ರಾಜ್ಯಾದ್ಯಂತ ‘ಜೀ ಕನ್ನಡ ಕುಟುಂಬ’ದ ರಥ ಸಂಚಾರ; ವೀಕ್ಷಕರಿಗೆ ಮನರಂಜನೆಯ ಸಡಗರ
ಜೀ ಕುಟುಂಬ ಅವಾರ್ಡ್ಸ್ಗೆ Zee5 app ಮೂಲಕ ಡಿಜಿಟಲ್ ಮತದಾನಕ್ಕೆ ಉತ್ತೇಜನ ನೀಡಲು ಹೊರಟಿರುವ ಈ ರಥ ಸಂಚಾರಿಕ್ಕೆ ಸತ್ಯ, ನಾಗಿಣಿ, ಜೊತೆ ಜೊತೆಯಲಿ, ಪಾರು ಮುಂತಾದ ಸೀರಿಯಲ್ ಕಲಾವಿದರು ಚಾಲನೆ ನೀಡಿದರು. ಉದ್ಘಾಟನಾ ಭಾವುಟ ಹಾರಿಸಿ ರಥಗಳ ಸಂಚಾರಿಕ್ಕೆ ಆಲ್ ದಿ ಬೆಸ್ಟ್ ಎಂದರು.

ಜನಪ್ರಿಯ ಮನರಂಜನಾ ವಾಹಿನಿ ‘ಜೀ ಕನ್ನಡ’ ಯಶಸ್ವಿಯಾಗಿ 15 ವರ್ಷಗಳನ್ನ ಪೂರೈಸಿದೆ. ಹೊಸ ಹೊಸ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನ ಸೆಳೆದುಕೊಳ್ಳುತ್ತಿರೋ ‘ಜೀ ಕನ್ನಡ’ ಈಗ ‘ಕುಟುಂಬ ಅವಾರ್ಡ್ಸ್’ ಕಾರ್ಯಕ್ರಮಕ್ಕೆ ಸಜ್ಜಾಗ್ತಾ ಇದೆ. ಹಲವು ವಿಭಾಗದಲ್ಲಿ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಜೀ5 ಆ್ಯಪ್ ಮೂಲಕ ವೀಕ್ಷಕರು ವೋಟ್ ಮಾಡಬಹುದು. ಡಿಜಿಟಲ್ ವೋಟಿಂಗ್ಗೆ ಉತ್ತೇಜನ ನೀಡಲು ರಾಜ್ಯದ್ಯಂತ ‘ಜೀ ಕನ್ನಡ ಕುಟುಂಬ’ದ ರಥ ಸಂಚರಿಸಲಿದೆ.
ರಾಜಧಾನಿಯಿಂದ ಹಿಡಿದು ಪ್ರತಿ ಹಳ್ಳಿಯವರೆಗೆ ಎಲ್ಲ ಬಗೆಯ ವೀಕ್ಷಕರಿಗೂ ಮನರಂಜನೆ ನೀಡುತ್ತಿರುವ ‘ಜೀ ಕನ್ನಡ’ ವಾಹಿನಿ ತನ್ನ ಕಲಾವಿದರು ಮತ್ತು ತಂತ್ರಜ್ಞರ ಕೆಲಸಕ್ಕೆ ಮೊದಲಿಂದಲೂ ಮನ್ನಣೆ ನೀಡುತ್ತ ಬಂದಿದೆ. ‘ಜೀ ಕುಟುಂಬ ಅವಾರ್ಡ್ಸ್’ ಮೂಲಕ ಎಲ್ಲರ ಬೆನ್ನುತಟ್ಟುವ ಕೆಲಸ ಆಗುತ್ತಿದೆ. ಈ ಬಾರಿ ಕೂಡ ಅದ್ದೂರಿಯಾಗಿ ಈ ಸಮಾರಂಭ ನಡೆಯಲಿದೆ. ಅದರ ಮೊದಲ ಹಂತವಾಗಿ ಸೋಮವಾರ (ಅ.4) ಉದ್ಘಾಟನಾ ಭಾವುಟ ಹಾರಿಸಲಾಯ್ತು. ವಿಶೇಷವಾಗಿ ಅಲಂಕಾರಗೊಂಡಿರುವ ಹಲವು ವಾಹನಗಳು ರಾಜ್ಯಾದ್ಯಂತ ಸಂಚಾರ ಹೊರಟಿವೆ. ಕುಟುಂಬ ಅವಾರ್ಡ್ಗೆ ಜೀ5 ಮೂಲಕ ವೀಕ್ಷಕರು ವೋಟ್ ಮಾಡಬಹುದು. ತಮ್ಮ ನೆಚ್ಚಿನ ಹೀರೋ, ಹೀರೋಯಿನ್, ಟೆನ್ಸಿಷಿಯನ್ಗಳಿಗೆ ಮತ ಹಾಕುವ ಮೂಲಕ ಅವಾರ್ಡ್ ಕೊಡಿಸುವ ಅವಕಾಶ ವೀಕ್ಷಕರ ಪಾಲಿಗೆ ಒಲಿದು ಬಂದಿದೆ.
Zee5 app ಮೂಲಕ ಡಿಜಿಟಲ್ ಮತದಾನಕ್ಕೆ ಉತ್ತೇಜನ ನೀಡಲು ಹೊರಟಿರುವ ಈ ರಥ ಸಂಚಾರಿಕ್ಕೆ ಸತ್ಯ, ನಾಗಿಣಿ, ಜೊತೆ ಜೊತೆಯಲಿ, ಪಾರು ಮುಂತಾದ ಸೀರಿಯಲ್ ಕಲಾವಿದರು ಚಾಲನೆ ನೀಡಿದ್ರು. ಉದ್ಘಾಟನಾ ಭಾವುಟ ಹಾರಿಸಿ ರಥಗಳ ಸಂಚಾರಿಕ್ಕೆ ಆಲ್ ದಿ ಬೆಸ್ಟ್ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖ, ಜೀ ಕನ್ನಡ ವಾಹಿನಿ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಉಪಸ್ಥಿತರಿದ್ರು.
ಶೀಘ್ರದಲ್ಲೇ ‘ಜೀ ಕುಟುಂಬ ಅವಾರ್ಡ್ಸ್ 2021’ ಸಮಾರಂಭ:
‘ಕುಟುಂಬ ಅವಾರ್ಡ್ಸ್’ ಎಂದರೆ ಜೀ ಕನ್ನಡ ಪಾಲಿಗೆ ನಿಜವಾದ ಹಬ್ಬ. ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬದಲ್ಲಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರು ಭಾಗವಹಿಸುತ್ತಾರೆ. ಝಗಮಗಿಸುವಂತೆ ಸಿಂಗಾರಗೊಂಡ ಅದ್ದೂರಿ ವೇದಿಕೆಯಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತೆ. ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಿ, ಇಡೀ ಸಮಾರಂಭದ ರಂಗು ಹೆಚ್ಚಿಸಲಿದ್ದಾರೆ.
ಇದನ್ನೂ ಓದಿ:
‘ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಧಾರಾವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ; ಹೊಸ ಯುಗ ಶುರು
ನಿಜ ಜೀವನದ ‘ಸತ್ಯ’ ಪಾತ್ರಗಳ ಜೊತೆ ಮಹಿಳಾ ದಿನಾಚರಣೆ ಆಚರಿಸಿದ ಜೀ ಕನ್ನಡದ ‘ಸತ್ಯ’ ಗೌತಮಿ