‘ಪಾನ್ ಮಸಾಲಾದ ಪ್ರಚಾರದಿಂದ ದಯವಿಟ್ಟು ಹಿಂದೆ ಸರಿಯಿರಿ’; ಅಮಿತಾಭ್​ಗೆ ತಂಬಾಕು ವಿರೋಧಿ ಸಂಘಟನೆ ಒತ್ತಾಯ

Amitabh Bachchan: ಪಾನ್ ಮಸಾಲಾ ಕಂಪೆನಿಯೊಂದರ ಪ್ರಚಾರಕ ಸ್ಥಾನದಿಂದ ಹಿಂದೆ ಸರಿಯುವಂತೆ ಎನ್​ಜಿಒವೊಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರನ್ನು ಒತ್ತಾಯಿಸಿದೆ. ಈ ಕುರಿತು ಅದು ಪತ್ರವೊಂದನ್ನು ಬರೆದಿದೆ.

‘ಪಾನ್ ಮಸಾಲಾದ ಪ್ರಚಾರದಿಂದ ದಯವಿಟ್ಟು ಹಿಂದೆ ಸರಿಯಿರಿ’; ಅಮಿತಾಭ್​ಗೆ ತಂಬಾಕು ವಿರೋಧಿ ಸಂಘಟನೆ ಒತ್ತಾಯ
ಅಮಿತಾಭ್ ಬಚ್ಚನ್
Follow us
TV9 Web
| Updated By: shivaprasad.hs

Updated on: Sep 24, 2021 | 12:33 PM

ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆ (NOTE) ಎನ್​ಜಿಒ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರನ್ನು ಪಾನ್ ಮಸಾಲಾ ಪ್ರಚಾರ ಮಾಡುವ ಜಾಹೀರಾತಿನಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದೆ. ಅಮಿತಾಭ್ ಒಂದು ವೇಳೆ ಪ್ರಚಾರದಿಂದ ಹಿಂದೆ ಸರಿದರೆ ಯುವಕರನ್ನು ತಂಬಾಕಿನ ಚಟದಿಂದ ದೂರವಿಡಲು ಸಹಾಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಎನ್​ಜಿಒದ ಅಧ್ಯಕ್ಷ ಡಾ.ಶೇಖರ್ ಸಲ್ಕರ್ ಬರೆದ ಬಹಿರಂಗ ಪತ್ರದಲ್ಲಿ ಅಮಿತಾಭ್ ಪಾನ್ ಮಸಾಲಾ (ಪರಿಮಳಯುಕ್ತ ತಂಬಾಕು ಮಿಶ್ರಣ) ಜಾಹೀರಾತುಗಳಿಂದ ಹಿಂದೆ ಸರಿಯಬೇಕು ಮತ್ತು ತಂಬಾಕು ವಿರೋಧಿ ಚಳುವಳಿಯ ಅಭಿಯಾನವನ್ನು ಬೆಂಬಲಿಸಬೇಕು ಎಂದು ಕೋರಿಕೊಂಡಿದ್ದಾರೆ.

ತಂಬಾಕು ಮತ್ತು ಪಾನ್ ಮಸಾಲಾ ಸೇವನೆಯು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ದೀರ್ಘಕಾಲಿಕ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎನ್ನುವುದನ್ನು ವೈದ್ಯಕೀಯ ಸಂಶೋಧನೆಗಳು ಈಗಾಗಲೇ ತೋರಿಸಿವೆ ಎಂದು ಶೇಖರ್ ಹೇಳಿದ್ದಾರೆ. ಈ ಕುರಿತು ಅಮಿತಾಭ್​ಗೆ ಬರೆದ ಪತ್ರದಲ್ಲಿ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದು, ಪೋಲಿಯೋ ಸೇರಿದಂತೆ ಸರ್ಕಾರದ ಉನ್ನತ ಮಟ್ಟದ ಸಮಾಜ ಮುಖಿ ಕಾರ್ಯಗಳ ರಾಯಭಾರಿಯಾದ ಅಮಿತಾಭ್, ಪಾನ್ ಮಸಾಲಾ ಅಂಬಾಸಿಡರ್ ಆಗಿರುವುದು ಸರಿಯಲ್ಲ. ಆದಷ್ಟು ಶೀಘ್ರವಾಗಿ ಅದರಿಂದ ಅವರು ಹೊರಬರಬೇಕು ಎಂದಿದ್ದಾರೆ.

‘‘ಪಾನ್ ಬಾಯಿಯ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಹಲವು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ. ಇದನ್ನು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್‌ಸಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿಗಳೂ ಒಪ್ಪಿವೆ. ಆದ್ದರಿಂದ ಅಮಿತಾಭ್ ತಮ್ಮ ನಿರ್ಧಾರದ ಕುರಿತು ಆಲೋಚಿಸಬೇಕು. ಶಾರುಖ್ ಖಾನ್​, ಅಜಯ್ ದೇವಗನ್, ರಣವೀರ್ ಸಿಂಗ್, ಹೃತಿಕ್ ರೋಷನ್ ಮೊದಲಾದವರು ಪಾನ್ ಮಸಾಲಾ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವುದು ವಿದ್ಯಾರ್ಥಿಗಳಲ್ಲಿ ತಂಬಾಕು ಬಳಕೆ ಹೆಚ್ಚಿಸಲು ಕಾರಣವಾಗಿದೆ. ಈ ಕುರಿತು  ತಂಬಾಕು ವಿರೋಧಿ ಎನ್​ಜಿಒ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವನಾಗಿ ನನಗೆ ಬೇಸರವಿದೆ’’ ಎಂದು ಶೇಖರ್ ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ಅಮಿತಾಭ್ ಮತ್ತು ಅವರ ವಕ್ತಾರರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ನೋಟ್ ಸಂಸ್ಥೆಯು ತಂಬಾಕು ವಿರೋಧಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕಳೆದ ದಶಕದಲ್ಲಿ ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುವ ಸೆಲೆಬ್ರಿಟಿಗಳನ್ನು ಸಂಸ್ಥೆ ಗುರಿಯಾಗಿಸಿ ಹೋರಾಟ ನಡೆಸಿತ್ತು. 2010 ರಲ್ಲಿ, ಚಲನಚಿತ್ರ ನಟ ಅಜಯ್ ದೇವಗನ್ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಈ ಸಂಸ್ಥೆಯು ಹೋರಾಟ ನಡೆಸಿತ್ತು. ಪರಿಣಾಮ, ಅಜಯ್​ಗೆ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

400 ಕೋಟಿ ರೂ. ಆಸೆ ತೋರಿಸಿದ್ರೂ ಕರಗಲಿಲ್ಲ ನಿರ್ಮಾಪಕನ ಮನಸ್ಸು; ಏನಿದು ಬಗೆಹರಿಯದ ಬಿಗ್​ ಡೀಲ್​?

ಬಿಗ್ ಬಾಸ್ ಒಟಿಟಿಯಲ್ಲಿ ಯಾವುದು ನಿಜ, ಯಾವುದು ಸುಳ್ಳು; ಚರ್ಚೆ ಹುಟ್ಟುಹಾಕಿತು ರಾಕೇಶ್ ಬಾಪಟ್ ಹೇಳಿಕೆ

‘ಕೆಲವು ಹೆಂಗಸರ ಕಾಟ ತಾಳಲಾರದೆ ದೇಶ ಬಿಟ್ಟು ಹೋದೆ’: ಮಲ್ಲಿಕಾ ಶೆರಾವತ್​ ತೆರೆದಿಟ್ಟ ಕಹಿ ಸತ್ಯ

(NGO asks Amitabh Bachchan to withdraw from Pan Masala ad campaign)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್