ಆರು ಗಂಟೆಗಳ ಫೇಸ್​ಬುಕ್​ ವ್ಯತ್ಯಯಕ್ಕೆ ಝಕರ್​ಬರ್ಗ್​ ಕಳೆದುಕೊಂಡಿದ್ದು ಸುಮಾರು ರೂ. 50,000 ಕೋಟಿ!

ಆರು ಗಂಟೆಗಳ ಅವಧಿಯಲ್ಲಿ ಫೇಸ್​ಬುಕ್​ ಸ್ಟಾಕ್​ಗಳು ಶೇಕಡಾ 5 ರಷ್ಟು ಕಡಿಮೆಯಾಗಿ ಅದರ ಸಂಸ್ಥಾಪಕ ಮಾರ್ಕ್ ಝಕರ್​ಬರ್ಗ್​ ಸುಮಾರು ರೂ. 50,000 ಕೋಟಿಗಳ ನಷ್ಟ ಅನುಭವಿಸಿದ್ದಾರೆ.

ಪ್ರಪಂಚವು ಫೇಸ್​ಬುಕ್, ವಾಟ್ಸ್ಯಾಪ್ ಮತ್ತು ಇನ್ಸ್ಟಾಗ್ರಾಮ್ ಸೇವೆಗಳನ್ನು ಎಷ್ಟು ನೆಚ್ಚಿಕೊಂಡಿದೆ ಅಂತ ಸೋಮವಾರ ಸ್ಪಷ್ಟವಾಯಿತು. ಫೇಸ್​ಬುಕ್​ ಅಧೀನದಲ್ಲಿರುವ ಸೇವೆಗಳು ಇದ್ದಕ್ಕಿದ್ದಂತೆ ಸೋಮವಾರ ರಾತ್ರಿ ಸ್ಥಗಿತಗೊಂಡು ವಿಶ್ವದಾದ್ಯಂತ 350 ಕೋಟಿ ಜನರಲ್ಲಿ ಹಿಂದೆಂದೂ ಕಾಣದ ಆತಂಕವನ್ನುಂಟು ಮಾಡಿದ್ದವು. 6 ಗಂಟೆಗಳ ಕಾಲ ಸೇವೆ ದೊರಕದೆ ಹೋಗಿ ಜನ ಹೌಹಾರಿದರು. ಆತಂಕ, ಚಡಪಡಿಕೆ ಮತ್ತು ಉದ್ವಿಗ್ನತೆ ಎಲ್ಲರ ಮುಖದಲ್ಲಿ ಕಾಣಿಸುತಿತ್ತು. ಸುಮಾರು 6 ಗಂಟೆಗಳ ನಂತರ ಈ ಪ್ಲಾಟ್​ಫಾರ್ಮ್​​​ಗಳು ಪುನಃ ಸಕ್ರಿಯಗೊಂಡ ನಂತರವೇ ಅವರು ನಿಟ್ಟುಸಿರಾದರು.

ಪ್ರಮಾದಕರ ಕಾನ್ಫ್ಯುಗರೇಷನ್ ಬದಲಾವಣೆಯಿದಾಗಿ ಸದರಿ ಅನಾಹುತ ಸಂಭವಿಸಿತು ಅಂತ ಫೇಸ್ಬುಕ್ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಹೇಳಿದರು. ಈ ಆರು ಗಂಟೆಗಳ ಅವಧಿಯಲ್ಲಿ ಫೇಸ್​ಬುಕ್​ ಸ್ಟಾಕ್​ಗಳು ಶೇಕಡಾ 5 ರಷ್ಟು ಕಡಿಮೆಯಾಗಿ ಅದರ ಸಂಸ್ಥಾಪಕ ಮಾರ್ಕ್ ಝಕರ್​ಬರ್ಗ್​ ಸುಮಾರು ರೂ. 50,000 ಕೋಟಿಗಳ ನಷ್ಟ ಅನುಭವಿಸಿದ್ದಾರೆ.

ಫೇಸ್​ಬುಕ್​ ಅಸ್ತಿತ್ವಕ್ಕೆ ಬಂದ ನಂತರ ಅದು ಒದಗಿಸುವ ಸೇವೆಗಳಲ್ಲಿ ಅತಿ ದೀರ್ಘಕಾಲದ ವ್ಯತ್ಯಯ ಇದಾಗಿದೆ. ಇಂಟರ್ನೆಟ್ ನಿಂದ ಫೇಸ್​ಬುಕ್​ ಸೇವೆಗಳು ನಾಪತ್ತೆಯಾಗುತ್ತಿದ್ದಂತೆಯೇ ನೂರಾರು ಕತೆಗಳು ಹುಟ್ಟಿಕೊಂಡವು. ಒಂದು ಕತೆಯ ಸಾರಾಂಶದ ಪ್ರಕಾರದ ಭಾರಿ ಪ್ರಮಾಣ ಹ್ಯಾಕ್ ನಿಂದಾಗಿ ವ್ಯತ್ಯಯ ಸಂಭವಿಸಿತು.

ಅದರೆ ಕೆಲವು ಗಂಟೆಗಳ ನಂತರ ಫೇಸ್​ಬುಕ್​ ಅಧಿಕಾರಿಗಳು ಹ್ಯಾಕ್ ಆಗುವ ಸಾಧ್ಯತೆಗಳೇ ಇಲ್ಲ ಎಂದು ಬ್ಲಾಗ್​ನಲ್ಲಿ ಬರೆದುಕೊಂಡರು. ವೇದಿಕೆಯ ರೌಟರ್​​ಗಳಲ್ಲಿ ಭಾರಿ ಪ್ರಮಾಣದ ತಾಂತ್ರಿಕ ತೊಂದೆರಯಿಂದಾಗಿ ವ್ಯತ್ಯಯ ಉಂಟಾಯಿತು ಅಂತ ಅಧಿಕಾರಿಗಳು ಹೇಳಿದರು. ಪ್ರಮಾದಕರ ಕಾನ್ಫ್ಯುಗರೇಷನ್ ಅನ್ನು ಸಹ ಅಧಿಕಾರಿಗಳು ದೂಷಿಸಿದ್ದಾರೆ.

ಇದನ್ನೂ ಓದಿ:  Video: ಪ್ರತಿಭಟನಾನಿರತ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್​; ಪ್ರಧಾನಿ ಮೋದಿ ವಿರುದ್ಧ ಟೀಕೆ

Click on your DTH Provider to Add TV9 Kannada