ಆರ್ಯನ್ ಖಾನ್ ಬಂಧನದಿಂದ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಸಿನಿಮಾಗಳು; ಕೋಟ್ಯಂತರ ರೂಪಾಯಿ ನಷ್ಟ
ಶಾರುಖ್ ಖಾನ್ ಅವರು ಅಟ್ಲೀ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಪ್ರಗತಿಯಲ್ಲಿದೆ. ಆದರೆ, ಶಾರುಖ್ ಇಲ್ಲದ ಕಾರಣ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಎರಡು ಬಿಗ್ ಬಜೆಟ್ ಚಿತ್ರಗಳೇ. ಈ ಸಿನಿಮಾಗಳ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ಆದರೆ, ಆರ್ಯನ್ ಖಾನ್ ಮಾಡಿಕೊಂಡ ಎಡವಟ್ಟಿನಿಂದ ಈ ಸಿನಿಮಾಗಳು ನಷ್ಟ ಅನುಭವಿಸುವಂತಾಗಿದೆ.
ಆರ್ಯನ್ ಖಾನ್ ಅಕ್ಟೋಬರ್ 2ರ ರಾತ್ರಿ ಬಂಧನಕ್ಕೆ ಒಳಗಾದರು. ಅಂದಿನಿಂದ ಇಂದಿನವರೆಗೆ ಶಾರುಖ್ ಖಾನ್ಗೆ ಯಾವುದರ ಮೇಲೂ ಗಮನಹರಿಸೋಕೆ ಸಾಧ್ಯವಾಗುತ್ತಿಲ್ಲ. ಮಗನನ್ನು ಹೊರಗೆ ಕರೆದುಕೊಂಡು ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಶಾರುಖ್ ಖಾನ್. ಅಕ್ಟೋಬರ್ 3ರಂದು ಶಾರುಖ್ ಖಾನ್ ಸ್ಪೇನ್ಗೆ ತೆರಳಬೇಕಿತ್ತು. ‘ಪಠಾಣ್’ ಸಿನಿಮಾದ ವಿಶೇಷ ಸಾಂಗ್ ಶೂಟಿಂಗ್ನಲ್ಲಿ ದೀಪಿಕಾ ಜತೆ ಅವರು ಹೆಜ್ಜೆ ಹಾಕಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದರಿಂದ ಇಡೀ ಸಿನಿಮಾ ತಂಡ ವಿದೇಶಕ್ಕೆ ತೆರಳೋದು ಕ್ಯಾನ್ಸಲ್ ಆಗಿತ್ತು. ಇದರಿಂದ ಚಿತ್ರತಂಡಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಶಾರುಖ್ ಖಾನ್ ಅವರು ಅಟ್ಲೀ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಪ್ರಗತಿಯಲ್ಲಿದೆ. ಆದರೆ, ಶಾರುಖ್ ಇಲ್ಲದ ಕಾರಣ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಇದರಿಂದಲೂ ಸಿನಿಮಾ ತಂಡಕ್ಕೆ ನಷ್ಟ ಉಂಟಾಗುತ್ತಿದೆ.
ಅಟ್ಲೀ ಸಿನಿಮಾ ಈಗ 20 ದಿನದ ಶೂಟಿಂಗ್ ಪೂರ್ಣಗೊಳಿಸಿದೆ. ಇನ್ನೂ ಬರೋಬ್ಬರಿ 180 ದಿನಗಳ ಶೂಟಿಂಗ್ ಬಾಕಿ ಇದೆ. ಈಗ ಶಾರುಖ್ ಸೆಟ್ಗೆ ಬರದೇ ಇರುವುದರಿಂದ ಸಿನಿಮಾ ಶೂಟಿಂಗ್ ಕೂಡ ವಿಳಂಬವಾಗುತ್ತಿದೆ.
ಶಾರುಖ್ ಖಾನ್ ಮಗ ಆರ್ಯನ್ ಅವರು ಇನ್ನೂ ಎಷ್ಟು ದಿನ ಎನ್ಸಿಬಿ ಕಸ್ಟಡಿಯಲ್ಲಿ ಇರಬೇಕು ಎಂಬುದು ಅನಿಶ್ಚಿತವಾಗಿದೆ. ಆರ್ಯನ್ ಹಿಂದಿರುಗುವವರೆಗೆ ಶಾರುಖ್ ಸೆಟ್ಗೆ ಮರಳುವುದಿಲ್ಲ.
ನಾನಾ ರೀತಿಯ ಬಟ್ಟೆ ಧರಿಸುತ್ತಿರುವ ಸ್ಟಾರ್ ಕಿಡ್ ಆರ್ಯನ್ಗೆ ಹೇಗಿದೆ ಉಪಚಾರ? ಇಲ್ಲಿದೆ ಮಾಹಿತಿ