‘ಕೆಲವು ಹೆಂಗಸರ ಕಾಟ ತಾಳಲಾರದೆ ದೇಶ ಬಿಟ್ಟು ಹೋದೆ’: ಮಲ್ಲಿಕಾ ಶೆರಾವತ್ ತೆರೆದಿಟ್ಟ ಕಹಿ ಸತ್ಯ
‘ಒಂದು ವರ್ಗದ ಮಾಧ್ಯಮದವರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ನನ್ನನ್ನು ಟಾರ್ಗೆಟ್ ಮಾಡಿದರು. ಈಕೆಗೆ ನೈತಿಕತೆ ಇಲ್ಲ, ಬಿಕಿನಿ ಧರಿಸುತ್ತಾಳೆ, ಸಿನಿಮಾದಲ್ಲಿ ಕಿಸ್ ಮಾಡುತ್ತಾಳೆ ಎಂದೆಲ್ಲ ಕಮೆಂಟ್ ಮಾಡಿದರು’ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.
ಮಲ್ಲಿಕಾ ಶೆರಾವತ್ ಹೆಸರು ಕೇಳಿದರೆ ಸಾಕು ಪಡ್ಡೆಗಳ ಕಿವಿ ಚುರುಕಾಗುತ್ತದೆ. ಅಷ್ಟರಮಟ್ಟಿಗೆ ಬೋಲ್ಡ್ ಸಿನಿಮಾಗಳ ಮೂಲಕ ಅವರು ಮನೆಮಾತಾಗಿದ್ದಾರೆ. ಒಂದು ಕಾಲದಲ್ಲಿ ಅವರು ನಟಿಸಿದ ಬಾಲಿವುಡ್ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದ್ದವು. ಕನ್ನಡಕ್ಕೂ ಬಂದು ಅವರು ಐಟಂ ಸಾಂಗ್ ಮಾಡಿಹೋದರು. ಆದರೆ ಇದ್ದಕ್ಕಿದ್ದಂತೆಯೇ ಮಲ್ಲಿಕಾ ಶೆರಾವತ್ ಭಾರತ ಬಿಟ್ಟು ಹೋಗಬೇಕಾಯಿತು! ಅದಕ್ಕೆ ಒಂದು ವರ್ಗದ ಹೆಂಗಸರು ಕಾರಣ ಎಂಬುದೇ ಅಚ್ಚರಿಯ ವಿಚಾರ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಲ್ಲಿಕಾ ಶೆರಾವತ್ ಈ ವಿಚಾರ ಬಾಯಿ ಬಿಟ್ಟಿದ್ದಾರೆ. ತಾವು ಭಾರತ ಬಿಟ್ಟು ಹೋಗಿದ್ದಕ್ಕೆ ಅಸಲಿ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಎದುರಿಸಿದ ಎಲ್ಲ ಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
‘ಮರ್ಡರ್’ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ತುಂಬಾ ಬೋಲ್ಡ್ ಆಗಿ ನಟಿಸಿದ್ದರು. ಅದನ್ನು ನೋಡಿದ ಪಡ್ಡೆ ಹುಡುಗರು ಮಲ್ಲಿಕಾಗೆ ಪರ್ಮನೆಂಟ್ ಫ್ಯಾನ್ಸ್ ಆಗಿಬಿಟ್ಟರು. ಆದರೆ ಮಾಧ್ಯಮಗಳಲ್ಲಿ ಮಲ್ಲಿಕಾ ಬಗ್ಗೆ ಟೀಕೆ ಕೇಳಿಬರಲು ಆರಂಭಿಸಿತು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಲೇ ಇದ್ದರು. ಆದರೆ ಯಾವಾಗ ಮಾಧ್ಯಮಗಳಲ್ಲಿ ಅವರ ಬಗ್ಗೆ ಇಲ್ಲಸಲ್ಲದ ವರದಿಗಳು ಬಿತ್ತರವಾಗಲು ಪ್ರಾರಂಭಿಸಿತೋ ಆಗ ಅವರಿಗೆ ತುಂಬ ಬೇಸರ ಆಯಿತು. ಆ ಕುರಿತು ಮಲ್ಲಿಕಾ ಈಗ ಬಾಯಿ ಬಿಟ್ಟಿದ್ದಾರೆ.
‘ಒಂದು ವರ್ಗದ ಮಾಧ್ಯಮದವರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ನನ್ನನ್ನು ಟಾರ್ಗೆಟ್ ಮಾಡಿದರು. ಈಕೆಗೆ ನೈತಿಕತೆ ಇಲ್ಲ, ಬಿಕಿನಿ ಧರಿಸುತ್ತಾಳೆ, ಸಿನಿಮಾದಲ್ಲಿ ಕಿಸ್ ಮಾಡುತ್ತಾಳೆ ಎಂದೆಲ್ಲ ಕಮೆಂಟ್ ಮಾಡಿದರು. ಗಂಡಸರಿಗೆ ಇದೆಲ್ಲ ಸಮಸ್ಯೆಯೇ ಆಗಿರಲಿಲ್ಲ. ಪುರುಷರು ನನಗೆ ಬೆಂಬಲ ನೀಡಿದರು. ಮಹಿಳೆಯರು ಕಿರುಕುಳ ನೀಡಿದರು. ಮಹಿಳೆಯರು ಯಾಕೆ ನನ್ನ ವಿರುದ್ಧವಾಗಿದ್ದರು ಎಂಬುದೇ ನನಗೆ ಅರ್ಥವಾಗಲಿಲ್ಲ. ಹಾಗಾಗಿ ನಾನು ದೇಶಬಿಟ್ಟು ಹೋಗಲು ನಿರ್ಧರಿಸಿದೆ. ಆದರೆ ಈಗ ಕಾಲ ಬದಲಾಗಿದೆ. ನನ್ನನ್ನು ಅವರೀಗ ಒಪ್ಪಿಕೊಂಡಿದ್ದಾರೆ’ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.
ಕಾಸ್ಟಿಂಗ್ ಕೌಚ್ ಬಗ್ಗೆಯೂ ಮಲ್ಲಿಕಾ ಮಾತನಾಡಿದ್ದಾರೆ. ‘ನಾನು ನೇರವಾಗಿ ಕಾಸ್ಟಿಂಗ್ ಕೌಚ್ ಎದುರಿಸಿಲ್ಲ. ನನಗೆ ಸ್ಟಾರ್ಡಮ್ ಸುಲಭವಾಗಿ ಸಿಕ್ಕಿತ್ತು. ಮುಂಬೈಗೆ ಬರುತ್ತಿದ್ದಂತೆಯೇ ಆಫರ್ಗಳು ಸಿಕ್ಕವು. ನಾನು ಹೆಚ್ಚು ಸ್ಟ್ರಗಲ್ ಮಾಡುವ ಪರಿಸ್ಥಿತಿ ಎದುರಾಗೇ ಇಲ್ಲ. ‘ಮರ್ಡರ್’ ಸಿನಿಮಾದಲ್ಲಿ ನಾನು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಹೀಗಾಗಿ, ಸಾಕಷ್ಟು ನಟರು ನನ್ನ ಬಳಿ ಬೇರೆ ರೀತಿಯಲ್ಲಿ ಮಾತನಾಡೋಕೆ ಆರಂಭಿಸಿದರು. ನೀವು ಸಿನಿಮಾದಲ್ಲಿ ಮಾತ್ರವಲ್ಲ ನಮ್ಮ ಜತೆಯೂ ಆ ರೀತಿ ಮಾಡಬಹುದು ಎಂದು ಆಹ್ವಾನ ನೀಡಿದ್ದರು. ನಾನು ಯಾವುದಕ್ಕೂ ಕಾಂಪ್ರಮೈಸ್ ಆಗುವುದಿಲ್ಲ. ನಾನು ಕಾಂಪ್ರಮೈಸ್ ಆಗೋಕೆ ಬಂದಿಲ್ಲ. ನಾನು ಇಲ್ಲಿಗೆ ಬಂದಿದ್ದು ನನ್ನ ಕರಿಯರ್ ಬೆಳೆಸಿಕೊಳ್ಳೋಕೆ ಎಂದು ನೇರವಾಗಿ ಹೇಳಿದ್ದೆ. ಇದರಿಂದ ಅನೇಕರು ನನ್ನ ಜತೆ ನಟಿಸೋಕೆ ಹಿಂದೇಟು ಹಾಕಿದ್ದರು’ ಎಂದಿದ್ದಾರೆ ಮಲ್ಲಿಕಾ.
ಇದನ್ನೂ ಓದಿ:
‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ
ಸ್ಟಾರ್ ನಟಿಯರಿಗೆ ಕಿಸ್ ಮಾಡಿ ತೊಂದರೆಗೆ ಸಿಲುಕಿದ್ದ ಇಮ್ರಾನ್ ಹಷ್ಮಿ! ತಪ್ಪು ಒಪ್ಪಿಕೊಂಡ ನಟ