ಅಮಿತಾಭ್​ ಬಚ್ಚನ್​ಗೆ 79ನೇ ಹುಟ್ಟುಹಬ್ಬ; ದಣಿವರಿಯದ ಚಿರ ಯುವಕನಿಗೆ ಜನ್ಮದಿನದ ಶುಭಾಶಯ

TV9 Digital Desk

| Edited By: ಮದನ್​ ಕುಮಾರ್​

Updated on:Oct 11, 2021 | 9:07 AM

ನಟ ಅಮಿತಾಭ್​ ಬಚ್ಚನ್​ ಅವರ 79ನೇ ಜನ್ಮದಿನಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ. ನಿರ್ಮಾಪಕ ಆನಂದ್​ ಪಂಡಿತ್​ ಅವರ ಮನೆಯಲ್ಲಿ ಈ ಬಾರಿ ಹುಟ್ಟುಹಬ್ಬ ಆಚರಿಸಲಾಗಿದೆ. ಬಿಗ್​ ಬಿ ಪಾರ್ಟಿಗೆ ತೆರಳುತ್ತಿರುವ ಫೋಟೋ ವೈರಲ್​ ಆಗಿದೆ.

ಅಮಿತಾಭ್​ ಬಚ್ಚನ್​ಗೆ 79ನೇ ಹುಟ್ಟುಹಬ್ಬ; ದಣಿವರಿಯದ ಚಿರ ಯುವಕನಿಗೆ ಜನ್ಮದಿನದ ಶುಭಾಶಯ
ಅಮಿತಾಭ್ ಬಚ್ಚನ್

ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಭ್​ ಬಚ್ಚನ್​ ಅವರಿಗೆ ಇಂದು (ಅ.11) ಜನ್ಮದಿನದ ಸಂಭ್ರಮ. 79ನೇ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ಈ ವಯಸ್ಸಿನಲ್ಲೂ ಹದಿಹರೆಯದ ಯುವಕನಂತೆ ಆ್ಯಕ್ಟೀವ್​ ಆಗಿರುವ ಅಮಿತಾಭ್​ ಬಚ್ಚನ್​ ಎಲ್ಲರಿಗೂ ಸ್ಫೂರ್ತಿ. ಈಗಲೂ ಅವರು ಬಹುಬೇಡಿಕೆಯ ನಟನಾಗಿ ಬಾಲಿವುಡ್​ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಹೊಸ ಹೀರೋಗಳಿಗೆ ಭರ್ಜರಿ ಪೈಪೋಟಿ ನೀಡುವಂತಹ ಚಾರ್ಮ್​ ಈಗಲೂ ಅವರಲ್ಲಿದೆ. ಪ್ರಸ್ತುತ ಹಲವು ಸಿನಿಮಾಗಳಲ್ಲಿ ಅಮಿತಾಭ್​ ಬಚ್ಚನ್​ ನಟಿಸುತ್ತಿದ್ದಾರೆ.

ನಿರ್ಮಾಪಕ ಆನಂದ್​ ಪಂಡಿತ್​ ಅವರ ಮನೆಯಲ್ಲಿ ಈ ಬಾರಿ ಅಮಿತಾಭ್​ ಬಚ್ಚನ್​ ಜನ್ಮದಿನವನ್ನು ಆಚರಿಸಲಾಗಿದೆ. ಈ ಪಾರ್ಟಿಗೆ ತೆರಳುತ್ತಿರುವಾಗ ಕ್ಲಿಕ್ಕಿಸಿದ ಫೋಟೋವನ್ನು ಬಿಗ್​ ಬಿ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘80ರ ಕಡೆಗೆ ಪಯಣ’ ಎಂದು ಅವರು ಈ ಪೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಕೆಲವೇ ಗಂಟೆ ಕಳೆಯುವುದರೊಳಗೆ ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಟೋಗೆ 7 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಬಟನ್​ ಒತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕಮೆಂಟ್​ಗಳ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಅತಿ ಹೆಚ್ಚು ಬ್ಯುಸಿ ಆಗಿರುವ ನಟರ ಪೈಕಿ ಅಮಿತಾಭ್​ ಬಚ್ಚನ್​ ಹೆಸರು ಕೂಡ ಮುಂಚೂಣಿಯಲ್ಲಿದೆ. ನಟನೆ ಮಾತ್ರವಲ್ಲದೆ, ಕಿರುತೆರೆಯ ‘ಕೌನ್​ ಬನೇಗಾ ಕರೋಡ್​ಪತಿ’ (KBC) ಕಾರ್ಯಕ್ರಮದ ನಿರೂಪಣೆಯಲ್ಲೂ ಬಿಗ್​ ಬಿ ತೊಡಗಿಕೊಂಡಿದ್ದಾರೆ. ಈ ಕಾರ್ಯಕ್ರಮದ 13ನೇ ಸೀಸನ್​ ಪ್ರಸಾರ ಆಗುತ್ತಿದೆ. ಸಿನಿಮಾ ಶೂಟಿಂಗ್​ಗಳ ನಡುವೆ ‘ಕೌನ್​ ಬನೇಗಾ ಕರೋಡ್​ಪತಿ’ ಶೋ ಸಲುವಾಗಿಯೂ ಅವರು ಸಮಯ ಹೊಂದಿಸಿಕೊಳ್ಳುತ್ತಾರೆ.

ಇಮ್ರಾನ್​ ಹಷ್ಮಿ ಜೊತೆ ಅಮಿತಾಭ್​ ನಟಿಸಿದ್ದ ‘ಜೆಹ್ರೆ’ ಚಿತ್ರ ಆ.27ರಂದು ತೆರೆಕಂಡಿತು. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿಗೆ ರಶ್ಮಿಕಾ ಮಂದಣ್ಣ ಜೊತೆ ‘ಗುಡ್​ ಬೈ’ ಸಿನಿಮಾದಲ್ಲಿ ಬಿಗ್​ ಬಿ ನಟಿಸುತ್ತಿದ್ದಾರೆ. ‘ಜುಂಡ್​’, ‘ಬ್ರಹ್ಮಾಸ್ತ್ರ’, ‘ಮೇಡೇ’, ‘ಊಂಚಾಯಿ’ ಮುಂತಾದ ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ಮಹಾನಟಿ’ ಖ್ಯಾತಿಯ ನಿರ್ದೇಶಕ ನಾಗ್​ ಅಶ್ವಿನ್​ ಜೊತೆಗೂ ಅಮಿತಾಭ್​ ಒಂದು ಸಿನಿಮಾ ಮಾಡುತ್ತಿದ್ದು, ಅದರ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ.

ಇದನ್ನೂ ಓದಿ:

‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​

‘ಪಾನ್ ಮಸಾಲಾದ ಪ್ರಚಾರದಿಂದ ದಯವಿಟ್ಟು ಹಿಂದೆ ಸರಿಯಿರಿ’; ಅಮಿತಾಭ್​ಗೆ ತಂಬಾಕು ವಿರೋಧಿ ಸಂಘಟನೆ ಒತ್ತಾಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada