Video: ಪ್ರತಿಭಟನಾನಿರತ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್; ಪ್ರಧಾನಿ ಮೋದಿ ವಿರುದ್ಧ ಟೀಕೆ
Lakhimpur Kheri Violence: ಘಟನೆ ನಡೆದಾಗ ನಾನು ಆ ಸ್ಥಳದಲ್ಲಿ ಇರಲಿಲ್ಲ ಎಂದು ಆಶೀಶ್ ಮಿಶ್ರಾ ಹೇಳಿದ್ದಾರೆ. ಆದರೆ ನಾವು ಕಾರಿನಲ್ಲಿ ಆಶೀಶ್ ಮಿಶ್ರಾರನ್ನು ನೋಡಿದ್ದೇವೆ ಎಂದು ರೈತರು ಹೇಳುತ್ತಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತರ ಮೇಲೆ ಎರಡು ವಾಹನಗಳು ಹರಿದು ಇಬ್ಬರು ಮೃತಪಟ್ಟಿದ್ದು, ಅದಾದ ಬಳಿಕ ದೊಡ್ಡ ಹಿಂಸಾಚಾರವೇ ನಡೆದಿದೆ. ಅಲ್ಲೀಗ ಒಟ್ಟು ನಾಲ್ವರು ಸತ್ತಿದ್ದಾರೆ. ಸದ್ಯ ಲಖಿಂಪುರ ಖೇರಿಯಲ್ಲಿ ಸೆಕ್ಷನ್ 144 (Section 144) ಹೇರಲಾಗಿದ್ದು, ಯಾವುದೇ ರಾಜಕೀಯ ಲೀಡರ್ಗಳೂ ಅಲ್ಲಿಗೆ ಹೋಗುವಂತಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಇಂದು ಕಾಂಗ್ರೆಸ್ ಒಂದು ಟ್ವೀಟ್ ಮಾಡಿದ್ದು, ರೈತರ ಮೇಲೆ ವಾಹನ ನಡೆದ ವಿಡಿಯೋವನ್ನು ಪೋಸ್ಟ್ ಮಾಡಿದೆ. ಹಾಗೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದ ಮೌನದಿಂದಾಗಿ ಬೇರೆಯವರೆಲ್ಲ ಹೀಗೆ ರೈತರ ಮೇಲೆ ದಾಳಿ ನಡೆಸುವಂತಾಗಿದೆ ಎಂದು ಕ್ಯಾಪ್ಷನ್ ಕೂಡ ಬರೆಯಲಾಗಿದೆ.
ವಿಡಿಯೋ ಭಯ ಹುಟ್ಟಿಸುವಂತೆ ಇದೆ. ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರತ್ತ ಒಂದು ಜೀಪು ಮತ್ತು ಒಂದು ಕಾರು ವೇಗವಾಗಿ ನುಗ್ಗಿ ಬಂದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಇದು ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶೀಶ್ ಮಿಶ್ರಾ ಕಾರು ಎಂದೂ ಹೇಳಲಾಗಿದ್ದು, ಈಗಾಗಲೇ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ವಾಹನಗಳು ರೈತರತ್ತ ಹರಿದ ಬೆನ್ನಲ್ಲೇ ಆಶೀಶ್ ಮಿಶ್ರಾ ಬೆಂಗಾವಲು ಪಡೆಯ ಮೇಲೆ ರೈತರು ಮುಗಿಬಿದ್ದಿದ್ದರು.
TW: Extremely disturbing visuals from #LakhimpurKheri
The silence from the Modi govt makes them complicit. pic.twitter.com/IpbKUDm8hJ
— Congress (@INCIndia) October 4, 2021
ಘಟನೆ ನಡೆದಾಗ ನಾನು ಆ ಸ್ಥಳದಲ್ಲಿ ಇರಲಿಲ್ಲ ಎಂದು ಆಶೀಶ್ ಮಿಶ್ರಾ ಹೇಳಿದ್ದಾರೆ. ಆದರೆ ನಾವು ಕಾರಿನಲ್ಲಿ ಆಶೀಶ್ ಮಿಶ್ರಾರನ್ನು ನೋಡಿದ್ದೇವೆ ಎಂದು ರೈತರು ಹೇಳುತ್ತಿದ್ದಾರೆ. ಇದೀಗ ಘಟನೆಯ ತನಿಖೆಯನ್ನು ಉತ್ತರಪ್ರದೇಶ ಹೈಕೋರ್ಟ್ ನ್ಯಾಯಾಧೀಶರೊಬ್ಬರು ನಡೆಸಲಿದ್ದಾರೆ. ಈ ಮಧ್ಯೆ ಮೃತ ರೈತರ ಕುಟುಂಬಕ್ಕೆ ಸರ್ಕಾರ ತಲಾ 45 ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದೆ. ಲಖಿಂಪುರ ಖೇರಿಯಲ್ಲೀಗ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಅಲ್ಲಿಗೆ ಭೇಟಿ ನೀಡಲು ಪ್ರಯತ್ನಿಸಿದ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಇತರರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದಾಗ ಸೆಲ್ಫಿ ತೆಗೆದುಕೊಂಡು ಅಭಿಮಾನ ಮೆರೆದ ಈ ವ್ಯಕ್ತಿ ಯಾರು?
Viral News: ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕನ ಕೈಯಿಂದ 1 ಲಕ್ಷ ರೂ. ಕಿತ್ತೆಸೆದ ಮಂಗ! ನೋಟುಗಳೆಲ್ಲಾ ರಸ್ತೆ ಪಾಲು
Published On - 9:19 am, Tue, 5 October 21