AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಲಖನೌಗೆ ಪ್ರಧಾನಿ ಮೋದಿ ಭೇಟಿ ಸುದ್ದಿ ಕೇಳಿ ವಿಡಿಯೋ ಬಿಡುಗಡೆ ಮಾಡಿ ‘ನೀವಿದನ್ನು ನೋಡಿದ್ದೀರಾ‘? ಎಂದ ಪ್ರಿಯಾಂಕಾ ಗಾಂಧಿ ವಾದ್ರಾ

ಅಫಘಾತಕ್ಕೆ ಕಾರಣನಾದವನನ್ನು ಯಾಕೆ ಬಂಧಿಸಿಲ್ಲ? ಅದರ ಬದಲು ಲಖಿಂಪುರ ಖೇರಿಗೆ ಭೇಟಿ ನೀಡಲು ಮುಂದಾದ ನಮ್ಮಂಥ ರಾಜಕೀಯ ನಾಯಕರನ್ನೇಕೆ ಬಂಧಿಸಲಾಗುತ್ತಿದೆ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

Video: ಲಖನೌಗೆ ಪ್ರಧಾನಿ ಮೋದಿ ಭೇಟಿ ಸುದ್ದಿ ಕೇಳಿ ವಿಡಿಯೋ ಬಿಡುಗಡೆ ಮಾಡಿ ‘ನೀವಿದನ್ನು ನೋಡಿದ್ದೀರಾ‘? ಎಂದ ಪ್ರಿಯಾಂಕಾ ಗಾಂಧಿ ವಾದ್ರಾ
ವಿಡಿಯೋ ಶೇರ್​ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ
TV9 Web
| Updated By: Lakshmi Hegde|

Updated on:Oct 05, 2021 | 12:43 PM

Share

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ವಿವಿಧ ನಗರಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ಉತ್ತರಪ್ರದೇಶದ ಲಖನೌಗೆ ಭೇಟಿ ನೀಡಲಿದ್ದಾರೆ. ಇದರ ಬೆನ್ನಲ್ಲೇ ಕಳೆದ 28 ಗಂಟೆಗಳಿಂದ ಗೃಹ ಬಂಧನದಲ್ಲಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಒಂದು ವಿಡಿಯೋ ಮಾಡಿ, ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಅದು ಲಖಿಂಪುರ ಖೇರಿ (lakhimpur Kheri Violence)ಯಲ್ಲಿ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಆಗಿದ್ದು, ಇಂದು ಕಾಂಗ್ರೆಸ್​ ತನ್ನ ಟ್ವಿಟರ್​ನಲ್ಲೂ ಅದನ್ನು ಶೇರ್​ ಮಾಡಿಕೊಂಡಿದೆ. ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನಗಳು ಹರಿದ ಬೆನ್ನಲ್ಲೇ ಅಲ್ಲಿ ದೊಡ್ಡಮಟ್ಟದ ಹಿಂಸಾಚಾರ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಮುಂದಾಗಿದ್ದ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ನಿನ್ನೆ ಅರ್ಧಕ್ಕೆ ತಡೆದು, ಗೃಹಬಂಧನದಲ್ಲಿ ಇರಿಸಲಾಗಿದೆ. ಇಂದು ಮೋದಿಯವರ ಭೇಟಿಯ ವಿಷಯ ತಿಳಿಯುತ್ತಿದ್ದಂತೆ ಅವರು, ತಮ್ಮದೇ ಒಂದು ವಿಡಿಯೋ ಮಾಡಿದ್ದಾರೆ. ಆ ವಿಡಿಯೋದಲ್ಲಿ, ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರಿಗೆ ಎರಡು ವಾಹನಗಳು ಡಿಕ್ಕಿ ಹೊಡೆದ ವಿಡಿಯೋವನ್ನು ತೋರಿಸಿದ್ದಾರೆ. 

‘ಇವತ್ತು ನೀವು ಲಖನೌಗೆ ಬರುತ್ತೀರಿ ಎಂದು ಕೇಳಲ್ಪಟ್ಟೆ. ಇಲ್ಲಿಗೆ ಬರುವುದಕ್ಕೂ ಮೊದಲು ಒಂದು ಪ್ರಶ್ನೆ, ನೀವು ಈ ವಿಡಿಯೋವನ್ನು ನೋಡಿದ್ದೀರಾ’ ಎಂದು ತಮ್ಮ ಮೊಬೈಲ್​​ನಲ್ಲಿಯೇ ಅಪಘಾತದ ದೃಶ್ಯವನ್ನು ಪ್ರಿಯಾಂಕಾ ಗಾಂಧಿ ತೋರಿಸಿದ್ದಾರೆ. ‘ಹೀಗೆ ಅಫಘಾತಕ್ಕೆ ಕಾರಣನಾದವನನ್ನು ಯಾಕೆ ಬಂಧಿಸಿಲ್ಲ? ಅದರ ಬದಲು ಲಖಿಂಪುರ ಖೇರಿಗೆ ಭೇಟಿ ನೀಡಲು ಮುಂದಾದ ನಮ್ಮಂಥ ರಾಜಕೀಯ ನಾಯಕರನ್ನೇಕೆ ಬಂಧಿಸಲಾಗುತ್ತಿದೆ, ಎಫ್​ಐಆರ್​ ಇಲ್ಲದಿದ್ದರೂ ಹೀಗೆ ಕಸ್ಟಡಿಯಲ್ಲಿ ಇಟ್ಟಿರುವುದೇಕೆ?, ವಾಹನ ಹರಿಸಿದವನನ್ನು ಇನ್ನೂ ಯಾಕೆ ಬಂಧಿಸಿಲ್ಲ ಎಂಬುದು ನನಗೆ ಗೊತ್ತಾಗಬೇಕು’ ಎಂದೂ ಪ್ರಿಯಾಂಕಾ ಪ್ರಶ್ನಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಅಷ್ಟೇ ಅಲ್ಲ, ರೈತರ ಮೇಲೆ ಕಾರು ಹರಿಸಿದ್ದು ಕೇಂದ್ರ ಸಚಿವ ಅಜಯ್ ಮಿಶ್ರಾ  ಪುತ್ರ ಆಶೀಶ್​ ಮಿಶ್ರಾ ಎಂದು ಹೇಳಲಾಗುತ್ತಿದೆ. ಆದರೂ ಅವರನ್ನೇಕೆ ಸಚಿವ ಸ್ಥಾನದಿಂದ ಕೆಳಗೆ ಇಳಿಸಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.  ನೀವು ಆಜಾದಿ ಕಾ ಮಹೋತ್ಸವದ ವೇದಿಕೆಯ ಮೇಲೆ ಕುಳಿತುಕೊಳ್ಳುವಾಗಲೆಲ್ಲ, ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ರೈತರಿಂದಲೇ ಎಂಬುದನ್ನು ನೆನಪಿಸಿಕೊಳ್ಳಿ. ಇಂದು ರೈತರ ಮಕ್ಕಳೇ ನಮ್ಮ ದೇಶದ ಗಡಿ ಕಾಯುತ್ತಿದ್ದಾರೆ ಎಂಬುದೂ ನಿಮಗೆ ಗೊತ್ತಿರಲಿ. ನಮ್ಮ ರೈತರು ಹಲವು ತಿಂಗಳುಗಳಿಂದಲೂ ಸಂಕಷ್ಟಕ್ಕೆ ಈಡಾಗಿದ್ದಾರೆ. ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರ ನೋವನ್ನು ನೀವು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಇನ್ನು ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಉತ್ತರಪ್ರದೇಶ ಸರ್ಕಾರ ತಲಾ 45 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಹಾಗೇ, ಹೈಕೋರ್ಟ್​ ನಿವೃತ್ತ ನ್ಯಾಯಾಧೀಶರೊಬ್ಬರು ಪ್ರಕರಣದ ತನಿಖೆ ನಡೆಸಲಿದ್ದಾರೆ. ಮೃತರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನೂ ನೀಡಲಾಗಿದೆ. ಈ ಮಧ್ಯೆ ಕಾಂಗ್ರೆಸ್​ ಸೇರಿ ಹಲವು ಪಕ್ಷಗಳು ಉತ್ತರಪ್ರದೇಶ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳ ವಿರುದ್ಧ ತಿರುಗಿಬಿದ್ದಿವೆ. ಅದರಲ್ಲೂ ಇಂದು ಪ್ರಧಾನಿ ನರೇಂದ್ರ ಮೋದಿಯವರು ಲಖನೌನ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಆಯೋಜಿಸಲಾಗಿರುವ ‘ಆಜಾದಿ@75: ನವ ನಗರ ಭಾರತ: ನಗರ ಒಳಪ್ರದೇಶ ಪರಿವರ್ತನೆ’ ಎಂಬ ಸಮ್ಮೇಳನ ಮತ್ತು ಎಕ್ಸ್​​ಪೋವನ್ನು ಉದ್ಘಾಟಿಸಲು ಆಗಮಿಸಲಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ಈ ವಿಡಿಯೋ ಬಿಡುಗಡೆಯನ್ನೂ ಮಾಡಿದೆ.

ಇದನ್ನೂ ಓದಿ: ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ 10 ಅಂಶಗಳ ಕ್ರಿಯಾ ಯೋಜನೆ ಬಿಡುಗಡೆ ಮಾಡಿದ ಅರವಿಂದ ಕೇಜ್ರಿವಾಲ್

Bengaluru Fraud: ವಾಮಾಚಾರದ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ, ಮಹಿಳೆ ಸೇರಿ ಹಲವರ ಬಂಧನ

Published On - 12:06 pm, Tue, 5 October 21