ಕೆಬಿಸಿ 13: ಕೌನ್ ಬನೇಗಾ ಕರೋಡ್ಪತಿಯ 13ನೇ ಸೀಸನ್ ಅದ್ಭುತವಾಗಿ ಮೂಡಿಬರುತ್ತಿದ್ದು, ವೀಕ್ಷಕರಿಗೆ ಒಳ್ಳೆಯ ಮನೋರಂಜನೆಯನ್ನು ನೀಡುತ್ತಿದೆ. ಕಾರ್ಯಕ್ರಮದಲ್ಲಿ ಹಲವು ಅಪೂರ್ವ ಸನ್ನಿವೇಶಗಳು ನಡೆಯುತ್ತಿದ್ದು, ಅದನ್ನು ಶೋನ ನಿರೂಪಕ ಅಮಿತಾಭ್ ಬಚ್ಚನ್ ನಿರ್ವಹಿಸುವ ರೀತಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ನಡೆದ ಸಂಚಿಕೆಯೊಂದರಲ್ಲಿ ಸ್ಪರ್ಧಿಯೊಬ್ಬರು ಅಮಿತಾಭ್ ಸೊಸೆ, ಬಾಲಿವುಡ್ನಲ್ಲಿ ಮಿಂಚಿ ವಿಶ್ವಾದ್ಯಂತ ಕೀರ್ತಿ ಸಂಪಾದಿಸಿದ ಐಶ್ವರ್ಯಾ ರೈ ಅವರನ್ನು ಕಂಡರೆ ತನಗೆ ಹೊಟ್ಟೆಕಿಚ್ಚಾಗುತ್ತದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆಗ ಅಮಿತಾಭ್ ರಿಯಾಕ್ಷನ್ ಏನಿತ್ತು? ಸ್ಪರ್ಧಿ ಹಾಗೆ ಹೇಳಿದ್ದೇಕೆ? ಮುಂದೆ ಓದಿ.
ದಿವ್ಯಾ ಸಹಾಯ್ ಎಂಬ ಸ್ಪರ್ಧಿಯೋರ್ವರು ಕೆಬಿಸಿಯ ಹಾಟ್ಸೀಟ್ನಲ್ಲಿ ಕುಳಿತಿದ್ದರು. ಆಗ ಅಮಿತಾಭ್ ನಿಮಗೆ ಸಿನಿಮಾಗಳೆಂದರೆ ಇಷ್ಟವೇ ಎಂದು ಪ್ರಶ್ನಿಸಿದ್ದಾರೆ. ಆಗ ದಿವ್ಯಾ ಅವರು, ತನಗೆ ಚಲನಚಿತ್ರಗಳೆಂದರೆ ಪ್ರಾಣವೆಂದೂ, ಅವುಗಳ ಬಗ್ಗೆ ಬಹಳ ಆಸಕ್ತಿ ಇದೆಯೆಂದೂ ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಯಾವ ಯೋಚನೆಯನ್ನೂ ಮಾಡದೇ, ಅಮಿತಾಭ್ ಎದುರೇ, ‘‘ನನಗೆ ನಿಮ್ಮ ಸೊಸೆಯನ್ನು ಕಂಡರೆ ಬಹಳ ಹೊಟ್ಟೆಕಿಚ್ಚಾಗುತ್ತದೆ’’ ಎಂದರು. ಆಗ ಅಮಿತಾಭ್ ನಗುತ್ತಾ, ಏಕೆ ಎಂದು ಪ್ರಶ್ನಿಸಿದರು. ಆಗ ಮಾತನಾಡಿದ ದಿವ್ಯಾ ‘‘ನೂರು ವರ್ಷಗಳಲ್ಲಿ ಅಂತಹ ಒಂದು ಅದ್ಭುತ ಸುಂದರಿಯೊಬ್ಬರು ಜನಿಸುತ್ತಾರಂತೆ’’ ಎಂದರು. ಆ ಮೂಲಕ ಅಂತಹ ಅದ್ಭುತ ಸುಂದರಿ ಐಶ್ವರ್ಯಾ ಎಂದು ತಿಳಿಸಿದರು. ಇದಕ್ಕೆ ಅಮಿತಾಭ್, ಸಂತಸದಿಂದ ಧನ್ಯವಾದ ತಿಳಿಸದರು.
ಆದರೆ ದಿವ್ಯಾ ಸಹಾಯ್ ಅವರ ಮಾತುಕತೆ ಇಷ್ಟಕ್ಕೇ ನಿಲ್ಲಲಿಲ್ಲ. ಅವರು ಮತ್ತೊಂದು ಸಮಸ್ಯೆಯನ್ನೂ ಅಮಿತಾಭ್ ಮುಂದಿಟ್ಟರು. ತಾನು ಬಾಲಿವುಡ್ನ ಹಲವು ನಾಯಕಿಯರಿಗಿಂತ ಸುಂದರವಾಗಿದ್ದೇನೆ. ಆದರೆ ತನಗೆ ಯಾವುದೇ ಆಫರ್ ಬಂದಿಲ್ಲ ಎಂದರು. ಆಗ ನಗುತ್ತಾ ಉತ್ತರಿಸಿದ ಅಮಿತಾಭ್, ‘‘ಹಹ. ಬಹುಶಃ ಈ ಕಾರ್ಯಕ್ರಮ ನೋಡಿದ ನಂತರ ನಿಮಗೆ ಅವಕಾಶಗಳು ಅರಸಿಕೊಂಡು ಬರಬಹುದು’’ ಎಂದಾಗ, ದಿವ್ಯಾ ಸಂತಸದಿಂದ ನಕ್ಕರು. ಹೀಗೆ ಕೆಬಿಸಿ ಅಮಿತಾಭ್ರೊಂದಿಗಿನ ಅಪರೂಪದ ಸಂವಾದವೊಂದಕ್ಕೆ ಸಾಕ್ಷಿಯಾಯಿತು.
View this post on Instagram
ಸ್ಪರ್ಧಿಗಳು ಯಾವ ಅನಿಸಿಕೆ ವ್ಯಕ್ತಪಡಿಸಿದರೂ, ಅದನ್ನು ಚೆನ್ನಾಗಿ ನಿರ್ವಹಿಸುವ, ಅವರಿಗೆ ಸಮಾಧಾನ ಹೇಳುವ, ಎಲ್ಲರನ್ನೂ ನಗಿಸುವ ಅಮಿತಾಭ್ ಕಾರ್ಯಶೈಲಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಮಕ್ಕಳಿಂದ ಅನುಕಂಪ ಗಿಟ್ಟಿಸಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿ ಅರೆಸ್ಟ್, 5 ಮಕ್ಕಳು ಬಾಲಮಂದಿರಕ್ಕೆ ಶಿಫ್ಟ್
Facebook Outage: ಫೇಸ್ಬುಕ್ನ 6 ಗಂಟೆ ವ್ಯತ್ಯಯದಿಂದ ಝುಕರ್ಬರ್ಗ್ನ 44,713 ಕೋಟಿ ರೂಪಾಯಿ ಖಲ್ಲಾಸ್
ಶಾರುಖ್ ಪುತ್ರನಿಗೆ ಎನ್ಸಿಬಿ ಫುಲ್ ಗ್ರಿಲ್; ಆರ್ಯನ್ ಖಾನ್ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು