ನಿಜ ಜೀವನದ ‘ಸತ್ಯ’ ಪಾತ್ರಗಳ ಜೊತೆ ಮಹಿಳಾ ದಿನಾಚರಣೆ ಆಚರಿಸಿದ ಜೀ ಕನ್ನಡದ ‘ಸತ್ಯ’ ಗೌತಮಿ
ಜೀ ಕನ್ನಡ ವಾಹಿನಿಯ ‘ಸತ್ಯ’ ಧಾರಾವಾಹಿ ನಟಿ ಗೌತಮಿ ಜಾಧವ್ ಅವರು ನಿಜ ಜೀವನದ ಸತ್ಯ ಪಾತ್ರಗಳನ್ನು ಭೇಟಿ ಮಾಡಿದ್ದಾರೆ. ಮಹಿಳಾ ದಿನಾಚರಣೆ ಪ್ರಯುಕ್ತ ವಿನೂತನ ಕಾರ್ಯಕ್ರಮ ನಡೆದಿದೆ.
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ವಿನೂತನ ಧಾರಾವಾಹಿಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ ಮನರಂಜನಾ ವಾಹಿನಿಯು ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (ಮಾ.8) ವಿನೂತನವಾಗಿ ಆಚರಿಸಿದೆ.
ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ‘ಸತ್ಯ’ ಧಾರಾವಾಹಿಯ ಸತ್ಯ ಪಾತ್ರವು ಎಲ್ಲ ದಿಟ್ಟ ಹೆಣ್ಣು ಮಗಳ ಪ್ರತಿನಿಧಿಯಂತೆ ಕಾಣಿಸಿಕೊಂಡಿದೆ. ನಿಜ ಜೀವನದ ಸತ್ಯನ ರೀತಿ ಇರುವ ಮಹಿಳೆಯರನ್ನು ವಿನೂತನ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಿದ್ದಾರೆ ನಟಿ ಗೌತಮಿ ಜಾಧವ್. ಮಾ.8ರ ಸಂಜೆ 5.30ಕ್ಕೆ ಧಾರಾವಾಹಿಯ ಸತ್ಯ ಪಾತ್ರಧಾರಿ ಗೌತಮಿ ಅವರು ನಿಜ ಜೀವನದ ಸತ್ಯರನ್ನು ಸಂದರ್ಶಿಸುವ ಅಪರೂಪದ ಕಾರ್ಯಕ್ರಮ ನಡೆಯಿತು.
ಸತ್ಯ ಧಾರಾವಾಹಿ ಪ್ರಾರಂಭವಾದ ದಿನದಿಂದಲೂ ಮಹಿಳೆಯರನ್ನು ಅಪಾರವಾಗಿ ಸೆಳೆದಿದೆ. ಸತ್ಯ ಪಾತ್ರವು ಎಲ್ಲ ಮಹಿಳೆಯರಿಗೂ ಸ್ಫೂರ್ತಿ ತುಂಬಿದೆ. ಈಗ ನಿಜ ಜೀವನದಲ್ಲಿ ಸತ್ಯ ರೀತಿ ಇರುವ ಮೈಸೂರಿನ ಆಟೋ ಚಾಲಕಿ ಸೌಮ್ಯಾ ರಾಣಿ, ಮಂಡ್ಯದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಕಾರ್ಯ ನಿರ್ವಹಿಸುವ ಸುಮಲತಾ, ಬೆಂಗಳೂರಿನ ಗೋ ಪಿಂಕ್ ಕ್ಲಬ್ನ ರೂಪಾ ಆಲಿಸಾ, ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಮಾಡುವ ಮೂಲಕ ಬದುಕು ಕಟ್ಟಿಕೊಂಡ ಉಮಾ ರೆಡ್ಡಿ ಅವರು ಸತ್ಯ ಧಾರಾವಾಹಿಯ ಪಾತ್ರಗಳಂತೆಯೇ ಬದುಕಿದವರು.
ಬದುಕಿನ ಸಂಕಷ್ಟಗಳನ್ನು ಎದುರಿಸಿ ದಿಟ್ಟವಾಗಿ ನಿಂತವರು. ಈ ಎಲ್ಲರೂ ಧಾರಾವಾಹಿ ಪಾತ್ರಕ್ಕೆ ಸ್ಫೂರ್ತಿಯಾದವರು. ಇವರೆಲ್ಲ ಒಟ್ಟಿಗೆ ಸೇರಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ‘ಸತ್ಯ’ ಕೂಡ ಒಂದು. ಇತ್ತೀಚೆಗೆ ಪ್ರಸಾರ ಆರಂಭಿಸಿದ ಈ ಸೀರಿಯಲ್ ಟಿಆರ್ಪಿಯಲ್ಲೂ ಸಖತ್ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ: Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ
ಗೀತಾ ಧಾರಾವಾಹಿಯ ವಿಲನ್ ಶರ್ಮಿತಾ ಗೌಡ ವಯಸ್ಸು ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ