ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿದರೆ ಪ್ರತಿಭಟನೆ ಅನಿವಾರ್ಯ! ಕರ್ನಾಟಕ ಸರ್ಕಾರಕ್ಕೆ ಸಿಟಿಜನ್ ರೈಟ್ಸ್ ಫೌಂಡೇಶನ್ ಎಚ್ಚರಿಕೆ

TV9 Digital Desk

| Edited By: sandhya thejappa

Updated on: Oct 05, 2021 | 11:56 AM

ರೊನಾ ವೇಳೆ ಸರ್ಕಾರ ತಪ್ಪು ಹೆಜ್ಜೆ ಹಾಕಲು ಮುಂದಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನೂ ದೂರವಾಗಿಲ್ಲ. ಈ ವೇಳೆ ಶಾಲೆ ಆರಂಭಿಸುವುದು ಸರಿಯಲ್ಲ ಅಂತ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿದರೆ ಪ್ರತಿಭಟನೆ ಅನಿವಾರ್ಯ! ಕರ್ನಾಟಕ ಸರ್ಕಾರಕ್ಕೆ ಸಿಟಿಜನ್ ರೈಟ್ಸ್ ಫೌಂಡೇಶನ್ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us

ಬೆಂಗಳೂರು: ದಸರಾ ರಜೆ ಬಳಿಕ ಕಿರಿಯ ಪ್ರಾಥಮಿಕ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆ ಇಂದಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಆದರೆ ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆಯ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ಸಿಟಿಜನ್ ರೈಟ್ಸ್ ಫೌಂಡೇಶನ್ ವಿರೋಧ ವ್ಯಕ್ತಪಡಿಸಿದ್ದು, ಕೊರೊನಾ ವೇಳೆ ಸರ್ಕಾರ ತಪ್ಪು ಹೆಜ್ಜೆ ಹಾಕಲು ಮುಂದಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನೂ ದೂರವಾಗಿಲ್ಲ. ಈ ವೇಳೆ ಶಾಲೆ ಆರಂಭಿಸುವುದು ಸರಿಯಲ್ಲ ಅಂತ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಮಕ್ಕಳಿಗೆ ಕೊರೊನಾ ಲಸಿಕೆ ಕೂಡ ಇನ್ನೂ ಬಂದಿಲ್ಲ. ಈ ಪರಿಸ್ಥಿತಿಯಲ್ಲಿ ಶಾಲೆ ಆರಂಭಿಸುವುದು ಸರಿಯಲ್ಲ ಅಂತ ಸಿಎಂ ಬೊಮ್ಮಾಯಿ, ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ಗೆ ಪತ್ರ ಬರೆದಿರುವ ಬೆಂಗಳೂರು ಸಿಟಿಜನ್ ರೈಟ್ಸ್ ಫೌಂಡೇಷನ್, ಸರ್ಕಾರ ತಪ್ಪು ಹೆಜ್ಜೆ ಇಟ್ಟರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸಿಟಿಜನ್ ರೈಟ್ಸ್ ಫೌಂಡೇಷನ್ ಈ ಹಿಂದೆ ಜಿಂದಾಲ್ ಭೂ ಹಗರಣ ಕುರಿತಂತೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಸರ್ಕಾರದ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಿದ್ಧತೆ ನಡೆಸಿದೆ. ಕಿರಿಯ ಪ್ರಾಥಮಿಕ ಭೌತಿಕ ಶಾಲೆ ಆರಂಭಿಸಿದರೆ ಮತ್ತೊಂದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ

ರಾಜ್ಯಸಭೆಯ ಕೊನೆಯ 7 ಅಧಿವೇಶನಗಳಲ್ಲಿ ಶೇ100 ಹಾಜರಾತಿ ಪಡೆದ ಏಕೈಕ ಸಂಸದ ಎಸ್‌ ಆರ್ ಬಾಲಸುಬ್ರಮಣ್ಯಂ 

ಇಂದು ಲಖನೌಗೆ ಪ್ರಧಾನಿ ಮೋದಿ ಭೇಟಿ; ವಿವಿಧ ನಗರಾಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada