AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Fraud: ವಾಮಾಚಾರದ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ, ಮಹಿಳೆ ಸೇರಿ ಹಲವರ ಬಂಧನ

ಮೊದಲ ಕಂತಲ್ಲಿ 1.42 ಕೋಟಿ, ನಂತರ 30 ಲಕ್ಷ, ಬಳಿಕ 1.72 ಕೋಟಿ, ಮತ್ತೆ 1.90 ಕೋಟಿ, ಹೀಗೆ ಹಲವು ಕಂತುಗಳಲ್ಲಿ ಬರೋಬ್ಬರಿ 4.41 ಕೋಟಿ ಹಣ ಪಡೆದಿದ್ದಾಗಿ ಆರೋಪ ಕೇಳಿ ಬಂದಿದೆ. 2020 ಜುಲೈ ನಿಂದ 2021 ಮಾರ್ಚ್ ವರೆಗೆ ದೂರುದಾರ ಮಹಿಳೆ ಆರೋಪಿ ಮಹಿಳೆಗೆ ಹಣ ನೀಡಿದ್ದಾಗಿ ತಿಳಿಸಿದ್ದಾರೆ.

Bengaluru Fraud: ವಾಮಾಚಾರದ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ, ಮಹಿಳೆ ಸೇರಿ ಹಲವರ ಬಂಧನ
ಸಂಗ್ರಹ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Oct 05, 2021 | 12:04 PM

Share

ಬೆಂಗಳೂರು: ವಾಮಾಚಾರದ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಹಣ ಕಳೆದುಕೊಂಡ ಮಹಿಳೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬರೋಬ್ಬರಿ 4.41 ಕೋಟಿ ರೂ. ವಂಚಿಸಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ತ್ಯಾಗರಾಜನಗರ ನಿವಾಸಿಯಾಗಿರುವ ಮಹಿಳೆ ಹಾಗೂ ಆರೋಪಿತ ಮಹಿಳೆ ಇಬ್ಬರೂ ಪರಿಚಯಸ್ಥರು. ತನಗೆ ಕೌಟುಂಬಿಕ ಸಮಸ್ಯೆ ಮತ್ತು ಕಾನೂನು ವ್ಯಾಜ್ಯಗಳ ಬಗ್ಗೆ ದೂರುದಾರ ಮಹಿಳೆ ಆರೋಪಿತ ಮಹಿಳೆ ಬಳಿ ಹೇಳಿಕೊಂಡಾಗ ಆರೋಪಿತ ಮಹಿಳೆ ನಿಮಗೆ ಸಂಬಂಧಿಸಿದ ಕೆಲವು ವ್ಯಕ್ತಿಗಳು ನಿಮಗೆ ಮಾಟ ಮಂತ್ರ ಮಾಡಿಸಿದ್ದಾರೆ. ಇದರಿಂದ ಹೊರ ಬರಲು ನೀವು ಕೂಡ ಮಾಟ ಮಂತ್ರ ಮಾಡಬೇಕಿದೆ ಎಂದು ಸೂಚಿಸಿದ್ದಳು.

ಇದನ್ನ ಮಾಡದೇ ಹೋದರೆ ನಿಮಗೆ ತೊಂದರೆ ಆಗಬಹುದು. ಇಲ್ಲವೇ ರಕ್ತಕಾರಿ ಸಾಯಬಹುದು ಎಂದು ಭೀತಿ ಹುಟ್ಟಿಸಿದ್ದಳು. ಇದನ್ನ ಕೇಳಿ ವಾಮಾಚಾರ ಮಾಡಲು ದೂರುದಾರ ಮಹಿಳೆ ಒಪ್ಪಿಕೊಂಡಿದ್ದರು. ಬಳಿಕ ಭೂಷಣ್ ಎಂಬಾತ ಮಾಟ ಮಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನ ಮನೆಯ ಮೂಲೆಗಳಲ್ಲಿ ಇಟ್ಟು ಹೋಗಿದ್ದ. ಮಾಟ ಮಂತ್ರ ಮಾಡಿದ ನಂತರ ಆರೋಪಿತೆ ಹಣ ಕೇಳಿ ಪಡೆದಿದ್ದಳು. ಓರ್ವ ಮಹಿಳೆ ಸೇರಿ 9 ಜನರು ಕೋಟಿಗಟ್ಟಲೆ ಹಣ ಸುಲಿಗೆ ಮಾಡಿದ್ದರು.

ಮೊದಲ ಕಂತಲ್ಲಿ 1.42 ಕೋಟಿ, ನಂತರ 30 ಲಕ್ಷ, ಬಳಿಕ 1.72 ಕೋಟಿ, ಮತ್ತೆ 1.90 ಕೋಟಿ, ಹೀಗೆ ಹಲವು ಕಂತುಗಳಲ್ಲಿ ಬರೋಬ್ಬರಿ 4.41 ಕೋಟಿ ಹಣ ಪಡೆದಿದ್ದಾಗಿ ಆರೋಪ ಕೇಳಿ ಬಂದಿದೆ. 2020 ಜುಲೈ ನಿಂದ 2021 ಮಾರ್ಚ್ ವರೆಗೆ ದೂರುದಾರ ಮಹಿಳೆ ಆರೋಪಿ ಮಹಿಳೆಗೆ ಹಣ ನೀಡಿದ್ದಾಗಿ ತಿಳಿಸಿದ್ದಾರೆ. 13 ಬ್ಯಾಂಕ್ ಖಾತೆಗಳಿಂದ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿದ್ದಾಗಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೊನೆಗೆ ಇಷ್ಟೆಲ್ಲಾ ಹಣ ನೀಡಿದ್ದರು ಸಮಸ್ಯೆ ಪರಿಹಾರ ಆಗದ ಕಾರಣ ಅನುಮಾನ ಬಂದು ತನ್ನ ಪತಿಯೊಂದಿಗೆ ಆರೋಪಿತ ಮಹಿಳೆ ಮನೆಗೆ ತೆರಳಿ ಹಣ ಆಭರಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ದರ್ಪ ಮೆರೆದಿದ್ದಾರೆ. ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ರಂತೆ.

ಹೀಗಾಗಿ ಹಣ ಕಳೆದುಕೊಂಡು ನೊಂದಿರುವ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣ ಪಡೆದು ಮೋಸ ಮಾಡಿರುವುದು ಹಾಗೂ ಮಾನಹಾನಿ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕೇಸ್ ದಾಖಲಾಗಿದೆ. ಸದ್ಯ ದೂರು ಆಧರಿಸಿ ವಾಮಾಚಾರದ ಹೆಸರಲ್ಲಿ ವಂಚಿಸಿದ ಮಹಿಳೆ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿದರೆ ಪ್ರತಿಭಟನೆ ಅನಿವಾರ್ಯ! ಕರ್ನಾಟಕ ಸರ್ಕಾರಕ್ಕೆ ಸಿಟಿಜನ್ ರೈಟ್ಸ್ ಫೌಂಡೇಶನ್ ಎಚ್ಚರಿಕೆ