ಡ್ರಗ್ಸ್​ ಕೇಸ್​: ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; ಶಾರುಖ್​ ಪುತ್ರನಿಗೆ ಮುಗಿಯದ ಸಂಕಷ್ಟ

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಆರ್ಯನ್​ ಖಾನ್​ಗೆ ಈವರೆಗೂ ಜಾಮೀನು ಸಿಕ್ಕಿಲ್ಲ. ಶಾರುಖ್​ ಪುತ್ರನಿಗೆ ಜಾಮೀನು ಕೊಡಿಸಲು ಆರ್ಯನ್​ ಪರ ವಕೀಲರಾದ ಸತೀಶ್​ ಮಾನೆಶಿಂಧೆ ಎಲ್ಲಿಲ್ಲದ ಪ್ರಯತ್ನ ಪಡುತ್ತಿದ್ದಾರೆ.

ಡ್ರಗ್ಸ್​ ಕೇಸ್​: ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; ಶಾರುಖ್​ ಪುತ್ರನಿಗೆ ಮುಗಿಯದ ಸಂಕಷ್ಟ
ಆರ್ಯನ್ ಖಾನ್

ರೇವ್ಸ್​ ಪಾರ್ಟಿ ಮಾಡಿ ಸಿಕ್ಕಿ ಬಿದ್ದಿರುವ ಆರ್ಯನ್​ ಖಾನ್​ಗೆ ಜಾಮೀನು ಎಂಬುದು ಮರೀಚಿಕೆಯಾಗಿದೆ. ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಾರುಖ್​ ಖಾನ್​ ಪುತ್ರ ಸದ್ಯ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಸೋಮವಾರ (ಅ.11) ವಿಶೇಷ ಎನ್​ಡಿಪಿಎಸ್​ ನ್ಯಾಯಾಲಯದಲ್ಲಿ ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಅರ್ಜಿ ವಿಚಾರಣೆ ದಿನಾಂಕವನ್ನು ನ್ಯಾಯಾಲಯಕ್ಕೆ ಬುಧವಾರಕ್ಕೆ (ಅ.13) ಮುಂದೂಡಿದೆ. ಅಲ್ಲಿಯವರೆಗೂ ಆರ್ಯನ್​ ಖಾನ್​ ಜೈಲಿನಲ್ಲಿ ದಿನ ಕಳೆಯದೇ ಬೇರೆ ದಾರಿ ಇಲ್ಲ.

ಆರ್ಯನ್​ ಖಾನ್​ಗೆ ಜಾಮೀನು ಕೊಡಿಸಲು ಶಾರುಖ್​ ಖಾನ್​ ಹರಸಾಹಸ ಮಾಡುತ್ತಿದ್ದಾರೆ. ಪುತ್ರ ಅರೆಸ್ಟ್​ ಆದ ದಿನದಿಂದಲೂ ಶಾರುಖ್​ ಮತ್ತು ಗೌರಿ ಖಾನ್​ ದಂಪತಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಊಟ, ನಿದ್ರೆಯ ಕಡೆಗೂ ಅವರು ಗಮನ ಕೊಡುತ್ತಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ. ಒಂದು ವೇಳೆ ಸ್ಪೆಷಲ್​ ಎನ್​ಡಿಪಿಎಸ್​ ನ್ಯಾಯಾಲಯದಲ್ಲಿ ಆರ್ಯನ್​ಗೆ ಜಾಮೀನು ಸಿಗದೇ ಇದ್ದರೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ವಕೀಲ ಸತೀಶ್​ ಮಾನೆಶಿಂಧೆ ನಿರ್ಧರಿಸಿದ್ದಾರೆ. ಯಾವುದಕ್ಕೂ ಬುಧವಾರದವರೆಗೆ ಕಾಯುವುದು ಅನಿವಾರ್ಯ.

ಶಾರುಖ್​ ಕುಟುಂಬದ ಪರ ನಿಂತ ಸೆಲೆಬ್ರಿಟಿಗಳು:

ಶಾರುಖ್​ ಮತ್ತು ಅವರ ಕುಟುಂಬದ ಪರವಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಫರ್ಹಾ ಖಾನ್​, ಶೇಖರ್​ ಸುಮನ್​, ಹೃತಿಕ್​ ರೋಷನ್​, ಸಲ್ಮಾನ್​ ಖಾನ್​ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಎಸ್​ಆರ್​ಕೆಗೆ ಬೆಂಬಲ ಸೂಚಿಸಿದ್ದಾರೆ. ಈಗ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ವಿಶಾಲ್​ ದದ್ಲಾನಿ ಅವರು ಶಾರುಖ್​ ಪರ ಬ್ಯಾಟ್​ ಬೀಸಿದ್ದಾರೆ. ಅಲ್ಲದೇ, ಆರ್ಯನ್​ ಖಾನ್​ ಬಂಧನ ಒಂದು ಸಂಚು ಎಂದು ಅವರು ಆರೋಪಿಸಿದ್ದಾರೆ.

‘ಅದಾನಿ ಬಂದರಿನಲ್ಲಿ ಸಿಕ್ಕ 3 ಸಾವಿರ ಕೆಜಿ ತಾಲಿಬಾನಿ ಡ್ರಗ್ಸ್​ ಮತ್ತು ಬಿಜೆಪಿ ಶಾಸಕನ ಮಗ ಮಾಡಿದ ರೈತರ ಕೊಲೆ ಪ್ರಕರಣವನ್ನು ಮರೆಮಾಚಲು ಶಾರುಖ್​ ಖಾನ್​ ಮತ್ತು ಅವರ ಕುಟುಂಬವನ್ನು ಟಾರ್ಗೆಟ್​ ಮಾಡಲಾಗಿದೆ’ ಎಂದು ವಿಶಾಲ್​ ದದ್ಲಾನಿ ನೇರವಾಗಿ ಆರೋಪ ಮಾಡಿದ್ದಾರೆ. ‘ಕಳೆದ 30 ವರ್ಷದಲ್ಲಿ ಶಾರುಖ್​ ಖಾನ್​ ಜೊತೆ ಕೆಲಸ ಮಾಡಿದವರಲ್ಲಿ ಎಷ್ಟು ಜನರು ಈಗ ಅವರ ಪರವಾಗಿ ಇದ್ದೀರಿ’ ಎಂದು ಕೂಡ ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:

‘ಪ್ರೀತಿಯ ಆರ್ಯನ್​ ಖಾನ್​..’: ಶಾರುಖ್​ ಪುತ್ರನಿಗೆ ಹೃತಿಕ್​ ರೋಷನ್​ ಬಹಿರಂಗ ಪತ್ರ

ಶಾರುಖ್​ ಪುತ್ರನ ಅರೆಸ್ಟ್​ ಬೆನ್ನಲ್ಲೇ ಓಡೋಡಿ ಬಂದ ಸಲ್ಮಾನ್​ ಖಾನ್​; ‘ಮನ್ನತ್​’ನಲ್ಲಿ ನಡೆದಿದ್ದು ಏನು?

Read Full Article

Click on your DTH Provider to Add TV9 Kannada