‘ಶಾರುಖ್​ ನೀಡ್ತಿದ್ದ ಪಾರ್ಟಿಯಲ್ಲಿ ಸ್ಟಾರ್​ ನಟರ ಪತ್ನಿಯರು ಶೌಚಾಲಯಕ್ಕೆ ತೆರಳಿ ಡ್ರಗ್ಸ್​ ಸೇವಿಸಿದ್ರು’; ಶೆರ್ಲಿನ್​ ಚೋಪ್ರಾ

ಶೆರ್ಲಿನ್​ ಚೋಪ್ರಾ ನೀಡಿದ್ದ ಸಂದರ್ಶನದ ವಿಡಿಯೋ ವೈರಲ್​ ಆಗುತ್ತಿದೆ. ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಪರಿಣಾಮವಾಗಿ ಬಾಲಿವುಡ್​ನ ಡ್ರಗ್ಸ್​ ಪುರಾಣ ಮತ್ತೆ ಮುನ್ನೆಲೆಗೆ ಬಂದಿದೆ.

‘ಶಾರುಖ್​ ನೀಡ್ತಿದ್ದ ಪಾರ್ಟಿಯಲ್ಲಿ ಸ್ಟಾರ್​ ನಟರ ಪತ್ನಿಯರು ಶೌಚಾಲಯಕ್ಕೆ ತೆರಳಿ ಡ್ರಗ್ಸ್​ ಸೇವಿಸಿದ್ರು’; ಶೆರ್ಲಿನ್​ ಚೋಪ್ರಾ
ಶೆರ್ಲಿನ್ ಚೋಪ್ರಾ, ಶಾರುಖ್ ಖಾನ್
Follow us
TV9 Web
| Updated By: Digi Tech Desk

Updated on:Oct 07, 2021 | 11:09 AM

ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಮಾದಕ ವಸ್ತು ಸೇವನೆಯ ಆರೋಪ ಆಗಾಗ ಕೇಳಿಬರುತ್ತಲೇ ಇರುತ್ತದೆ. ಶಾಕಿಂಗ್​ ವಿಚಾರ ಏನೆಂದರೆ, ಸ್ಟಾರ್​ ನಟರ ಪತ್ನಿಯರು ಕೂಡ ಡ್ರಗ್ಸ್​ ಸೇವಿಸುತ್ತಾರೆ ಎಂದು ನಟಿ ಶೆರ್ಲಿನ್​ ಚೋಪ್ರಾ ಬಹಳ ಹಿಂದೆಯೇ ಹೇಳಿದ್ದರು. ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದ ಬಳಿಕ ಬಾಲಿವುಡ್​ನಲ್ಲಿರುವ ಡ್ರಗ್ಸ್​ ಜಾಲದ ಬಗ್ಗೆ ತನಿಖೆ ಆರಂಭ ಆಯಿತು. ಆಗ ನೀಡಿದ ಸಂದರ್ಶನದಲ್ಲಿ ಶೆರ್ಲಿನ್​ ಚೋಪ್ರಾ ಅವರು ಕೆಲವು ಶಾಕಿಂಗ್​ ಮಾಹಿತಿ ಹಂಚಿಕೊಂಡಿದ್ದರು. ಶಾರುಖ್​ ಖಾನ್​ ನೀಡಿದ್ದ ಪಾರ್ಟಿಯಲ್ಲಿ ನಶೆ ತುಂಬಿ ತುಳುಕುತ್ತಿತ್ತು ಎಂಬ ವಿಚಾರವನ್ನು ಅವರು ಬಾಯಿ ಬಿಟ್ಟಿದ್ದರು.

ಆ ಸಂದರ್ಶನದ ವಿಡಿಯೋವನ್ನು ಶೆರ್ಲಿನ್​ ಚೋಪ್ರಾ ಈಗ ಮತ್ತೆ ಶೇರ್​ ಮಾಡಿಕೊಂಡಿದ್ದಾರೆ. ‘ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡುತ್ತ ನನಗೆ ಸುಸ್ತಾಯಿತು. ಹಾಗಾಗಿ ಶೌಚಾಲಯಕ್ಕೆ ತೆರಳಿದೆ. ಬಾಗಿಲು ತೆರೆದು ನೋಡಿದಾಗ ನನಗೆ ಶಾಕ್​ ಆಯಿತು. ನಾನೇನಾದರೂ ತಪ್ಪಾದ ಜಾಗಕ್ಕೆ ಬಂದುಬಿಟ್ನಾ ಎಂದು ಅನುಮಾನ ಬಂತು. ಹಾಗೇನೂ ಇಲ್ಲ, ಅದು ಸರಿಯಾದ ಜಾಗವೇ ಆಗಿತ್ತು. ಅಲ್ಲಿ ಸ್ಟಾರ್​ ನಟರ ಹೆಂಡತಿಯರು ಕನ್ನಡಿ ಮುಂದೆ ನಿಂತುಕೊಂಡು ಕೊಕೇನ್​ ಸೇವಿಸುತ್ತಿದ್ದರು’ ಎಂದು ಶೆರ್ಲಿನ್​ ಆ ಸಂದರ್ಶನದಲ್ಲಿ ಹೇಳಿದ್ದರು.

‘ಅಂಥ ಒಂದು ದೃಶ್ಯ ನೋಡಿದಾಗ ನನಗೆ ಶಾಕ್​ ಆಯಿತು. ಆದರೆ ಅವರ ಕಡೆಗೆ ಸುಮ್ಮನೆ ಸ್ಮೈಲ್​ ಮಾಡಿ ಅದನ್ನೆಲ್ಲ ನಿರ್ಲಕ್ಷ ಮಾಡಿದೆ. ಅವರ ಪಾಡಿಗೆ ಅವರು ಎಂಜಾಯ್​ ಮಾಡುತ್ತಿದ್ದರು. ಶಾರುಖ್​ ಖಾನ್​ ಮತ್ತು ಅವರ ಸ್ನೇಹಿತರನ್ನು ಭೇಟಿ ಮಾಡಿದ ಬಳಿಕ ನಾನು ಅಲ್ಲಿಂದ ಜಾಗ ಖಾಲಿ ಮಾಡಿದೆ. ಬಾಲಿವುಡ್​ನಲ್ಲಿ ಎಂಥ ಪಾರ್ಟಿಗಳು ಆಗುತ್ತವೆ ಅಂತ ಅಂದು ನನಗೆ ಅರ್ಥವಾಯಿತು’ ಎಂದಿದ್ದರು ಶೆರ್ಲಿನ್​.

ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅದರ ಪರಿಣಾಮವಾಗಿ ಬಾಲಿವುಡ್​ನ ಡ್ರಗ್ಸ್​ ಪುರಾಣ ಮತ್ತೆ ಮುನ್ನೆಲೆಗೆ ಬಂದಿದೆ. ಆರ್ಯನ್​ಗೆ ಜಾಮೀನು ಕೊಡಿಸಲು ಶಾರುಖ್​ ಖಾನ್​ ಹರಸಾಹಸ ಮಾಡುತ್ತಿದ್ದಾರೆ. ಮಗನ ಎಡವಟ್ಟಿನಿಂದಾಗಿ ಶಾರುಖ್​ ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿದೆ. ಅವರು ನಟಿಸುತ್ತಿದ್ದ ಎಲ್ಲ ಚಿತ್ರಗಳ ಶೂಟಿಂಗ್​ ನಿಂತಿದೆ.

ಇದನ್ನೂ ಓದಿ:

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

Published On - 8:17 am, Thu, 7 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ