ಎನ್​ಸಿಬಿ ವಶದಲ್ಲಿರುವಾಗಲೇ ನಾನಾ ರೀತಿಯ ಬಟ್ಟೆ ಧರಿಸುತ್ತಿರುವ ಸ್ಟಾರ್​ ಕಿಡ್​​ ಆರ್ಯನ್​ಗೆ ಹೇಗಿದೆ ಉಪಚಾರ? ಇಲ್ಲಿದೆ ಮಾಹಿತಿ

ಸೆಲೆಬ್ರಿಟಿಗಳು ಬಂಧನಕ್ಕೆ ಒಳಗಾಗಿದ್ದಾರೆ ಎಂದರೆ ಅವರಿಗೆ ರಾಜ ಮರ್ಯಾದೆ ನೀಡಲಾಗುತ್ತದೆ. ಅವರನ್ನು ಅದ್ಭುತವಾಗಿ ನೋಡಿಕೊಳ್ಳಲಾಗುತ್ತದೆ ಎಂಬುದು ಎಲ್ಲರ ನಂಬಿಕೆ. ಅನೇಕ ಬಾರಿ ಇದು ಸಾಬೀತಾಗಿದೆ ಕೂಡ.

ಎನ್​ಸಿಬಿ ವಶದಲ್ಲಿರುವಾಗಲೇ ನಾನಾ ರೀತಿಯ ಬಟ್ಟೆ ಧರಿಸುತ್ತಿರುವ ಸ್ಟಾರ್​ ಕಿಡ್​​ ಆರ್ಯನ್​ಗೆ ಹೇಗಿದೆ ಉಪಚಾರ? ಇಲ್ಲಿದೆ ಮಾಹಿತಿ
ಆರ್ಯನ್ ಖಾನ್

ಆರ್ಯನ್​ ಖಾನ್​ ಅವರು ಕಳೆದ ಕೆಲ ದಿನಗಳಿಂದ ಎನ್​ಸಿಬಿ ಕಸ್ಟಡಿಯಲ್ಲಿದ್ದಾರೆ. ಅವರನ್ನು ನಿರಂತರವಾಗಿ ವಿಚಾರಣೆ ಮಾಡಲಾಗುತ್ತಿದೆ. ಅಕ್ಟೋಬರ್​ 7ರವರೆಗೆ ಅವರು ಎನ್​ಸಿಬಿ ವಶದಲ್ಲಿಯೇ ಇರುವುದು ಅನಿವಾರ್ಯ ಆಗಿದೆ. ಇನ್ನು, ಶಾರುಖ್​ ಖಾನ್​ ಅವರು ಆರ್ಯನ್​ಗೆ ಜಾಮೀನು ಕೊಡಿಸೋಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಶಾರುಖ್​ ಮಗನಿಗೆ ಜೈಲಿನಲ್ಲಿ ಯಾವ ರೀತಿಯಲ್ಲಿ ಉಪಚಾರ ನೀಡಲಾಗುತ್ತಿದೆ ಎನ್ನುವ ಅನುಮಾನ ಅನೇಕರಲ್ಲಿದೆ.

ಸೆಲೆಬ್ರಿಟಿಗಳು ಬಂಧನಕ್ಕೆ ಒಳಗಾಗಿದ್ದಾರೆ ಎಂದರೆ ಅವರಿಗೆ ರಾಜ ಮರ್ಯಾದೆ ನೀಡಲಾಗುತ್ತದೆ. ಅವರನ್ನು ಅದ್ಭುತವಾಗಿ ನೋಡಿಕೊಳ್ಳಲಾಗುತ್ತದೆ ಎಂಬುದು ಎಲ್ಲರ ನಂಬಿಕೆ. ಅನೇಕ ಬಾರಿ ಇದು ಸಾಬೀತಾಗಿದೆ ಕೂಡ. ಈಗ ಆರ್ಯನ್​ ಖಾನ್​ ವಿಚಾರದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆರ್ಯನ್​ ಖಾನ್​ ಎನ್​ಸಿಬಿ ವಶದಲ್ಲಿದ್ದಾಗಲೇ ಬೇರೆಬೇರೆ ರೀತಿಯ ಬಟ್ಟೆ ಧರಿಸುತ್ತಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ, ಅವರನ್ನು ಸಾಮಾನ್ಯರಂತೆ ಟ್ರೀಟ್​ ಮಾಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

ಎನ್​ಸಿಬಿ ಆವರಣದಲ್ಲಿರುವ ಮೆಸ್​ನಿಂದಲೇ ಆರ್ಯನ್​ ಖಾನ್​ಗೆ ಆಹಾರ ಬರುತ್ತಿದೆ. ಆಹಾರದ ವಿಚಾರದಲ್ಲಿ ವಿನಾಯಿತಿ ನೀಡುವಂತೆ ಅವರು ಕೋರಿದ್ದರು. ಆದರೆ, ಕೋರ್ಟ್​ ಇದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ, ಅವರು ಸಾಮಾನ್ಯ ಆಹಾರ ತಿನ್ನುವುದು ಅನಿವಾರ್ಯ ಆಗಿದೆ. ಇನ್ನು ಉಳಿದುಕೊಳ್ಳೋಕು ಸಾಮಾನ್ಯ ಕೊಠಡಿಯನ್ನೇ ನೀಡಲಾಗಿದೆ. ಸ್ಟಾರ್​ ಕಿಡ್​ ಆದರೂ ಆರ್ಯನ್​ಗೆ ಯಾವುದೇ ವಿಐಪಿ ಟ್ರೀಟ್​ಮೆಂಟ್​ ಇಲ್ಲ.

ಆರ್ಯನ್​ ಖಾನ್​ ವಿಚಾರದಲ್ಲಿ ನಟಿ ರಮ್ಯಾ ಅನುಮಾನ ಹೊರಹಾಕಿದ್ದಾರೆ. ‘ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಆದಾಗ್ಯೂ ಅವರನ್ನು ವಶಕ್ಕೆ ಪಡೆದಿದೆ.  ನ್ಯಾಯಾಲಯದಲ್ಲಿ ವಾಟ್ಸಾಪ್ ಚಾಟ್‌ಗಳನ್ನು ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ. ಇನ್ನು, ವಿಚಾರಣೆ ವೇಳೆ ಆರ್ಯನ್​ ಅವರು ಹೇಳಿದ್ದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎನ್​ಸಿಬಿ ಹೇಳುತ್ತಿದೆ. ಇದರ ಜತೆಗೆ ಹೊರಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದೂ ಹೇಳುತ್ತಿದೆ. ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಸಾಕಷ್ಟು ಬಾರಿ ಅತ್ತರು, ಆರ್ಯನ್​ ಖಾನ್​ ಅತ್ತಿದ್ದಾರೆ ಎಂಬಿತ್ಯಾದಿ ಗಾಸಿಪ್​ ಹರಡೋದು ಅವರಿಗೆ ಇಷ್ಟ ಎನಿಸುತ್ತದೆ. ಪ್ರಶ್ನೆ ಮಾಡುವಾಗ ಅಲ್ಲಿ ಯಾರೂ ಇರುವುದಿಲ್ಲ. ಆದಾಗ್ಯೂ ಇದು ಮಾಧ್ಯಮಗಳಿಗೆ ಹೇಗೆ ಸಿಕ್ಕಿತು?’ ಎಂದು ರಮ್ಯಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: We Stand with Aryan Khan: ಆರ್ಯನ್ ಖಾನ್​, ಶಾರುಖ್ ಖಾನ್​ಗೆ ಟ್ವಿಟರ್ ಮೂಲಕ ಬೆಂಬಲ ಸೂಚಿಸಿದ ಫ್ಯಾನ್ಸ್!

ಆರ್ಯನ್​ ಖಾನ್​ ಬಂಧನದ ವಿಚಾರದಲ್ಲಿ ಅನುಮಾನ ಹೊರಹಾಕಿದ ನಟಿ ರಮ್ಯಾ

Read Full Article

Click on your DTH Provider to Add TV9 Kannada