಿ ಯಂಗ್ ಮ್ಯಾನ್ ಪಾತ್ರವನ್ನು ನಿಭಾಯಿಸಬಲ್ಲ ನಟರಾಗಿದ್ದರು. ಆದರೆ, ಈಗ ಅವರಿಗೆ ತಕ್ಕಂತಹ ಕತೆಗಳಿಲ್ಲ. ನಮ್ಮ ಸಿನಿಮಾ ತಾಂತ್ರಕವಾಗಿ, ಸಂಗೀತ, ಆಕ್ಷನ್​ ವಿಭಾಗದಲ್ಲಿ ಅಭಿವೃದ್ಧಿ ಹೊಂದಿದೆ. ಆದರೆ, ನಮ್ಮ ಬಳಿ ಒಳ್ಳೆಯ ಸ್ಕ್ರಿಪ್ಟ್ ಇಲ್ಲ ಎಂದು ಅವರು ಹೇಳಿದ್ದಾರೆ. ಸಲೀಂ ಖಾನ್ 1973 ರಲ್ಲಿ ಜಂಜೀರ್ ಸಿನಿಮಾದ ಮೂಲಕ ಅಮಿತಾಭ್ ಬಚ್ಚನ್ ಜೊತೆಗೆ ಕೆಲಸ ಮಾಡಿದವರಾಗಿದ್ದಾರೆ. ಶೋಲೆ, ದೀವಾರ್, ಮಜ್​ಬೂರ್, ಡಾನ್ ತ್ರಿಶೂಲ್, ಕಾಲ ಪತ್ತರ್, ದೋಸ್ತಾನ ಅಂತಹ ಖ್ಯಾತ ಸಿನಿಮಾಗಳಿಗೆ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ.

ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಭ್​ ಬಚ್ಚನ್​ ಅವರು ನಿನ್ನೆಯಷ್ಟೇ (ಅ.11) 79ನೇ ಜನ್ಮದಿನ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಶುಭಾಶಯ ಕೋರಿದ್ದರು. ಅಮಿತಾಭ್ ಈ ವಯಸ್ಸಿನಲ್ಲೂ ಹದಿಹರೆಯದ ಯುವಕನಂತೆ ಆ್ಯಕ್ಟೀವ್​ ಆಗಿದ್ದಾರೆ. ಈಗಲೂ ಅವರು ಬಹುಬೇಡಿಕೆಯ ನಟನಾಗಿದ್ದಾರೆ. ಹೊಸ ಹೀರೋಗಳಿಗೆ ಭರ್ಜರಿ ಪೈಪೋಟಿ ನೀಡುವಂತಹ ಚಾರ್ಮ್​ ಈಗಲೂ ಅವರಲ್ಲಿದೆ.

ಇದನ್ನೂ ಓದಿ: ಅಮಿತಾಭ್​ ಬಚ್ಚನ್​ಗೆ 79ನೇ ಹುಟ್ಟುಹಬ್ಬ; ದಣಿವರಿಯದ ಚಿರ ಯುವಕನಿಗೆ ಜನ್ಮದಿನದ ಶುಭಾಶಯ

ಇದನ್ನೂ ಓದಿ: Amitabh Bachchan: ದುಬಾರಿ ಮೊತ್ತದ ಕಾರುಗಳ ಸಂಗ್ರಹವನ್ನೇ ಇಟ್ಟಿರುವ ಅಮಿತಾಭ್!; ಇಲ್ಲಿವೆ ಚಿತ್ರಗಳು

Published On - 10:24 pm, Tue, 12 October 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ