ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಡ್ರಗ್ಸ್ ಪಾರ್ಟಿ ಮಾಡಿದ ಆರೋಪ ಹೊತ್ತು ಎನ್ಸಿಬಿ ಕಸ್ಟಡಿಯಲ್ಲಿದ್ದಾರೆ. ಈ ವೇಳೆ ಅನೇಕರು ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಈಗ ನಟ ಹೃತಿಕ್ ರೋಷನ್ ಅವರು ಆರ್ಯನ್ ಖಾನ್ ಪರವಾಗಿ ತಮ್ಮ ವಾದ ಮಂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಒಂದು ದೀರ್ಘವಾದ ಪತ್ರ ಬರೆಯುವ ಮೂಲಕ ಆರ್ಯನ್ಗೆ ಅವರು ಮಾರ್ಗದರ್ಶನ ಮಾಡಿದ್ದಾರೆ. ಅದು ಈಗ ಚರ್ಚೆಗೆ ಒಳಗಾಗುತ್ತಿದೆ. ಹೃತಿಕ್ ಜೊತೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕೂಡ ಶಾರುಖ್ ಫ್ಯಾಮಿಲಿಗೆ ಸಾಥ್ ನೀಡುತ್ತಿದ್ದಾರೆ.
‘ನನ್ನ ಪ್ರೀತಿಯ ಆರ್ಯನ್ ಖಾನ್..’ ಎಂದು ಹೃತಿಕ್ ಈ ಪತ್ರ ಆರಂಭಿಸಿದ್ದಾರೆ. ‘ಬದುಕೊಂದು ವಿಚಿತ್ರವಾದ ಪ್ರಯಾಣ. ಅನಿಶ್ಚಿತತೆ ಮತ್ತು ಕಷ್ಟದ ಕಾರಣದಿಂದಲೇ ಇದು ಮಹಾನ್ ಎನಿಸಿಕೊಂಡಿದೆ. ಆದರೆ ದೇವರು ಕರುಣಾಮಯ. ಪ್ರಬಲರಿಗೆ ಮಾತ್ರ ಅವನು ಕಠಿಣವಾದ ಕಷ್ಟ ಕೊಡುತ್ತಾನೆ. ಸಿಟ್ಟು, ಗೊಂದಲ, ಅಸಹಾಯಕತೆ ಎಲ್ಲವನ್ನೂ ನೀನು ಫೀಲ್ ಮಾಡಬೇಕು. ನಿನ್ನೊಳಗಿನ ಹೀರೋನನ್ನು ಹೊರತರಲು ಇವು ಪ್ರಮುಖ ಅಂಶಗಳು. ಆದರೆ ಹುಷಾರು… ಒಳ್ಳೆಯತನವನ್ನೂ ಇವು ಸುಟ್ಟು ಹಾಕಬಹುದು’ ಎಂದು ಹೃತಿಕ್ ಅವರು ಈ ಪತ್ರದಲ್ಲಿ ಬರೆದಿದ್ದಾರೆ.
‘ಅನುಭವಗಳಿಂದ ಯಾವ ಅಂಶವನ್ನು ನಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ದೂರ ಎಸೆಯಬೇಕು ಎಂದು ಅರ್ಥ ಮಾಡಿಕೊಂಡಾಗ ತಪ್ಪು, ಸೋಲು, ಯಶಸ್ಸು ಇವೆಲ್ಲವೂ ಒಂದೇ ಎನಿಸುತ್ತದೆ. ಅವೆಲ್ಲವುಗಳಿಂದ ನೀನು ಇನ್ನೂ ಚೆನ್ನಾಗಿ ಬೆಳೆಯಬಹುದು. ನಿನ್ನನ್ನು ಮಗು ಆಗಿದ್ದಾಗಿನಿಂದ ನಾನು ನೋಡಿದ್ದೇನೆ. ದೊಡ್ಡವನಾದ ಮೇಲೂ ನೋಡಿದ್ದೇನೆ. ಎಲ್ಲ ಅನುಭವಗಳನ್ನು ನಿನ್ನದಾಗಿಸಿಕೋ. ಅವು ನಿನ್ನ ಉಡುಗೊರೆಗಳು’ ಎಂದು ಹೃತಿಕ್ ಬರೆದಿದ್ದಾರೆ.
View this post on Instagram
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅದರ ಪರಿಣಾಮವಾಗಿ ಬಾಲಿವುಡ್ನ ಡ್ರಗ್ಸ್ ಪುರಾಣ ಮತ್ತೆ ಮುನ್ನೆಲೆಗೆ ಬಂದಿದೆ. ಆರ್ಯನ್ಗೆ ಜಾಮೀನು ಕೊಡಿಸಲು ಶಾರುಖ್ ಖಾನ್ ಹರಸಾಹಸ ಮಾಡುತ್ತಿದ್ದಾರೆ. ಮಗನ ಎಡವಟ್ಟಿನಿಂದಾಗಿ ಶಾರುಖ್ ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿದೆ. ಅವರು ನಟಿಸುತ್ತಿದ್ದ ಎಲ್ಲ ಚಿತ್ರಗಳ ಶೂಟಿಂಗ್ ನಿಂತಿದೆ.
ಇದನ್ನೂ ಓದಿ:
‘ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಖಾನ್ಗೆ ಶಿಕ್ಷೆ ಆಗಲ್ಲ’; ಭವಿಷ್ಯ ನುಡಿದ ಕಮಾಲ್ ಆರ್. ಖಾನ್
ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್ ಖಾನ್ ಇತಿಹಾಸ