ಮನಸ್ಸು ಮತ್ತು ಆಲೋಚನೆಗಳ ಮೇಲೆ ಹಿಡಿತ ಸಾಧಿಸಿದರೆ ವಿನಾಕಾರಣ ಉಂಟಾಗುವ ಭೀತಿ, ಆತಂಕ ದೂರವಾಗುತ್ತವೆ: ಡಾ ಸೌಜನ್ಯ ವಶಿಷ್ಠ

ಮನಸ್ಸು ಒಂದು ವಾಹನದ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ನಾವು ಅದರ ಚಾಲಕರು. ನಾವು ಚಲಾಯಿಸುವಂತೆ ಅದು ಸಾಗಬೇಕೆ ಹೊರತು ಅದರ ಬೆನ್ನಟ್ಟುವುದು ನಮ್ಮಿಂದಾಗಬಾರದು.

ವಿಶ್ವದಲ್ಲಿ ಅತಿ ವೇಗವಾಗಿ ಚಲಿಸೋದು ಮನಸ್ಸು ಅಂತ ಹೇಳುತ್ತಾರೆ. ನಾವು ಕೂತ ಜಾಗದಲ್ಲಿ ಅದನ್ನು ಹರಿಬಿಟ್ಟರೆ ಸಾಕು ಅದು ಕ್ಷಣಾರ್ಧದಲ್ಲಿ ಅಮೆರಿಕ ತಲುಪುತ್ತದೆ, ಚಂದ್ರಲೋಕಕ್ಕೆ ಹೋಗುತ್ತದೆ, ಏನೆಲ್ಲ ಯೋಚನೆ ಮಾಡುತ್ತದೆ. ಹದ್ದುಬಸ್ತಿನಲ್ಲಿಡದಿದ್ದರೆ ಲಂಗು ಲಗಾಮಿಲ್ಲದ ಮನಸ್ಸು ನಕಾರಾತ್ಮಕ ಯೋಚನೆಗಳಿಂದ ನಮ್ಮಲ್ಲಿ ಭೀತಿ ಮತ್ತು ಆತಂಕವನ್ನು ಉಂಟು ಮಾಡುತ್ತದೆ ಎಂದು ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ಹತೋಟಿಯಲ್ಲಿರದ ಮನಸ್ಸು ನಕಾರಾತ್ಮಕವಾಗಿ ಯೋಚಿಸಲಾರಂಭಿಸಿ ನಮ್ಮ ಬದುಕನ್ನು ನರಕಮಯ ಮಾಡುತ್ತದೆ. A Sound mind in a sound body ಅಂತ ಹೇಳೋದು ಸತ್ಯ.

ನಮ್ಮ ದೇಹದ ಪ್ರತಿಯೊಂದು ಅಂಗಾಂಗಕ್ಕೆ ಅದರದ್ದೇ ಆದ ಕೆಲಸವಿರುವ ಹಾಗೆ ಮೆದುಳಿನ ಕೆಲಸ ಆಲೋಚನೆ ಮಾಡುವುದು. ನಮ್ಮಲ್ಲಿ ನೆಗೆಟಿವ್ ಇಲ್ಲವೇ ಕೆಟ್ಟ ಯೋಚನೆಗಳು ಮತ್ತು ಪಾಸಿಟಿವ್ ಆಲೋಚನೆಗಳು ಹುಟ್ಟಿಕೊಳ್ಳುವುದಕ್ಕೆ ಮನಸ್ಸೇ ಕಾರಣ. ಒಳ್ಳೆ ಆಲೋಚನೆಗಳು ನಮ್ಮಲ್ಲಿ ಸಂತೋಷದ ತರಂಗಗಳನ್ನು ಹುಟ್ಟಿಸುತ್ತದೆ.

ಇದು ಮನಸನ್ನು ಪ್ರಫುಲ್ಲಗೊಳಿಸುವ ಹಾಗೆ ದೇಹವೂ ಹಗುರವಾದಂಥ ಭಾವನೆಯನ್ನು ಮೂಡಿಸುತ್ತದೆ. ನಮ್ಮ ದೇಹವನ್ನು ಅರೋಗ್ಯವಾಗಿಡಲು ಪಾಸಿಟಿವ್ ಆಲೋಚನೆಗಳು ಮಹತ್ತರ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಡಾ ಸೌಜನ್ಯ ಹೇಳುತ್ತಾರೆ.

ಮನಸ್ಸು ಒಂದು ವಾಹನದ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ನಾವು ಅದರ ಚಾಲಕರು. ನಾವು ಚಲಾಯಿಸುವಂತೆ ಅದು ಸಾಗಬೇಕೆ ಹೊರತು ಅದರ ಬೆನ್ನಟ್ಟುವುದು ನಮ್ಮಿಂದಾಗಬಾರದು. ಹಾಗಂತ ಮನಸನ್ನು ಯಾವತ್ತೂ ಖಾಲಿ ಬಿಡಬಾರದು ಅಂತ ಸೌಜನ್ಯ ಹೇಳುತ್ತಾರೆ.

ಯಾಕೆಂದರೆ, an empty mind is devil’s workshop ಅಂತ ಇಂಗ್ಲಿಷ್ ನಲ್ಲಿ ಒಂದು ಗಾದೆಯಿದೆ. ಹಾಗಾಗಿ, ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು ಅದರಲ್ಲಿ ಪಾಸಿಟಿವ್ ಅಂಶಗಳನ್ನು ತುಂಬಬೇಕು ಎಂದು ಅವರು ಹೇಳುತ್ತಾರೆ.

ನಮ್ಮ ಮನಸನ್ನು ಮಗುವಿನ ಹಾಗೆ ನೋಡಿಕೊಳ್ಳಬೇಕು ಮತ್ತು ಅದರೊಂದಿಗೆ ನಿರಂತರವಾಗಿ ಮಾತಾಡಿಕೊಂಡಿರಬೇಕು. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಧ್ಯಾನ ಮಾಡುವುದು ಒಳಿತು ಅಂತ ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ:  Viral Video: ಸ್ವತಃ ತಾನೇ ಬಾಳೆಹಣ್ಣಿನ ಖಾದ್ಯ ತಯಾರಿಸಿ ರುಚಿ ಸವಿದ ಶ್ವಾನ; ವಿಡಿಯೋ ವೈರಲ್

Click on your DTH Provider to Add TV9 Kannada