ಬಿಗ್ ಬಾಸ್ ಒಟಿಟಿಯಲ್ಲಿ ಯಾವುದು ನಿಜ, ಯಾವುದು ಸುಳ್ಳು; ಚರ್ಚೆ ಹುಟ್ಟುಹಾಕಿತು ರಾಕೇಶ್ ಬಾಪಟ್ ಹೇಳಿಕೆ

Big Boss OTT: ಬಿಗ್ ಬಾಸ್ ಒಟಿಟಿಯಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ರಾಕೇಶ್ ಬಾಪಟ್ ಬಿಗ್​ ವಾಸ್ ಒಳಗಿನ ಗುಟ್ಟುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಒಟಿಟಿಯಲ್ಲಿ ಯಾವುದು ನಿಜ, ಯಾವುದು ಸುಳ್ಳು; ಚರ್ಚೆ ಹುಟ್ಟುಹಾಕಿತು ರಾಕೇಶ್ ಬಾಪಟ್ ಹೇಳಿಕೆ
ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್
Follow us
TV9 Web
| Updated By: shivaprasad.hs

Updated on: Sep 24, 2021 | 11:07 AM

ಬಿಗ್​ ಬಾಸ್ ಒಟಿಟಿಯಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ನಡವಳಿಕೆಯಿಂದ ಎಲ್ಲರ ಗಮನ ಸೆಳೆದ ಸ್ಪರ್ಧಿಯೆಂದರೆ ಅದು ರಾಕೇಶ್ ಬಾಪಟ್. ಹೆಚ್ಚಾಗಿ ಯಾರೊಂದಿಗೂ ಜಗಳ ಕಾಯದೇ, ಎಲ್ಲರೊಂದಿಗೆ ಚೆನ್ನಾಗಿ ಉಳಿದವರು ಅವರು. ಶಮಿತಾ ಶೆಟ್ಟಿ ಜೊತೆಗಿನ ಸ್ನೇಹದಿಂದಲೂ ಅವರು ಸುದ್ದಿಯಾಗಿದ್ದರು. ಆದರೆ ಅವರಿಗೆ ಗೆಲುವಿನ ಕಿರೀಟ ಲಭಿಸಿಲ್ಲ. ಈ ಕುರಿತು ರಾಕೇಶ್​ಗೆ ಬೇರವೇನೂ ಇದ್ದಂತಿಲ್ಲ. ಆದರೆ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಅದರಲ್ಲೂ ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂದು ನಿಮಗನ್ನಿಸಿತೇ? ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ಎಲ್ಲರ ಗಮನ ಸೆಳೆದಿದ್ದು, ಚರ್ಚೆಗೆ ಕಾರಣವಾಗಿದೆ.

ಕರಣ್ ಜೋಹರ್ ನಡೆಸಿಕೊಟ್ಟ ಬಿಗ್​ ಬಾಸ್ ಒಟಿಟಿ ಸ್ಪರ್ಧೆಯ ಫೈನಲಿಸ್ಟ್ ಆದ ರಾಕೇಶ್ ಬಾಪಟ್, ಬಿಗ್ ಬಾಸ್ ಮನೆಯ ಒಳಗಿನ ಡ್ರಾಮಾಗಳ ಕುರಿತು ಮಾತನಾಡಿದ್ದಾರೆ. ‘‘ನನಗೆ ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಮನೆಯ ಸದಸ್ಯರು ಕಿತ್ತಾಡುತ್ತಿದ್ದರೆ, ಮುಂದಿನ ಕ್ಷಣದಲ್ಲಿ ಸಂತಸದಿಂದ ಆಲಂಗಿಸಿಕೊಳ್ಳುತ್ತಿರುತ್ತಾರೆ. ಅದು ನನಗೆ ನೈಜವಾಗಿದೆ ಎನ್ನಿಸುವುದಿಲ್ಲ’’ ಎಂದು ಹೇಳಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ ರಾಕೇಶ್ ಬಾಪಟ್ ಕುರಿತು ಆತ ತನ್ನ ಪರವಾಗಿ ನಿಲ್ಲುವುದಿಲ್ಲ ಎಂದು ಆರೋಪ ಮಾಡಿದ್ದರು. ಈ ಕುರಿತು ಪೀಪಿಂಗ್ ಮೂನ್​ಗೆ ನೀಡಿದ ಸಂದರ್ಶನದಲ್ಲಿ ರಾಕೇಶ್ ಮಾತನಾಡುತ್ತಾ, ಇತರರೊಂದಿಗೆ ತಾನು ನಿಲ್ಲದೇ, ಟೀಕೆಗೊಳಗಾದ ಕುರಿತು ಮಾತನಾಡಿದ್ದಾರೆ. ‘‘ನಾನು ಜೋರಾಗಿ ಕೂಗುತ್ತಾ ಅಭಿಪ್ರಾಯವನ್ನು ಹೊರಹಾಕುವ ವ್ಯಕ್ತಿಯಲ್ಲ. ನಾನು ಇತರರ ಬಗ್ಗೆ ಕಾಳಜಿ ವಹಿಸುತ್ತೇನೆ. ಹಾಗಂತ ಮೊದಲು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ’’  ಎಂದು ಅವರು ನುಡಿದಿದ್ದಾರೆ.

ಮುಂದುವರೆದು ಮಾತನಾಡಿದ ರಾಕೇಶ್, ‘‘ಯಾರನ್ನೂ ನೋಯಿಸುವುದು ನನಗೆ ಇಷ್ಟವಾಗುವುದಿಲ್ಲ. ಜೊತೆಗೆ ಯಾರಿಗಾದರೂ ನೋ ಎನ್ನುವುದು ನನಗೆ ಬಹಳ ಕಷ್ಟ. ಒಂದು ವೇಳೆ ಹಾಗೆ ಹೇಳಬೇಕಾಗಿ ಬಂದರೂ ಅದಕ್ಕೆ ಕಾರಣವನ್ನು ನೀಡಿ ಸಾವಧಾನವಾಗಿ ಹೇಳುವುದಕ್ಕೆ ನನ್ನ ಆದ್ಯತೆ. ಆದರೆ ಬಿಗ್​ಬಾಸ್​ನಲ್ಲಿ ಎಲ್ಲರನ್ನೂ ನಿಭಾಯಿಸುವುದು ನನಗೆ ಕಷ್ಟಕರವಾಗಿತ್ತು. ಕಾರಣ, ಮನೆಯೊಳಗೆ ಸೃಷ್ಟಿಯಾದ ಸಮಸ್ಯೆಗಳು ನೈಜವಾದ ಸಮಸ್ಯೆಗಳಲ್ಲ ಎಂದು ಭಾವಿಸಿದ್ದೆ. ಅವುಗಳು ಒಂದು ಸ್ವರೂಪದಂತೆ (ಫಾರ್ಮ್ಯಾಟ್) ನನಗೆ ಕಾಣಿಸುತ್ತಿತ್ತು’’ ಎಂದು ಅವರು ಉತ್ತರಿಸಿದ್ದಾರೆ.

ಬಿಗ್​ ಬಾಸ್ ಸ್ಕ್ರಿಪ್ಟ್ ಎಂಬುದರ ಕುರಿತು ಮಾತನಾಡಿದ ಅವರು, ಸ್ಪರ್ಧಿಗಳು ಹೋರಾಟದ ಹೆಸರಿನಲ್ಲಿ ಕಿತ್ತಾಡುವುದು ತನಗೆಲ್ಲೋ ನಿಜವಲ್ಲ ಎಂಬಂತೆ ಭಾಸವಾಯಿತು ಎಂದಿದ್ದಾರೆ. ಆಟದಲ್ಲಿ ಹೋರಾಟ ಮಾಡಬೇಕು ನಿಜ. ಅದನ್ನು ತಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಅದಕ್ಕಾಗಿ ಕಿತ್ತಾಡುವುದು ಎಷ್ಟು ಸರಿ. ಜೊತೆಗೆ ಇದರಿಂದಾಗಿ ದೀರ್ಘಕಾಲದ ಶತ್ರುಗಳನ್ನು ಹುಟ್ಟುಹಾಕಿಕಕೊಂಡಂತಾಗುತ್ತದೆ. ತನಗೆ ಇವೆಲ್ಲಾ ನೈಜ ಎನ್ನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರು ಬಿಗ್​ ಬಾಸ್​ನಲ್ಲಿ ನಡೆಯುವ ಕಿತ್ತಾಟಗಳು ಸ್ಕ್ರಿಪ್ಟೆಡ್ ಹೌದೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದ್ದು, ಅಭಿಮಾನಿಗಳು ತಮ್ಮ ವಾದವನ್ನು ಹೂಡುತ್ತಿದ್ದಾರೆ.

ಇದನ್ನೂ ಓದಿ:

ಶಮಿತಾ ಜೊತೆಗಿನ ಸಂಬಂಧ ಸ್ನೇಹಕ್ಕೂ ಮೀರಿದ್ದು ಎಂದು ಸತ್ಯ ಒಪ್ಪಿಕೊಂಡ ರಾಕೇಶ್ ಬಾಪಟ್; ಮುಂದೇನು?

‘ಕೆಲವು ಹೆಂಗಸರ ಕಾಟ ತಾಳಲಾರದೆ ದೇಶ ಬಿಟ್ಟು ಹೋದೆ’: ಮಲ್ಲಿಕಾ ಶೆರಾವತ್​ ತೆರೆದಿಟ್ಟ ಕಹಿ ಸತ್ಯ

ಸಲ್ಮಾನ್ ಬಾಳಿನಲ್ಲಿ ದೀರ್ಘಕಾಲ ಉಳಿದ ಸಂಬಂಧ ಯಾವುದು?; ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಹೇಳಿಕೊಂಡ ನಟ 

(Raqesh Bapat opens up about what he felt like a script on Big Boss OTT)

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ