AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ; ಇಂದು ಇನ್ನಿಬ್ಬರನ್ನು ಬಂಧಿಸಿದ ಎನ್​ಸಿಬಿ

ಮುಂಬೈ ಹಡಗಿನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು, ಹಲವು ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

ಮುಂಬೈ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ; ಇಂದು ಇನ್ನಿಬ್ಬರನ್ನು ಬಂಧಿಸಿದ ಎನ್​ಸಿಬಿ
ಇಂದು ಇನ್ನಿಬ್ಬರನ್ನು ಬಂಧಿಸಿದ ಎನ್​ಸಿಬಿ
TV9 Web
| Edited By: |

Updated on: Oct 05, 2021 | 11:17 AM

Share

ಮುಂಬೈ ಸಮುದ್ರ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್​ ಪಾರ್ಟಿಗೆ ಸಂಬಂಧಪಟ್ಟಂತೆ ಎನ್​ಸಿಬಿ (ಮಾದಕ ದ್ರವ್ಯ ನಿಯಂತ್ರಣ ಮಂಡಳಿ-NCB) ಇಂದು ಇನ್ನಿಬ್ಬರನ್ನು ಬಂಧಿಸಿದೆ.  ಶನಿವಾರ ಶಿಪ್​​ನಲ್ಲಿ ನಡೆದ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಎನ್​ಸಿಬಿ ಮೊನ್ನೆ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಸೇರಿ ಒಂಭತ್ತು ಜನರನ್ನು ಬಂಧಿಸಿತ್ತು. ಬಂಧಿತರನ್ನು ಹೊರತು ಪಡಿಸಿ ಇನ್ನೂ ಕೆಲವರನ್ನು ಕೇವಲ ವಿಚಾರಣೆಗಾಗಿ ಅಧಿಕಾರಿಗಳು ಎನ್​ಸಿಬಿ ಕಚೇರಿಗೆ ಕರೆತಂದಿತ್ತು. ಅವರಲ್ಲಿ ಒಂದಿಬ್ಬರು ನೀಡಿದ ಮಾಹಿತಿ ಅನ್ವಯ ಇಂದು ಇಬ್ಬರನ್ನು ಬಂಧಿಸಲಾಗಿದ್ದೆ. ಇದರೊಂದಿಗೆ ಬಂಧಿತರೊಂದಿಗೆ ಸಂಪರ್ಕದಲ್ಲಿರುವ ಡ್ರಗ್ಸ್​ ಪೆಡ್ಲರ್​ಗಳ ಜಾಲ ಪತ್ತೆ ಹಚ್ಚಲು ಎನ್​ಸಿಬಿ ಮುಂದಾಗಿದೆ.

ಮುಂಬೈ ಹಡಗಿನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು, ಹಲವು ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಎನ್​ಸಿಬಿ ನ್ಯಾಯಾಲಯದ ಎದುರು ಬಿಚ್ಚಿಟ್ಟಿದೆ. ಹಾಗೇ, ಶಾರುಖ್​ ಪುತ್ರ ಆರ್ಯನ್​ ಖಾನ್​ ಮತ್ತು ಇನ್ನಿಬ್ಬರ ವಾಟ್ಸ್​ಆ್ಯಪ್​ ಚಾಟ್​​ಗಳು ತುಂಬ ಶಾಕಿಂಗ್​ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಮಾದಕ ದ್ರವ್ಯ ಸಾಗಣೆಯೊಂದಿಗೆ ಸಂಪರ್ಕ ಹೊಂದಿರುವುದಕ್ಕೆ ಸಾಕ್ಷಿ ಒದಗಿಸುತ್ತವೆ ಎಂದೂ ಎನ್​ಸಿಬಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಸದ್ಯ ಆರ್ಯನ್​ ಖಾನ್​ ಅಕ್ಟೋಬರ್​ 7ರವರೆಗೂ ಎನ್​ಸಿಬಿ ಕಸ್ಟಡಿಯಲ್ಲೇ ಇರಬೇಕಿದೆ. ಅಂದ ಹಾಗೆ ಅವರು ವಿಚಾರಣೆ ವೇಳೆ, ತಾನು ನಾಲ್ಕು ವರ್ಷಗಳಿಂದಲೂ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದೇನೆ. ಇದು ನನ್ನ ಅಪ್ಪ-ಅಮ್ಮನಿಗೂ ಗೊತ್ತು ಎಂದು ಒಪ್ಪಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದವರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಅವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲು ಎನ್​ಸಿಬಿ ಸಿದ್ಧತೆ ಮಾಡಿಕೊಂಡಿದೆ. ಆದರೆ ಮುಂಬೈ ಐಷಾರಾಮಿ ಹಗಡಿನ ಪಾರ್ಟಿಗೆ ಸಂಬಂಧಪಟ್ಟಂತೆ ಎನ್​ಸಿಬಿ ಇನ್ನಷ್ಟು ಆಳವಾಗಿ ತನಿಖೆ ನಡೆಸುವುದಾಗಿ ಹೇಳಿಕೊಂಡಿದೆ.

ಇದನ್ನೂ ಓದಿ: ಶಾರುಖ್​ ಪುತ್ರನಿಗೆ ಎನ್​ಸಿಬಿ ಫುಲ್​ ಗ್ರಿಲ್​; ಆರ್ಯನ್​ ಖಾನ್​ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು

‘ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಖಾನ್​ಗೆ ಶಿಕ್ಷೆ ಆಗಲ್ಲ’; ಭವಿಷ್ಯ ನುಡಿದ ಕಮಾಲ್ ಆರ್​. ಖಾನ್​

Follow Us
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ