ಶಾರುಖ್​ ಪುತ್ರನಿಗೆ ಎನ್​ಸಿಬಿ ಫುಲ್​ ಗ್ರಿಲ್​; ಆರ್ಯನ್​ ಖಾನ್​ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ವಿಚಾರಣೆ ವೇಳೆ ಎನ್​ಸಿಬಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಸಿಗುವ ಸಾಧ್ಯತೆ ಇದೆ. ಬಾಲಿವುಡ್​ನಲ್ಲಿ ಹರಡಿರುವ ಡ್ರಗ್ಸ್​ ಜಾಲವನ್ನು ಭೇದಿಸಲು ಆರ್ಯನ್ ನೀಡುವ ಮಾಹಿತಿ ಸಹಕಾರಿ ಆಗಲಿದೆ.

ಡ್ರಗ್​ ಕೇಸ್​ನಲ್ಲಿ ಸಿಲುಕಿರುವ ಆರ್ಯನ್​ ಖಾನ್​ ಅವರನ್ನು ಎನ್​ಸಿಬಿ ಅಧಿಕಾರಿಗಳು ಸೋಮವಾರ (ಅ.4) ಮುಂಬೈ ಕಿಲ್ಲಾ ಕೋರ್ಟ್​ ಎದುರು ಹಾಜರುಪಡಿಸಿದ್ದಾರೆ. ಈ ವೇಳೆ ಆರ್ಯನ್​ ಕಸ್ಟಡಿ ಅವಧಿಯನ್ನು ಅಕ್ಟೋಬರ್​ 13ರವರೆಗೆ ವಿಸ್ತರಿಸುವಂತೆ ಕೋರ್ಟ್​ ಮುಂದೆ ಎನ್​ಸಿಬಿ ಕೋರಿದೆ. ಆದರೆ, ಅಕ್ಟೋಬರ್​ 7ರವರೆಗೆ ಎನ್​ಸಿಬಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ. ಆರ್ಯನ್​ ಜತೆಗೆ ಉಳಿದ ಆರೋಪಿಗಳ ಎನ್​ಸಿಬಿ ಕಸ್ಟಡಿ ಅವಧಿ ಕೂಡ ವಿಸ್ತರಣೆ ಆಗಿದೆ. ಸದ್ಯ ವಿಚಾರಣೆ ತೀವ್ರಗೊಂಡಿದ್ದು, ಆರ್ಯನ್​ ಖಾನ್​ ಅವರಿಂದ ಎನ್​ಸಿಬಿ ಅಧಿಕಾರಿಗಳು ಸತ್ಯ ಬಾಯಿ ಬಿಡಿಸುತ್ತಿದ್ದಾರೆ. ಹಲವಾರು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗುತ್ತಿದೆ.

ಬಾಲಿವುಡ್​ನಲ್ಲಿ ಇನ್ನೂ ಯಾರೆಲ್ಲ ಡ್ರಗ್ಸ್ ಸೇವನೆ ಮಾಡ್ತಾರೆ? ಡ್ರಗ್ಸ್ ಜಾಲ ಹೇಗೆ ವ್ಯಾಪಿಸಿದೆ? ಐಷಾರಾಮಿ ಹಡಗಿಗೆ ಡ್ರಗ್ಸ್ ಎಲ್ಲಿಂದ ಬಂತು? ಹೈ-ಪ್ರೊಫೈಲ್​ ವ್ಯಕ್ತಿಗಳಿಗೆ ಡ್ರಗ್ಸ್ ಪೂರೈಕೆ ಮಾಡಿದವರು ಯಾರು? ಯಾವ ಯಾವ ಡ್ರಗ್ಸ್ ಪೆಡ್ಲರ್ ಇದರಲ್ಲಿ ಭಾಗಿಯಾಗಿದ್ದಾರೆ? ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಎನ್ ಸಿಬಿಯಿಂದ ವಿಚಾರಣೆ ನಡೆಯುತ್ತಿದೆ. ಆರೋಪಿಗಳಿಗೆ ಮತ್ತು ಪಾರ್ಟಿ ಆಯೋಜಕರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಇದನ್ನೂ ಓದಿ:

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದಾಗ ಸೆಲ್ಫಿ ತೆಗೆದುಕೊಂಡು ಅಭಿಮಾನ ಮೆರೆದ ಈ ವ್ಯಕ್ತಿ ಯಾರು?

Click on your DTH Provider to Add TV9 Kannada