Saif Ali Khan: ಉತ್ತಮ ನಟರಾಗಲು ಈ ಹಾದಿಯನ್ನು ಅನುಸರಿಸಿ; ಸೈಫ್ ತನ್ನ ಮಕ್ಕಳಿಗೆ ಹೇಳಿದ ಕಿವಿ ಮಾತಿದು

Kareena Kapoor: ಬಾಲಿವುಡ್​ನ ಖ್ಯಾತ ನಟ ಸೈಫ್ ಅಲಿ ಖಾನ್ ತನ್ನ ಮಕ್ಕಳಿಗೆ ನಟನೆಯನ್ನೇ ವೃತ್ತಿಯಾಗಿಸಿಕೊಳ್ಳುವುದರ ಕುರಿತು ಒಂದಷ್ಟು ಕಿವಿಮಾತುಗಳನ್ನು ಹೇಳಿದ್ದಾರೆ.

Saif Ali Khan: ಉತ್ತಮ ನಟರಾಗಲು ಈ ಹಾದಿಯನ್ನು ಅನುಸರಿಸಿ; ಸೈಫ್ ತನ್ನ ಮಕ್ಕಳಿಗೆ ಹೇಳಿದ ಕಿವಿ ಮಾತಿದು
ತನ್ನ ಮಕ್ಕಳೊಂದಿಗೆ ಸೈಫ್ ಅಲಿ ಖಾನ್
Follow us
TV9 Web
| Updated By: shivaprasad.hs

Updated on: Sep 24, 2021 | 1:31 PM

ಬಾಲಿವುಡ್​ನ ಖ್ಯಾತ ತಾರೆ ಸೈಫ್ ಅಲಿ ಖಾನ್ ನಾಲ್ಕು ಮಕ್ಕಳ ತಂದೆ. ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಮಕ್ಕಳಾದ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಈಗಾಗಲೇ ಬಹುತೇಕ ಸ್ವತಂತ್ರವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಾರಾ ಅಲಿ ಖಾನ್ 2015ರಿಂದಲೇ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಉತ್ತಮ ಬೇಡಿಕೆಯೂ ಇದೆ. ಪುತ್ರ ಇಬ್ರಾಹಿಂ ಇನ್ನಷ್ಟೇ ಬಾಲಿವುಡ್ ಪ್ರವೇಶ ಮಾಡಬೇಕಿದೆ. ಜೊತೆಗೆ ಪ್ರಸ್ತುತ ಕರೀನಾ ಕಪೂರ್ ಜೊತೆ ದಾಂಪತ್ಯದಲ್ಲಿರುವ ಸೈಫ್, ತೈಮೂರ್ ಹಾಗೂ ಜೇಹ್ ಎಂಬ ಈರ್ವರು ಮಕ್ಕಳನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಮಕ್ಕಳಿಗೆ ನಟರಾಗಲು ತನ್ನ ಸಲಹೆಯೇನು ಎಂಬುದನ್ನು ಹೇಳಿದ್ದಾರೆ.

ಇತ್ತೀಚೆಗೆ ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ, ಒಂದು ವೇಳೆ ಜೇಹಾ, ಇಬ್ರಾಹಿಂ ಹಾಗೂ ತೈಮೂರ್ ನಟನಾ ಕ್ಷೇತ್ರಕ್ಕೆ ಕಾಲಿಡುವುದಾದರೆ ಸುತ್ತಮುತ್ತಲಿನ ಜನರಿಂದ ಮೊದಲು ಕಲಿಯಿರಿ ಎನ್ನುತ್ತೇನೆ ಎಂದಿದ್ದಾರೆ ಸೈಫ್. ‘‘ನಿಮ್ಮ ಸುತ್ತ ಮುತ್ತ ಖ್ಯಾತ ನಟರು, ದೊಡ್ಡ ತಾರೆಯರು ಎಲ್ಲರೂ ಇದ್ದಾರೆ. ಎಲ್ಲರನ್ನೂ ನೋಡಿ ಕಲಿಯಿರಿ. ಒಳ್ಳೆಯ ಕೆಲಸಗಳನ್ನು ಮಾಡಿ. ತಪ್ಪುಗಳನ್ನೂ ಮಾಡಿ. ಆದರೆ ಅದರಿಂದ ಪಾಠವನ್ನು ಕಲಿಯಿರಿ. ಇತರರ ತಪ್ಪುಗಳಿಂದಲೂ ನೀವು ಪಾಠ ಕಲಿಯಿರಿ’’ ಎಂದಿದ್ದಾರೆ ಸೈಫ್.

ಒಬ್ಬ ಕಲಾವಿದನಾಗಿ ಈ ಗುಣಗಳನ್ನು ನೆನಪಿಟ್ಟುಕೊಳ್ಳಬೇಕು ಎಂದು ಸೈಫ್ ಕಿವಿ ಮಾತು ಹೇಳಿದ್ದಾರೆ. ‘‘ನೀವು ಮಾಡುವ ಚಿತ್ರಗಳು ಉತ್ತಮ ಮನೋರಂಜನೆ ನೀಡಬೇಕು. ಅದನ್ನು ಗಮನದಲ್ಲಿಟ್ಟುಕೊಳ್ಳಿ. ನಾವು ಈ ಜಗತ್ತಿಗೆ ಕೊಡುಗೆ ನೀಡಲು ಮನರಂಜನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದ್ದರಿಂದಲೇ ಅದರ ಗುಣಮಟ್ಟದಲ್ಲಿ ರಾಜಿಯಾಗಬಾರದು. ಮತ್ತು ಕೇವಲ ನಟನೆಯನ್ನೇ ಗಮನ ಹರಿಸಿ. ಪಾತ್ರಗಳನ್ನು ನಿರ್ವಹಿಸುವುದರಲ್ಲೇ ಸಂತಸ ಕಂಡುಕೊಳ್ಳಿ’’ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಸೈಫ್ ಮೊದಲ ಪುತ್ರ ಇಬ್ರಾಹಿಂ ಅಲಿ ಖಾನ್ ಇನ್ನೂ ಬಾಲಿವುಡ್ ಪ್ರವೇಶಿಸಿಲ್ಲ. ಜಾಹಿರಾತು, ಮಾಡೆಲಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕರೀನಾ ಪುತ್ರರಾದ ತೈಮೂರ್ ಹಾಗೂ ಜೇಹ್ ಸಣ್ಣ ವಯಸ್ಸಿನವರಾಗಿದ್ದಾರೆ. ಅವರು ನಟನಾ ಕ್ಷೇತ್ರಕ್ಕೆ ಕಾಲಿಡಲು ಕೆಲವು ವರ್ಷಗಳೇ ಬೇಕು! ಈ ನಡುವೆ ಕರೀನಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಜೇಹ್ ಹಾಗೂ ತೈಮೂರ್ ಚಿತ್ರರಂಗ ಪ್ರವೇಶಿಸದೇ ಇದ್ದರೆ ತನಗೆ ಸಂತೋಷವಾಗುತ್ತದೆ ಎಂದಿದ್ದರು.

ಇದನ್ನೂ ಓದಿ:

ದುಬಾರಿ ವೆಚ್ಚದ ಮದುವೆಯೆಂದರೆ ಭಯವಾಗುತ್ತದೆ, ಕಾರಣ ನನಗೆ 4 ಮಕ್ಕಳಿದ್ದಾರೆ: ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು ಸೈಫ್ ಮಾತು

Kareena Kapoor: ಮಕ್ಕಳು ಫಿಲ್ಮ್ ಸ್ಟಾರ್ಸ್ ಆಗೋದು ತನಗಿಷ್ಟವಿಲ್ಲ ಎಂದ ಕರೀನಾ; ಹಾಗಾದರೆ ಕರೀನಾ ಕನಸೇನು?

ದೀಪಿಕಾರನ್ನು ಕಾಪಿ ಮಾಡಿ ಸಿಕ್ಕಿ ಬಿದ್ರಾ ರಶ್ಮಿಕಾ ಮಂದಣ್ಣ? ಸೈಮಾದಲ್ಲಿ ಕಣ್ಣು ಕುಕ್ಕಿದ ಗೌನ್​

(Saif Ali Khan gives advice to his sons Ibrahim Taimur and Jeh for their acting career)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ