ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿದ್ದು ಗೊತ್ತಿರದ ಅನೇಕ ಭಕ್ತರು ನಿರಾಶರಾಗಿ ವಾಪಸ್ಸು ಹೋದರು

ಮಹಾಲಯ ಅಮವಾಸ್ಯೆ, ಮತ್ತು ನಾಡಹಬ್ಬದ ತಯಾರಿ ದೃಷ್ಟಿಯಿಂದ ಚಾಮುಂಡಿ ಬೆಟ್ಟಕ್ಕೆ ಮಂಗಳವಾರದಿಂದ ಗುರುವಾರದವರೆಗೆ ಅಂದರೆ ಅಕ್ಟೋಬರ್ 7 ರವರೆಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

TV9kannada Web Team

| Edited By: Arun Belly

Oct 05, 2021 | 8:00 PM

ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಹಾಡುವ ಸಮಯ ಸಮೀಪಿಸಿದೆ ಮಾರಾಯ್ರೇ. ಅಕ್ಟೋಬರ್ 7 ರಿಂದ 16 ರವರೆಗೆ ಕರ್ನಾಟಕದ ಸಾಂಸ್ಕೃತಿಕ ನಗರದಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವ ನಡೆಯಲಿದೆ. ಸಿದ್ಧತೆಗಳು ಭರದಿಂದ ಸಾಗಿದ್ದು ಮುಕ್ತಾಯ ಹಂತ ತಲುಪಿವೆ. ನಿಮಗೆ ಗೊತ್ತಿದೆ, ಈ ಬಾರಿಯ ದಸರಾ ಉತ್ಸವವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ನಾಡಿನ ಹಿರಿಯ ಮುತ್ಸದ್ದಿ ಎಸ್ ಎಮ್ ಕೃಷ್ಣ ಅವರು ನೆರವೇರಿಸಲಿದ್ದಾರೆ. ಕಳೆದ ವರ್ಷ ಕೊವಿಡ್ ಪಿಡುಗಿನಿಂದಾಗಿ ಉತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಈ ಬಾರಿ ಸಾಂಕ್ರಾಮಿಕದ ಭೀತಿಯ ಹೊರತಾಗಿಯೂ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ.

ಮಹಾಲಯ ಅಮವಾಸ್ಯೆ, ಮತ್ತು ನಾಡಹಬ್ಬದ ತಯಾರಿ ದೃಷ್ಟಿಯಿಂದ ಚಾಮುಂಡಿ ಬೆಟ್ಟಕ್ಕೆ ಮಂಗಳವಾರದಿಂದ ಗುರುವಾರದವರೆಗೆ ಅಂದರೆ ಅಕ್ಟೋಬರ್ 7 ರವರೆಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಬೆಟ್ಟದಲ್ಲಿರುವ ಚಾಮುಂಡಿ ದೇವಸ್ಥಾನಕ್ಕೆ ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಸರ್ಕಾರದ ನಿರ್ಧಾರದ ಬಗ್ಗೆ ಗೊತ್ತಿರದ ಎಷ್ಟೋ ಜನ ಭಕ್ತರು, ಮಂಗಳವಾರ ಚಾಮುಂಡಿ ತಾಯಿಯ ದರ್ಶನಕ್ಕೆ ಆಗಮಿಸಿದ್ದರು.

ಬೆಟ್ಟಕ್ಕೆ ಪ್ರವೇಶಿಸುವ ಭಾಗದಲ್ಲೇ ಬ್ಯಾರಿಕೇಡ್ ಗಳನ್ನು ಅಡ್ಡಲಾಗಿ ಇಟ್ಟು ಸ್ಥಳದಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಬಂದ ಭಕ್ತರನ್ನು ವಾಪಸ್ಸು ಕಳಿಸುತ್ತಿದ್ದಿದ್ದು ಸಾಮಾನ್ಯ ದೃಶ್ಯವಾಗಿತ್ತು. ದೂರದ ಊರಿಗಳಿಂದ ಬಂದ ಕೆಲವರು ಬೇಗ ಹೋಗಿ ಬಂದು ಬಿಡ್ತೀವಿ ಅಂತ ಪೊಲೀಸರೆದುರು ಅಂಗಲಾಚಿದರು. ಅದರೆ, ಆರಕ್ಷಕರು ಅದಕ್ಕೆ ಅನುಮತಿ ನೀಡಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಅನ್ನುವ ಹಾಗೆ ಅವರು ತಾವು ನಿಂತ ಸ್ಥಳದಿಂದಲೇ ಚಾಮುಂಡಿ ದೇವತೆಗೆ ಕೈ ಮುಗಿದು ವಾಪಸ್ಸು ಹೋದರು.

ಇದನ್ನೂ ಓದಿ:  Video: ಲಖನೌಗೆ ಪ್ರಧಾನಿ ಮೋದಿ ಭೇಟಿ ಸುದ್ದಿ ಕೇಳಿ ವಿಡಿಯೋ ಬಿಡುಗಡೆ ಮಾಡಿ ‘ನೀವಿದನ್ನು ನೋಡಿದ್ದೀರಾ‘? ಎಂದ ಪ್ರಿಯಾಂಕಾ ಗಾಂಧಿ ವಾದ್ರಾ

Follow us on

Click on your DTH Provider to Add TV9 Kannada