ಆರ್ ಆರ್ ನಗರನಲ್ಲಿ ರಾಜಾಕಾಲುವೆಯಿಂದ ನುಗ್ಗಿದ ನೀರು ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ಗಳು ಕೊಚ್ಚಿ ಹೋಗುವಂತೆ ಮಾಡಿದೆ!
ಕಾಲುವೆಯಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ. ಹಾಗಾಗೇ, ಕಾಲುವೆಯಲ್ಲಿ ಹರಿಯುತ್ತಿದ್ದ ನೀರು ಲೇ ಔಟ್ನೊಳಗೆ ನುಗ್ಗಿ 15 ಮನೆಗಳನ್ನು ಪ್ರವೇಶಿಸಿ ಅನಾಹುತ ಸೃಷ್ಟಿಸಿದೆ
ಬೆಂಗಳೂರಿನಲ್ಲಿ ರವಿವಾರ ಸಾಯಂಕಾಲದಿಂದ ತಡರಾತ್ರಿಯವರೆಗೆ ಸುರಿದ ಧಾರಾಕಾರ ಮಳೆ ನಗರದ ಹಲವು ಭಾಗಗಳಲ್ಲಿ ಅವಾಂತರಗಳನ್ನು ಸೃಷ್ಟಿಸಿದ ಹಾಗೆ ರಾಜರಾಜೇಶ್ವರಿ ನಗರದಲ್ಲೂ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ಜನ ಜಾಗರಣೆ ಮಾಡುವಂಥ ಸ್ಥಿತಿಯನ್ನು ನಿರ್ಮಿಸಿದೆ. ಸೋಮವಾರ ಬೆಳಗ್ಗೆಯೂ ಜನ ಮನೆಗಳಲ್ಲಿ ನುಗ್ಗಿದ ನೀರನ್ನು ಹೊರ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ಆರ್ ಆರ್ ನಗರದ ಪ್ರಮೋದ್ ಲೇ ಔಟ್.
ಇಲ್ಲಿನ ಸುಮಾರು 15 ಮನೆಗಳಿಗೆ ರಾತ್ರಿ ನೀರು ನುಗ್ಗಿದೆ. ಹಾಗೆ ನೋಡಿದರೆ, ಇಲ್ಲಿ ಮಳೆಯನ್ನು ದೂಷಿಸುವಂತಿಲ್ಲ. ಯಾಕೆಂದರೆ, ಮನೆಗಳಿಗೆ ನುಗಿದ್ದು ಮಳೆ ನೀರಲ್ಲ.
ಏರಿಯಾನಲ್ಲಿ ಹರಿದುಹೋಗುವ ರಾಜಾಕಾಲುವೆಗೆ ಒಂದು ತಡೆಗೋಡೆಯನ್ನು ಕಟ್ಟಲಾಗಿತ್ತು.
ಕಾಲುವೆಯಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ. ಹಾಗಾಗೇ, ಕಾಲುವೆಯಲ್ಲಿ ಹರಿಯುತ್ತಿದ್ದ ನೀರು ಲೇ ಔಟ್ನೊಳಗೆ ನುಗ್ಗಿ 15 ಮನೆಗಳನ್ನು ಪ್ರವೇಶಿಸಿ ಅನಾಹುತ ಸೃಷ್ಟಿಸಿದೆ. ಏನೆಲ್ಲ ಆಗಿದೆ ಅಂತ ನೀವೇ ನೋಡಿ.
ಒಂದು ಮನೆಯಲ್ಲಿ ಕಿಚನ್ ವರೆಗೂ ಹರಿದು ಬಂದಿರುವ ನೀರು, ಫ್ರಿಡ್ಜ್, ಗ್ಯಾಸ್ ಸಿಲಿಂಡರ್ ಜೊತೆ ಬೇರೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗುವಂತೆ ಮಾಡಿದೆ. ಮತ್ತೊಂದು ಮನೆಯಲ್ಲಿ ಪ್ರಸಾದನದ ಸಾಮಗ್ರಿಗಳು ನೀರಲ್ಲಿ ತೇಲಾಡುತ್ತಿವೆ. ಇನ್ನುಳಿದ ಮನೆಗಳಲ್ಲೂ ಇದೇ ಸ್ಥಿತಿ. ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.
ಇದನ್ನೂ ಓದಿ: Priyanka Gandhi: ಬಂಧನದ ಬಳಿಕ ಪೊರಕೆ ಹಿಡಿದು ಕಸ ಗುಡಿಸಿದ ಪ್ರಿಯಾಂಕಾ ಗಾಂಧಿ; ವೈರಲ್ ವಿಡಿಯೋ ಇಲ್ಲಿದೆ