‘ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಖಾನ್​ಗೆ ಶಿಕ್ಷೆ ಆಗಲ್ಲ’; ಭವಿಷ್ಯ ನುಡಿದ ಕಮಾಲ್ ಆರ್​. ಖಾನ್​

TV9 Digital Desk

| Edited By: ಮದನ್​ ಕುಮಾರ್​

Updated on: Oct 05, 2021 | 9:38 AM

ಬಾಲಿವುಡ್​ ಮಂದಿಗೆ ಸಂಬಂಧಿಸಿದಂತೆ ಏನೇ ಘಟನೆ ನಡೆದರೂ ಅದಕ್ಕೆ ಕಮಾಲ್​ ಆರ್​. ಖಾನ್​ ಪ್ರತಿಕ್ರಿಯೆ ನೀಡುತ್ತಾರೆ. ಈ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ. ಈಗ ಅವರು ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

‘ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಖಾನ್​ಗೆ ಶಿಕ್ಷೆ ಆಗಲ್ಲ’; ಭವಿಷ್ಯ ನುಡಿದ ಕಮಾಲ್ ಆರ್​. ಖಾನ್​
ಆರ್ಯನ್ ಖಾನ್, ಕಮಾಲ್ ಆರ್. ಖಾನ್
Follow us

ಡ್ರಗ್ಸ್​ ಪಾರ್ಟಿ ಮಾಡಿ ಸಿಕ್ಕಿ ಬಿದ್ದಿರುವ ಆರ್ಯನ್ ಖಾನ್​ ಅವರನ್ನು ಸದ್ಯ ಎನ್​ಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ. ಮಗನಿಗೆ ಜಾಮೀನು ಕೊಡಿಸಲು ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ಹರಸಾಹಸ ಮಾಡುತ್ತಿದ್ದಾರೆ. ಬಾಲಿವುಡ್​ನ ಹೈ-ಪ್ರೊಫೈಲ್​ ಕೇಸ್​ಗಳನ್ನು ನಿಭಾಯಿಸಿ ಅನುಭವ ಹೊಂದಿರುವ ಖ್ಯಾತ ಕ್ರಿಮಿನಲ್​ ಲಾಯರ್​ ಸತೀಶ್​ ಮಾನೆಶಿಂಧೆ ಅವರ ಕೈಗೆ ಆರ್ಯನ್​ ಕೇಸ್​ ನೀಡಲಾಗಿದೆ. ಆರ್ಯನ್​ ವಿರುದ್ಧ ಹಲವು ಸಾಕ್ಷಿಗಳು ಸಿಕ್ಕಿವೆ ಎಂದು ಎನ್​ಸಿಬಿ ಮೂಲಗಳು ಹೇಳುತ್ತಿವೆ. ಇನ್ನೂ ವಿಚಾರಣೆ ನಡೆಯುತ್ತಿದೆ. ಅಷ್ಟರಲ್ಲಾಗಲೇ ಈ ಕೇಸ್​ನ ಅಂತಿಮ ಘಟ್ಟದ ಬಗ್ಗೆ ನಟ, ನಿರ್ದೇಶಕ, ವಿಮರ್ಶಕ ಕಮಾಲ್​ ಆರ್​. ಖಾನ್​ ಭವಿಷ್ಯ ನಡಿದಿದ್ದಾರೆ.

ಬಾಲಿವುಡ್​ ಮಂದಿಗೆ ಸಂಬಂಧಿಸಿದಂತೆ ಏನೇ ಘಟನೆ ನಡೆದರೂ ಅದಕ್ಕೆ ಕಮಾಲ್​ ಆರ್​. ಖಾನ್​ ಪ್ರತಿಕ್ರಿಯೆ ನೀಡುತ್ತಾರೆ. ಈ ಮೂಲಕ ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಇದರಿಂದ ಪದೇಪದೇ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಈಗ ಅವರು ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸ್ಟಾರ್​ ಪುತ್ರ ಇಂಥ ಎಡವಟ್ಟಿನ ಕೆಲಸ ಮಾಡಿ ಸಿಕ್ಕಿ ಬಿದ್ದಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ. ಅಲ್ಲದೇ, ಈ ಕೇಸ್​ನಲ್ಲಿ ಆರ್ಯನ್​ಗೆ ಶಿಕ್ಷೆ ಆಗುವುದಿಲ್ಲ ಎಂದು ಕಮಾಲ್​ ಆರ್​. ಖಾನ್​ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ.

‘ಈ ಹಿಂದೆ ಬಾಲಿವುಡ್​ ನಟ ಫರ್ದೀನ್​ ಖಾನ್​ ಕೂಡ ಡ್ರಗ್ಸ್​ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದರು. ಆದರೆ ಅವರಿಗೆ ಶಿಕ್ಷೆ ಆಗಲಿಲ್ಲ. ಒಂದಷ್ಟು ದಿನ ಜೈಲಿನಲ್ಲಿ ಇದ್ದರು. ಪತ್ತೆಯಾದ ಡ್ರಗ್ಸ್​ನ ಪ್ರಮಾಣ ಆ ವೇಳೆಗಾಗಲೇ ಕಡಿಮೆ ಆಗಿಬಿಟ್ಟಿತ್ತು. ಅಷ್ಟು ಪ್ರಮಾಣದ ಮಾದಕ ವಸ್ತುವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಶಿಕ್ಷೆ ನೀಡುವುದು ಕೂಡ ಕಷ್ಟವಾಯಿತು. ಪ್ರಕರಣ ಕೋರ್ಟ್​ಗೆ ಹೋದಾಗ ನ್ಯಾಯಾಧೀಶರ ಮುಂದೆ ಫರ್ದೀನ್​ ಖಾನ್​ ಕ್ಷಮೆ ಕೇಳಿದರು. ಇನ್ಮುಂದೆ ಇಂಥ ಕೆಲಸ ಮಾಡುವುದಿಲ್ಲ ಅಂತ ಹೇಳಿ ಬಚಾವ್​ ಆದರು. ಕೇಸ್​ ಮುಕ್ತಾಯ ಆಯಿತು. ಆರ್ಯನ್​ ಖಾನ್​ ವಿಚಾರದಲ್ಲೂ ಹೀಗೆಯೇ ಆಗಲಿದೆ’ ಎಂದು ಕಮಾಲ್​ ಆರ್. ಖಾನ್​ ಹೇಳಿದ್ದಾರೆ.

ಇದನ್ನೂ ಓದಿ:

ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದಾಗ ಸೆಲ್ಫಿ ತೆಗೆದುಕೊಂಡು ಅಭಿಮಾನ ಮೆರೆದ ಈ ವ್ಯಕ್ತಿ ಯಾರು?

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

ತಾಜಾ ಸುದ್ದಿ

Related Stories

Click on your DTH Provider to Add TV9 Kannada