ಹೆಚ್ಚಾಗುತ್ತಿದೆ ಬೆಂಗಳೂರು ನಗರ ಕಮಿಷನರ್ ಬದಲಾವಣೆಯ ಮಾತು; ಶುರುವಾಗಿದೆ ದೊಡ್ಡ ಮಟ್ಟದ ಲಾಬಿ
ನಾಲ್ವರು ಅಧಿಕಾರಿಗಳಿಂದ ನಡೆಯುತ್ತಿದೆ ದೊಡ್ಡ ಮಟ್ಟದ ಲಾಬಿ ನಾಲ್ವರು ಅಧಿಕಾರಿಗಳು ಕಮಿಷನರ್ ಕುರ್ಚಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಕಮಲ್ ಪಂತ್ (Kamal Pant) ಬೆಂಗಳೂರು ನಗರ ಕಮಿಷನರ್ (Commissioner) ಆಗಿ ಒಂದು ವರ್ಷ ಪೂರೈಸಿದ್ದಾರೆ. ಈ ನಡುವೆ ಕಮಿಷನರ್ ಬದಲಾವಣೆಯ ಮಾತು ಹೆಚ್ಚಾಗುತ್ತಿದ್ದು, ಕಮಿಷನರ್ ಕುರ್ಚಿಗಾಗಿ ದೊಡ್ಡ ಮಟ್ಟದ ಲಾಬಿ ಶುರುವಾಗಿದೆ. ಕಮಲ್ ಪಂತ್ ಎಡಿಜಿಪಿಯಿಂದ ಡಿಜಿಯಾಗಿ ಬಡ್ತಿ ಪಡೆದಿದ್ದಾರೆ. 2021 ಏಪ್ರಿಲ್ನಲ್ಲಿ ಕಮಲ್ ಪಂತ್ ಡಿಜಿಯಾಗಿ ಬಡ್ತಿ ಪಡೆದಿದ್ದರು. ಡಿಜಿಯಾಗಿ ಬಡ್ತಿ ಪಡೆದಿದ್ದರು ಕಮಿಷನರ್ ಆಗಿ ಕಮಲ್ ಪಂತ್ ಮುಂದುವರೆದಿದ್ದಾರೆ. ಎಡಿಜಿಪಿ ರ್ಯಾಂಕ್ನಲ್ಲಿದ್ದವರು ಸಾಮಾನ್ಯವಾಗಿ ಕಮಿಷನರ್ ಆಗಿರುತ್ತಾರೆ. ಆದರೆ ಡಿಜಿಯಾಗಿ ಬಡ್ತಿ ಪಡೆದಿದ್ದರು ಕಮಲ್ ಪಂತ್ ಕಮಿಷನರ್ ಆಗಿ ಮುಂದುವರಿದಿದ್ದಾರೆ.
ನಾಲ್ವರು ಅಧಿಕಾರಿಗಳಿಂದ ನಡೆಯುತ್ತಿದೆ ದೊಡ್ಡ ಮಟ್ಟದ ಲಾಬಿ ನಾಲ್ವರು ಅಧಿಕಾರಿಗಳು ಕಮಿಷನರ್ ಕುರ್ಚಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಯ ಎಡಿಜಿಪಿ ದಯಾನಂದ್, ಸಿಐಡಿ ಎಡಿಜಿಪಿ ಉಮೇಶ್ ಕುಮಾರ್, ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್, ಕಾನೂನು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ದೊಡ್ಡ ಮಟ್ಟದ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎಡಿಜಿಪಿ ರ್ಯಾಂಕ್ ಅಧಿಕಾರಿಗಳನ್ನು ಕಮಿಷನರ್ ಮಾಡಿ ಎಂದು ಎಡಿಜಿಪಿ ರ್ಯಾಂಕ್ ಅಧಿಕಾರಿಗಳಿಂದಲೇ ಒತ್ತಡ ಹೆಚ್ಚಾಗುತ್ತಿದೆ. ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ನಗರ ಪೊಲೀಸ್ ಕಮಿಷನರ್ ಬದಲಾವಣೆ ಯೋಚನೆಯಲ್ಲಿದ್ದಾರೆ. ಯಾರನ್ನು ಕಮಿಷನರ್ ಮಾಡಬೇಕು ಎನ್ನುವ ಗೊಂದಲದಲ್ಲಿ ಬೊಮ್ಮಾಯಿ ಇದ್ದಾರೆ.
ದೊಡ್ಡ ಮಟ್ಟದ ಲಾಬಿ ಓರ್ವ ಎಡಿಜಿಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಿಎಂ ಪುತ್ರ ವಿಜಯೇಂದ್ರ ಮೂಲಕ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೋರ್ವ ಎಡಿಜಿಪಿಗೆ ದೆಹಲಿ ಮಟ್ಟದ ಬಿಜೆಪಿ ನಾಯಕರ ಬೆಂಬಲವಿದೆ. ಎಡಿಜಿಪಿ ಮಾವ ಬಿಹಾರ ರಾಜ್ಯದ ಲೋಕಸಭಾ ಸದಸ್ಯ. ಆ ಮೂಲಕ ಕೇಂದ್ರ ನಾಯಕರ ಮಟ್ಟದಿಂದ ಲಾಬಿ ನಡೆಯುತ್ತಿದೆ. ಮಗದೊಬ್ಬ ಎಡಿಜಿಪಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹೆಸರು ಸೂಚಿಸಿದ್ದಾರೆ. ಇನ್ನೋರ್ವ ಎಡಿಜಿಪಿಗೆ ಆರ್ಎಸ್ಎಸ್ ಬೆಂಬಲ ಸಿಗುತ್ತಿದೆ. ಅಲ್ಲದೇ ಬೆಂಗಳೂರಿನ ಖಡಕ್ ಪೊಲೀಸ್ ಆಫಿಸರ್ ಎಂಬ ಹೆಗ್ಗಳಿಕೆ ಇದೆ.
ಜನವರಿಯಲ್ಲಿ ಕಮಿಷನರ್ ಬದಲಾವಣೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆಗ ಇನ್ನೂ ಕೆಲವು ಅಧಿಕಾರಿಗಳಿಗೆ ಬಡ್ತಿ ಸಿಗಲಿದೆ. ಹಾಗಾಗಿ 2 ತಿಂಗಳು ಕಾದು ನೋಡುವ ತಂತ್ರವನ್ನು ಸಿಎಂ ಅನುಸರಿಸುತ್ತಿದ್ದಾರೆ. ಕಮಲ್ ಪಂತ್ ಕೂಡ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರೇ ಮುಂದುವರೆಯಲಿ ಎನ್ನುವ ಮಾಹಿತಿ ಕೂಡ ಇದೆ.
ಇದನ್ನೂ ಓದಿ