‘ಕೋಟಿಗೊಬ್ಬ 3’ ಬಿಡುಗಡೆ ಟೈಮ್​ನಲ್ಲಿ ‘ಪಟಾಕಿ ಪೋರಿ’ ಆಶಿಕಾ ರಂಗನಾಥ್​ಗೆ ಸಂಭ್ರಮವೋ ಸಂಭ್ರಮ

‘ಕೋಟಿಗೊಬ್ಬ 3’ ಚಿತ್ರದ ‘ಪಟಾಕಿ ಪೋರಿಯೋ..’ ಹಾಡಿನಲ್ಲಿ ಆಶಿಕಾ ರಂಗನಾಥ್​ ಅವರು ಸುದೀಪ್​ ಜೊತೆ ಹೆಜ್ಜೆ ಹಾಕಿದ್ದಾರೆ. ಇದರ ಲಿರಿಕಲ್​ ವಿಡಿಯೋ ಹಿಟ್​ ಆಗಿದ್ದು, ವಿಡಿಯೋ ಸಾಂಗ್​ ಕೂಡ ಎಲ್ಲರಿಗೂ ಇಷ್ಟ ಆಗುತ್ತೆ ಎಂಬ ನಂಬಿಕೆಯಲ್ಲಿ ಅವರಿದ್ದಾರೆ.

ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿ ಆಶಿಕಾ ರಂಗನಾಥ್ ಕೈಯಲ್ಲಿ​ ಹಲವು ಸಿನಿಮಾಗಳಿವೆ. ಕಿಂಚಿತ್ತೂ ಬಿಡುವು ಇಲ್ಲದೇ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಮುರಳಿ ಜೊತೆ ನಟಿಸಿರುವ ‘ಮದಗಜ’ ಚಿತ್ರಕ್ಕೆ ಸದ್ಯ ಡಬ್ಬಿಂಗ್​ ಕೆಲಸ ನಡೆಯುತ್ತಿದೆ. ಈ ಸಿನಿಮಾದಲ್ಲಿ ಆಶಿಕಾ ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಬ್ಬಿಂಗ್ ಕೆಲಸದ​ ನಡುವೆಯೂ ಅವರು ಮಾತಿಗೆ ಸಿಕ್ಕಿದ್ದಾರೆ. ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಅವರೊಂದು ವಿಶೇಷ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಆ ಚಿತ್ರ ಅ.14ರಂದು ಬಿಡುಗಡೆ ಆಗುತ್ತಿರುವುದು ಕೂಡ ಅಭಿಮಾನಿಗಳ ಪಾಲಿನ ಖುಷಿಯ ಸಮಾಚಾರ.

‘ನನಗೆ ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಡ್ಯಾನ್ಸ್​ ಮಾಡುವ ಅವಕಾಶ ಅನಿರೀಕ್ಷಿತವಾಗಿ ಸಿಕ್ಕಿತು. ಸುದೀಪ್​ ಅವರ ಜೊತೆ ಸ್ಪೆಷಲ್​ ಸಾಂಗ್​ ಮಾಡಬೇಕು ಎಂದಾಗ ತುಂಬ ಎಕ್ಸೈಟ್​ ಆದೆ. ಸಿನಿಮಾ ರಿಲೀಸ್​ಗೂ ಮುನ್ನವೇ ‘ಪಟಾಕಿ ಪೋರಿಯೋ..’ ಲಿರಿಕಲ್​ ವಿಡಿಯೋ ಹಿಟ್​ ಆಗಿದೆ. ವಿಡಿಯೋ ಸಾಂಗ್​ ಕೂಡ ಎಲ್ಲರಿಗೂ ಇಷ್ಟ ಆಗುತ್ತೆ ಎನ್ನುವ ಭರವಸೆ ಇದೆ’ ಎಂದಿದ್ದಾರೆ ಆಶಿಕಾ.

ಇದನ್ನೂ ಓದಿ:

ನೀವಂದುಕೊಂಡಂತೆ ಇಲ್ಲ ಆಶಿಕಾ ರಂಗನಾಥ್​; ಬರ್ತ್​ಡೇ ದಿನವೇ ಬಯಲಾಯ್ತು ಇನ್ನೊಂದು ಮುಖ

Ashika Ranganath: ಕನ್ನಡದ ಜನಪ್ರಿಯ ನಟಿ ಆಶಿಕಾ ರಂಗನಾಥ್​ ಫೊಟೊ ಗ್ಯಾಲರಿ ಇಲ್ಲಿದೆ

Click on your DTH Provider to Add TV9 Kannada