We Stand with Aryan Khan: ಆರ್ಯನ್ ಖಾನ್​, ಶಾರುಖ್ ಖಾನ್​ಗೆ ಟ್ವಿಟರ್ ಮೂಲಕ ಬೆಂಬಲ ಸೂಚಿಸಿದ ಫ್ಯಾನ್ಸ್!

TV9 Digital Desk

| Edited By: ganapathi bhat

Updated on:Oct 05, 2021 | 11:00 PM

ಶಾರುಖ್ ಖಾನ್ ಅಭಿಮಾನಿಗಳು ಶಾರುಖ್ ಪರವಾಗಿ ಟ್ವಿಟರ್​ನಲ್ಲಿ ಸದ್ದು ಮಾಡುತ್ತಿದ್ದಾರೆ. #WeStandWithAryanKhan ಎಂಬ ಹ್ಯಾಷ್ ಟ್ಯಾಗ್ ಮೂಲಕ ಖಾನ್ ಕುಟುಂಬಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

We Stand with Aryan Khan: ಆರ್ಯನ್ ಖಾನ್​, ಶಾರುಖ್ ಖಾನ್​ಗೆ ಟ್ವಿಟರ್ ಮೂಲಕ ಬೆಂಬಲ ಸೂಚಿಸಿದ ಫ್ಯಾನ್ಸ್!
ಆರ್ಯನ್ ಖಾನ್

ಶಾರುಖ್ ಖಾನ್ ಮಗ ಆರ್ಯನ್ ಖಾನ್ ಮುಂಬೈ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಭಾರೀ ಸುದ್ದಿಯಲ್ಲಿ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರ್ಯನ್ ಬಗ್ಗೆ ಪರ- ವಿರೋಧ ಚರ್ಚೆಗಳು ಜೋರಾಗಿದೆ. ಕೆಲವರು ಈ ಪ್ರಕರಣದಲ್ಲಿ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರನ್ನು ಕೂಡ ಟ್ರಾಲ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. ಇದೇ ವೇಳೆ, ಶಾರುಖ್ ಖಾನ್ ಅಭಿಮಾನಿಗಳು ಶಾರುಖ್ ಪರವಾಗಿ ಟ್ವಿಟರ್​ನಲ್ಲಿ ಸದ್ದು ಮಾಡುತ್ತಿದ್ದಾರೆ. #WeStandWithAryanKhan ಎಂಬ ಹ್ಯಾಷ್ ಟ್ಯಾಗ್ ಮೂಲಕ ಖಾನ್ ಕುಟುಂಬಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

ಶಾರುಖ್ ಖಾನ್ ಅಭಿಮಾನಿಗಳು ಈ ಪ್ರಕರಣದಲ್ಲಿ ಶಾರುಖ್ ಗೌರವಕ್ಕೆ ಧಕ್ಕೆ ಆಗುವುದನ್ನು ವಿರೋಧಿಸುತ್ತಿದ್ದಾರೆ. ಹಲವರು, ಆರ್ಯನ್ ವಿರುದ್ಧ ಯಾವುದೇ ಸಾಕ್ಷಿ ಇಲ್ಲದಿದ್ದರೂ ಅವರನ್ನು ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಟ್ವಿಟರ್ ಮೂಲಕ ಕೇಳುತ್ತಿದ್ದಾರೆ. ಇದೇ ಹ್ಯಾಷ್ ಟ್ಯಾಗ್ ಬಳಸಿ ತುಂಬಾ ಮಂದಿ ಆರ್ಯನ್ ಖಾನ್ ಫೋಟೊ ಹಂಚಿಕೊಂಡಿದ್ದಾರೆ. ಎನ್​ಸಿಬಿ ಅಧಿಕಾರಿಗಳು ಆರ್ಯನ್ ಖಾನ್​ನ್ನು ಕರೆದುಕೊಂಡು ಹೋಗುತ್ತಿರುವ ಫೋಟೊ ಹಂಚಿಕೊಂಡು, ಅದರಲ್ಲಿ ಆರ್ಯನ್ ಖಾನ್ ನಗುತ್ತಿದ್ದಾನೆ. ಆತನ ಬಗ್ಗೆ ಟ್ರಾಲ್ ಮತ್ತು ದ್ವೇಷ ಹಂಚುತ್ತಿರುವವರಿಗೆ ಅಷ್ಟೇ ಸಾಕು ಎಂದು ಬರೆದುಕೊಂಡಿದ್ದಾರೆ.

ಜೀವನ ತುಂಬಾ ಆಸಕ್ತಿಕರವಾದದ್ದು. ಎಲ್ಲಕ್ಕೂ ಕೊನೆಯಲ್ಲಿ ಕೆಲವು ಕಷ್ಟಕರ ಪರಿಸ್ಥಿತಿಗಳು ನಿಮ್ಮ ಬದುಕಿನ ದೊಡ್ಡ ಶಕ್ತಿಯಾಗಿ ಇರುತ್ತದೆ ಎಂದು ಒಬ್ಬ ಶಾರುಖ್ ಅಭಿಮಾನಿ ಟ್ವೀಟ್ ಮಾಡಿದ್ದಾರೆ. ಆರ್ಯನ್ ಖಾನ್ 13 ವರ್ಷದವನಿದ್ದಾಗ ಆತ ಮಹಾರಾಷ್ಟ್ರ ಟೆಕ್ವಾಂಡೊ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿದ್ದ ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆರ್ಯನ್ ಏನು ಬೇಕಾದರೂ ಮಾಡಬಹುದು ಎಂದಿದ್ದ ಶಾರುಖ್ ಖಾನ್; ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಇದನ್ನೂ ಓದಿ: ‘ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಖಾನ್​ಗೆ ಶಿಕ್ಷೆ ಆಗಲ್ಲ’; ಭವಿಷ್ಯ ನುಡಿದ ಕಮಾಲ್ ಆರ್​. ಖಾನ್​

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada